Advertisement

ಕೆಟ್ಟು ನಿಂತ ನೀರಿನ ಘಟಕ: ನಿವಾಸಿಗಳ ಹಿಡಿಶಾಪ

12:37 PM Apr 27, 2020 | Naveen |

ಕೂಡ್ಲಿಗಿ: ಪಟ್ಟಣದ ಎಲ್ಲ 20 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹಗಲಿರುಳು ಜನರು ನೀರಿನ ಕೊಳಾಯಿಗಳನ್ನು ಕಾಯುವ ಪರಿಸ್ಥಿತಿ ಇದೆ. ಓಣಿ ಓಣಿಗಳಲ್ಲಿ ಖಾಲಿ ಕೊಡಗಳ ಮೆರವಣಿಗೆ ಸಾಮಾನ್ಯ ದೃಶ್ಯವಾಗಿದೆ. ಈ ಪಟ್ಟಣದಲ್ಲಿ ಹಿಂದೆ ಸುಮಾರು 17 ಕುಡಿಯುವ ನೀರಿನ ಘಟಕಗಳು ಇದ್ದರೂ ಅವುಗಳಲ್ಲಿ ಈಗಾಗಲೇ ಏಳು ನೀರಿನ ಘಟಕಗಳು ಕೆಟ್ಟು ನಿಂತಿದೆ. ಜನಪ್ರತಿನಿಧಿಗಳ ಹಾಗೂ ಪಪಂ ಕಾರ್ಯವೈಖರಿ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ.

Advertisement

ಪಪಂಗೆ ಜನಪ್ರತಿನಿಧಿ ಗಳು ಆಯ್ಕೆಯಾಗಿ 4 ತಿಂಗಳು ಕಳೆದರೂ ಅಧ್ಯಕ್ಷ ಮತ್ತು ಉಪಧ್ಯಾಕ್ಷ ಸ್ಥಾನಕ್ಕೆ ನ್ಯಾಯಲಯದ ಮೆಟ್ಟಿಲು ಏರಿ ತಡೆಯಾಜ್ಞೆ ತಂದಿರುವ ಕಾರಣ ಇಂದು ಸ್ಥಳೀಯ ಆಡಳಿತವನ್ನು ತಹಶೀಲ್ದಾರ್‌ರು ನಿರ್ವಹಿಸುತ್ತಿದ್ದಾರೆ. ಅವರು ಕೆಲಸದ ಒತ್ತಡದ ಮಧ್ಯೆ ಇಡೀ ತಾಲೂಕು ಕಡೆ ಗಮನ ಹರಿಸಬೇಕಾಗಿದ್ದು, ಇದರಿಂದ ನಾವು ನೀರಿಗಾಗಿ ಪರದಾಟ ಮಾಡಬೇಕಾಗಿದೆ. ಒಂದು ಕಡೆ ಕೆಲಸ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಾವು ಈಗಾಗಲೇ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಿ ವಾರ್ಡ್‌ನಿಂದ ಕಳಿಸಿದ್ದೇವೆ. 4 ತಿಂಗಳಿನಿಂದ ನೀರು ಇದ್ದರೂ ಪಪಂ ಅಧಿಕಾರಿ ಮೋಟರ್‌ ಅಳವಡಿಸದೇ ಆಟವಾಡುತ್ತಿದ್ದಾರೆ. ಮುಖ್ಯಾಧಿಕಾರಿ ಬಳಿ ಕೇಳಿದರೆ ಸಬೂಬು ಹೇಳಿ ಕಳುಹಿಸುತ್ತಾರೆ.
-ಕೊಂಡಯ್ಯರ ರಾಘವೇಂದ್ರ,
ಗ್ರಾಮಸ್ಥ

ಪಪಂ ಮುಖ್ಯಾಧಿಕಾರಿಗಳು ಸದಸ್ಯರ ಗಮನಕ್ಕೆ ಬಾರದ ರೀತಿಯಲ್ಲಿ ಕೆಲವು ಟೆಂಡರ್‌ ಪ್ರಕ್ರಿಯೆಯನ್ನು ಶುರು ಮಾಡಿ ಸರ್ವಧಿಕಾರಿಯಂತೆ ಮೆರೆಯುತ್ತಿದ್ದಾರೆ.
ಅಧಿ ಕಾರ ಶಾಶ್ವತವಲ್ಲ ಮಾಡಿದ ಕೆಲಸ ಶಾಶ್ವತ.
ಕಾಲ್ಚಟ್ಟಿ ಈಶಪ್ಪ,
ಪಪಂ ಸದಸ್ಯ

ಪಟ್ಟಣ ಒಟ್ಟು 17 ಶುದ್ಧ ನೀರಿನ ಘಟಕಗಳನ್ನು ಒಳಗೊಂಡಿದ್ದು, ಅದರಲ್ಲಿ 2 ದುರಸ್ತಿಗೊಳಗಾಗಿವೆ. ಚಾವಡಿ ಬಳಿ ಹೊಸ ಬೋರ್‌ವೆಲ್‌ ಹಾಕಿಸಿ ಪ್ರಾರಂಭಿಸಬೇಕು. ಅಂಬೇಡ್ಕರ್‌ ಕಾಲೋನಿಯ ಆರ್‌ಓ ಪ್ಲಾಂಟ್‌ ಹಾಗೂ ಗೊವಿಂದಗಿರಿಯಲ್ಲಿ ನೀರೆ ಇಲ್ಲ. ಗೊವಿಂದಗಿರಿ ಶುದ್ಧ ನೀರಿನ ಘಟಕ ದುರಸ್ತಿಗೆ 5 ಲಕ್ಷದ 20 ಸಾವಿರ
ಹಣ ತೆಗೆದಿಡಲಾಗಿದೆ. ಸ್ಕೇರ್‌ ಸಿಟಿಯಲ್ಲಿ ಬರುವ ಹಣದಿಂದ ಇನ್ನು ಬಾಕಿ ಉಳಿದ 3 ಘಟಕಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
ಪಕೃದ್ದೀನ್‌,
ಪಪಂ ಮುಖ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next