Advertisement

ಸಕಲ ಕಲಾವಲ್ಲಭ ಕೂಡ್ಲು ಸುಬ್ರಾಯ ಶ್ಯಾನುಭೋಗ್‌ “ಸಾಕ್ಷ್ಯಚಿತ್ರ”

11:53 PM Oct 23, 2020 | mahesh |

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಮಹಾನ್‌ ಕೊಡುಗೆ ನೀಡಿದ ಕೂಡ್ಲು ಸುಬ್ರಾಯ ಶ್ಯಾನುಭೋಗರ ಕುರಿತಾದ ಸಾಕ್ಷ್ಯಚಿತ್ರದ ಚಿತ್ರೀಕರಣ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

Advertisement

ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್‌ ಕೆಮರಾ ಚಾಲನೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಪತಿ ಅಡಿಗ, ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ, ಕೂಡ್ಲು ಮೇಳದಲ್ಲಿ ತಿರುಗಾಟ ನಡೆಸಿದ ಹಿರಿಯ ಕಲಾವಿದ ಕೂಡ್ಲು ಆನಂದ, ವಿಷ್ಣು ಶ್ಯಾನುಭೋಗ್‌ ವಿಷ್ಣುಮಂಗಲ, ಸಾಕ್ಷ್ಯ ಚಿತ್ರದ ನಿರೂಪಕ ಕೆ. ಜಗದೀಶ ಕೂಡ್ಲು , ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ, ಕಿಶೋರ್‌ ಕೂಡ್ಲು, ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರ್ಣ ಸ್ಟುಡಿಯೋದ ಉದಯ ಕಂಬಾರ್‌, ಶ್ರೀವತ್ಸ ಕುಂಚಿನಡ್ಕ ಚಿತ್ರೀಕರಣಕ್ಕೆ ನೇತೃತ್ವ ವಹಿಸಿದ್ದರು. ವಿಷ್ಣು ಶ್ಯಾನುಭೋಗ್‌ ಸ್ವಾಗತಿಸಿದರು. ಶ್ರೀಮುಖ ಮಯ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next