Advertisement

ಬಳಕೆದಾರರಿಗೆ ಸ್ವಯಂ-ಪರಿಶೀಲನ ಫೀಚರ್ ಪರಿಚಯಿಸಿದ ‘ಕೂ’

12:22 PM Apr 09, 2022 | Team Udayavani |

ಬೆಂಗಳೂರು: ಸ್ವಪ್ರೇರಿತವಾಗಿ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದಾದ ಒಂದು ವಿಶಿಷ್ಟ ಫೀಚರ್ ಅನ್ನು ‘ಕೂ’ ಅಪ್ಲಿಕೇಶನ್  ಪರಿಚಯಿಸುತ್ತಿದ್ದು, ಈ ವೈಶಿಷ್ಟ್ಯವಿರುವ ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಎನಿಸಿಕೊಂಡಿದೆ.

Advertisement

ಯಾವುದೇ ಬಳಕೆದಾರ ಸರ್ಕಾರದಿಂದ ಅನುಮೋದಿಸಲ್ಪಟ್ಟ ಯಾವುದೇ ಗುರುತಿನ ಚೀಟಿ ಮೂಲಕ ಕೆಲವೇ ಕ್ಷಣಗಳಲ್ಲಿ ತಮ್ಮ ಪ್ರೊಫೈಲನ್ನು ಸ್ವಯಂ ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಹೆಜ್ಜೆಯು ಬಳಕೆದಾರರು ತಮ್ಮ ಖಾತೆಗಳ ದೃಢೀಕರಣವನ್ನು ಸಾಬೀತು ಪಡಿಸಲು ಬಲ ತುಂಬುತ್ತದೆ. ಅವರು ಹಂಚಿಕೊಳ್ಳುವ ಅಭಿಪ್ರಾಯ, ಆಲೋಚನೆಗಳಿಗೆ ವಿಶ್ವಾಸಾರ್ಹತೆಯನ್ನು ನೀಡುತ್ತದೆ.

ಖಾತೆಯು ಸ್ವಯಂ ಪರಿಶೀಲನೆಯಾಗಿದೆ ಎಂಬುದನ್ನು ಹಸಿರು ಟಿಕ್ ದೃಢಪಡಿಸುತ್ತದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ನಿಯಮ 4(7) ಕ್ಕೆ ಅನುಗುಣವಾಗಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಮೊದಲ ಮಹತ್ವದ ಸಾಮಾಜಿಕ ಮಾಧ್ಯಮ ‘ಕೂ’ ಆಗಿದೆ.

ಬಳಕೆದಾರರು ತಮ್ಮ ಸರ್ಕಾರಿ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ, ಓಟಿಪಿ ಯನ್ನು ನಮೂದಿಸಿ ಮತ್ತು ಯಶಸ್ವಿ ದೃಢೀಕರಣದ ನಂತರ, ತಮ್ಮ ಪ್ರೊಫೈಲ್‌ ನಲ್ಲಿ ಹಸಿರು ಟಿಕ್‌ನೊಂದಿಗೆ ಸ್ವಯಂ-ಪರಿಶೀಲನೆಯನ್ನು ಪಡೆಯುತ್ತಾರೆ. ಇಡೀ ಪ್ರಕ್ರಿಯೆಯು ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ದೃಢೀಕರಣ ಪ್ರಕ್ರಿಯೆಯನ್ನು ಸರ್ಕಾರದಿಂದ ಅಧಿಕೃತಗೊಂಡ ಮೂರನೇ ವ್ಯಕ್ತಿಗಳು ನಡೆಸುತ್ತಾರೆ. ಈ ಪ್ರಕ್ರಿಯೆಯ ಸಮಯದಲ್ಲಿ ‘ಕೂ ‘ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.

ವೇದಿಕೆಯಲ್ಲಿ ಬಳಕೆದಾರರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಸ್ವಯಂಪ್ರೇರಿತ ಸ್ವಯಂ ಪರಿಶೀಲನೆ – ದೃಢೀಕರಣವನ್ನು ಉತ್ತೇಜಿಸುವ ಮೂಲಕ ಆನ್ ಲೈನ್ ತಪ್ಪು ಮಾಹಿತಿ, ದ್ವೇಷದ ಮಾತು, ನಿಂದನೆಯನ್ನು ತಡೆಯುವಲ್ಲಿ ಸಹ ಮಹತ್ವದ ಹೆಜ್ಜೆಯಾಗುತ್ತದೆ.

Advertisement

‘ಕೂ’’ ಸಹ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಅವರು, ” ಕೂ ಸಾಮಾಜಿಕ ಮಾಧ್ಯಮದಲ್ಲಿ ನಂಬಿಕೆ ಮತ್ತು ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ. ಸ್ವಯಂ ಪರಿಶೀಲನಾ ವ್ಯವಸ್ಥೆಯನ್ನು ಪ್ರಾರಂಭಿಸುವ ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ನಾವು ತುಂಬಾ ಹೆಮ್ಮೆ ಪಡುತ್ತೇವೆ. ನಮ್ಮ ಸುರಕ್ಷಿತವಾದ ಪರಿಶೀಲನಾ ಪ್ರಕ್ರಿಯೆಯ ಮೂಲಕ ಬಳಕೆದಾರರು ಕೆಲವೇ ಕ್ಷಣಗಳಲ್ಲಿ ಸ್ವಯಂ ಪರಿಶೀಲಿಸಲ್ಪಡಬಹುದು. ಇದು ಬಳಕೆದಾರರಿಗೆ ಹೆಚ್ಚಿನ ದೃಢೀಕರಣವನ್ನು ನೀಡುವ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ವೇದಿಕೆಯಲ್ಲಿ ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ. ಹೆಚ್ಚಿನ ಸಾಮಾಜಿಕ ಮಾಧ್ಯಮಗಳು ಕೆಲವು ಖಾತೆಗಳಿಗೆ ಮಾತ್ರ ಈ ಅಧಿಕಾರವನ್ನು ನೀಡುತ್ತವೆ, ಆದರೆ ಕೂ ಪ್ರತಿಯೊಬ್ಬರಿಗೂ ಒಂದೇ ರೀತಿಯ ಸವಲತ್ತು ಹೊಂದಲು ಪ್ರತಿಯೊಬ್ಬ ಬಳಕೆದಾರರಿಗೂ ಅವಕಾಶ ನೀಡಿದ ಮೊದಲ ವೇದಿಕೆಯಾಗಿದೆ.” ಎಂದು ಹೇಳಿದರು.

ಸ್ವಪ್ರೇರಿತ ಸ್ವಯಂ-ಪರಿಶೀಲನೆ FAQ ಗಳು

  1. ಕೂ ಯಾವುದೇ ರೀತಿಯ ಬಳಕೆದಾರರ ವಿವರಗಳನ್ನು ಸಂಗ್ರಹಿಸುತ್ತದೆಯೇ?

ಇಲ್ಲ. ಕೂ ಬಳಕೆದಾರರಿಗೆ ಸಂಬಂಧಿಸಿದ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ. ವಿವರಗಳನ್ನು ದೃಢೀಕರಿಸಲು ಸರ್ಕಾರದಿಂದ ಅನುಮೋದಿತಗೊಂಡ ಮೂರನೇ ವ್ಯಕ್ತಿಯ ಸೇವೆಗಳನ್ನು ಬಳಸಲಾಗುತ್ತದೆ.

  1. ದೃಢೀಕರಣದ ನಂತರ ನನ್ನ ಗುರುತಿನ ಚೀಟಿಯ ವಿವರಗಳು ಕೂ ನಲ್ಲಿ ಕಾಣಿಸುತ್ತದೆಯೇ?

ಇಲ್ಲ. ಇದು ಬಳಕೆದಾರರ ಸತ್ಯಾಸತ್ಯತೆಯನ್ನು ದೃಢೀಕರಿಸಲು ಮಾತ್ರ ಬಳಸಲಾಗುತ್ತದೆ.

  1. ಇತರ ಬಳಕೆದಾರರು ನನ್ನ ಹೆಸರು ಮತ್ತು ಗುರುತಿನ ಚೀಟಿಯ ವಿವರಗಳನ್ನು ತಿಳಿಯುತ್ತಾರೆಯೇ?

ಇಲ್ಲ. ಬಳಕೆದಾರರ ಪ್ರೊಫೈಲ್‌ ನಲ್ಲಿನ ವಿವರಗಳು ಪರಿಶೀಲನೆಯ ಮೊದಲು ಇದ್ದಂತೆಯೇ ಇರುತ್ತವೆ.

  1. ಕೂ ನಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಗುರುತಿನ ಚೀಟಿಯ ವಿವರಗಳನ್ನು ನಮೂದಿಸುವುದು ಸುರಕ್ಷಿತವೇ?

ಹೌದು. ಕೂ ನಲ್ಲಿನ ಸ್ವಯಂಪ್ರೇರಿತ ಸ್ವಯಂ ಪರಿಶೀಲನೆಯ ಪ್ರಕ್ರಿಯೆಯು ಸುರಕ್ಷಿತವಾಗಿದೆ. ಈ ಸ್ವಯಂ ಪರಿಶೀಲನಾ ಪ್ರಕ್ರಿಯೆಯನ್ನು ಸರ್ಕಾರದಿಂದ ಅಧಿಕೃತಗೊಂಡ ಮೂರನೇ ವ್ಯಕ್ತಿಗಳು ನಡೆಸುತ್ತಾರೆ. ಕೂ ಬಳಕೆದಾರರ ಡೇಟಾವನ್ನು ಸಂಗ್ರಹಿಸುವುದಿಲ್ಲ.

  1. ಬಳಕೆದಾರರು ಇದನ್ನು ಏಕೆ ಮಾಡಬೇಕು?

ಅವನ/ಅವಳ ಪ್ರೊಫೈಲ್ ಅನ್ನು ಪರಿಶೀಲಿಸುವ ಬಳಕೆದಾರರನ್ನು ಅಧಿಕೃತ ಬಳಕೆದಾರ ಎಂದು ಗುರುತಿಸಲಾಗುತ್ತದೆ, ಅದು ಅವರ ಆಲೋಚನೆಗಳು ಮತ್ತು ಅಭಿಪ್ರಾಯಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಸ್ವಯಂಪ್ರೇರಿತ ಸ್ವಯಂ ಪರಿಶೀಲನೆಯು ವೇದಿಕೆಯಲ್ಲಿ ನಿಜವಾದ ಧ್ವನಿಗಳನ್ನು ಉತ್ತೇಜಿಸುತ್ತದೆ. ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪ್ರಖ್ಯಾತ ಖಾತೆಗಳಿಗೆ ಮಾತ್ರ ಲಭ್ಯವಿದ್ದ ಪರಿಶೀಲನೆಯ ಅದೇ ಸವಲತ್ತನ್ನು ಇದು ಅವರಿಗೆ ನೀಡುತ್ತದೆ.

Voluntary Self Verification

‘ಕೂ’ ಬಗ್ಗೆ

‘ಕೂ’ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ – ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್. ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ. ಕೂ ನಲ್ಲಿನ ನವೀನ ವೈಶಿಷ್ಟ್ಯಗಳಲ್ಲಿ, ವೇದಿಕೆಯ ಅನುವಾದ ವೈಶಿಷ್ಟ್ಯವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭವನ್ನು ಉಳಿಸಿಕೊಂಡು ಭಾರತೀಯ ಭಾಷೆಗಳಾದ್ಯಂತ ಪೋಸ್ಟ್‌ನ ನೈಜ-ಸಮಯದ ಅನುವಾದಕ್ಕೆ ಅನುಕೂಲಕರವಾಗಿದೆ. ಇದು ಭಾಷೆಗಳಾದ್ಯಂತ ಜನರ ತಲುಪುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಆಕರ್ಷಣೆಯನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ 20 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ, ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಾಷೆಯಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next