Advertisement

ಕೂಳೂರು: ರಸ್ತೆ ಬದಿ ತ್ಯಾಜ್ಯ, ಕಸ, ಎಸೆಯುವವರಿಗೆ ದಂಡ

02:18 AM Jul 12, 2019 | sudhir |

ಕೂಳೂರು: ಇಲ್ಲಿನ ಅಂಗಡಿಯ ಅಳಿದುಳಿದ ವಸ್ತುಗಳನ್ನು ರಸ್ತೆ ಬದಿ ಎಸೆದು ಗಲೀಜು ಮಾಡಿದ ಕಾರಣಕ್ಕೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮಾಲಕರಿಗೆ 1,500 ರೂ. ದಂಡ ವಿಧಿಸಿದೆ.

Advertisement

ಬಂದರಿನಲ್ಲಿ ಕಸ ಎಸೆಯುವ ಅಂಗಡಿಗಳ ಮಾಲಕರಿಂದ 5 ಸಾವಿರ ರೂ. ದಂಡ ವಸೂಲಿ ಮಾಡಿದೆ.

ಈ ವಾರದಲ್ಲಿ ಒಟ್ಟು 25 ಸಾವಿರ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಮಹಾನಗರ ಪಾಲಿಕೆ ಮುಂದಿನ ದಿನಗಳಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ, ಇಲ್ಲವೆ ಕಸ ಎಸೆಯುವವರ ಗುರುತನ್ನು ಸಿಸಿ ಟಿವಿ ಮೂಲಕ ಪತ್ತೆ ಹಚ್ಚಿ ಭಾರೀ ಮೊತ್ತದ ದಂಡ ವಿಧಿಸಲಾಗುವುದು. ಸಾರ್ವಜನಿಕರು ಮನೆ ಮನೆ ತ್ಯಾಜ್ಯ ಸಂಗ್ರಹಕ್ಕೆ ಬರುವ ವಾಹನಕ್ಕೆ ಹಸಿ ಕಸ, ಒಣ ಕಸ ನೀಡಿ ಸಹಕರಿಸಬೇಕು ಎಂದು ಪಾಲಿಕೆ ಪರಿಸರ ಅಧಿಕಾರಿ ಮಧು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next