ನವದೆಹಲಿ: ಉದ್ಯಮಿ ಇಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿ ಮಾಡಿ, ಹಲವು ಬದಲಾವಣೆಗಳಿಗೆ ಶ್ರೀಕಾರ ಹಾಕುತ್ತಿದ್ದಾರೆ. ಅದಕ್ಕೆ ಪ್ರತಿಸ್ಪರ್ಧಿಯಾಗಿ ಇರುವ ಭಾರತದ “ಕೂ’ ಸಾಮಾಜಿಕ ತಾಣದ ಆ್ಯಪನ್ನು 5 ಕೋಟಿ ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಈ ಮೂಲಕ ಅದನ್ನು ಬಳಕೆ ಮಾಡು ವವರ ಸಂಖ್ಯೆ ಏರಿಕೆಯಾ ಗುತ್ತಿದೆ. ಮುಂದಿನ ವಾರದಿಂದ ಬ್ಲೂಟಿಕ್‌ಗೆ 8 ಡಾಲರ್ ಶುಲ್ಕ ಪಾವತಿ ಮಾಡ ಬೇಕು ಎಂದು ಹೇಳಿರುವಂತೆಯೇ ಈ ಬೆಳವ ಣಿಗೆಯಾಗಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿ ರುವ ಕಂಪನಿಯ ಸಂಸ್ಥಾಪಕ ಅಪ್ರಮೇಯ ರಾಮಕೃಷ್ಣ “5 ಕೋಟಿ ಮಂದಿ ನಮ್ಮ ಆ್ಯಪ್ ಡೌನ್‌ಲೋಡ್ ಮಾಡಿದ್ದು ಸಂತಸ ತಂದಿದೆ. ಭಾರತೀಯರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದೇವೆ ಎಂಬ ಹೆಮ್ಮೆ ಇದೆ’ ಎಂದರು.
ಮುಂದಿನ ವಾರದಿಂದ?: ಮುಂದಿನ ವಾರದಿಂದಲೇ ಟ್ವಿಟ ರ್‌ನಲ್ಲಿ ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್ ಹೊಂದಲು ಒಂದು ತಿಂಗಳಿಗೆ 8 ಡಾಲರ್ ಪಾವತಿಸಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ. ಈ ನಡುವೆ ಒಟ್ಟು 3,700 ಮಂದಿಯನ್ನು ಟ್ವಿಟರ್‌ನಿಂದ ತೆಗೆದು ಹಾಕಲು ಪ್ರಯತ್ನಗಳು ನಡೆದಿವೆ.
ಕಚೇರಿಯಿಂದಲೇ ಕೆಲಸ: ಉದ್ಯೋಗಿಗಳು ಕಚೇರಿ ಯಿಂದಲೇ ಕೆಲಸ ಮಾಡಬೇಕು. ವಾರದಲ್ಲಿ ಕನಿಷ್ಠ 40 ತಾಸು ಕಚೇರಿಯಲ್ಲಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಬಹುದು,’ ಎಂದು ಸೂಚಿಸಲಾಗಿದೆ. ಡೆಡ್‌ಲೈನ್‌ನಲ್ಲಿ ಕೆಲಸ ಪೂರೈಸಬೇಕಾದ ಅನಿವಾರ್ಯ ತೆಯಲ್ಲಿ ಟ್ವಿಟರ್ ಉದ್ಯೋಗಿಗಳು ಕಚೇರಿಯಲ್ಲೇ ಮಲಗಿ, ನಂತರ ಪುನಃ ಎದ್ದು ಕೆಲಸ ಮಾಡುತ್ತಿದ್ದಾರೆ.
ಟ್ವಿಟರ್‌ನ ಪ್ರೊಡಕ್ಷನ್ ಮ್ಯಾನೇಜ್ಮೆಂಟ್ ವಿಭಾಗದ ನಿರ್ದೇಶಕಿ ಈಸ್ಟರ್ ಕ್ರಾಫìಡ್ ಅವರು ಸ್ಲಿàಪಿಂಗ್ ಬ್ಯಾಗ್ ಮತ್ತು ಐ ಮಾಸ್ಕ್ನೊಂದಿಗೆ ಕಚೇರಿಯಲ್ಲಿ ಮಲಗಿರುವ ಪೋಟೋ ವೈರಲ್ ಆಗಿದೆ.
ಟ್ರಂಪ್ ಖಾತೆ ಮತ್ತೆ ಆ್ಯಕ್ಟಿವ್? :
ಸದ್ಯ ಟ್ವಿಟರ್‌ನಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೆ ಎಂಟ್ರಿ ಸಿಗುವ ಸಾಧ್ಯತೆ ಇದೆ. “ಇನ್ನು ಕೆಲವೇ ವಾರಗಳು, ನಂತರ ಸಂಪೂರ್ಣ ಪರಿಶೀಲನೆಯ ನಂತರ ಬ್ಯಾನ್ ಆದ ಖಾತೆಗಳನ್ನು ಆಕ್ಟಿವ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತದೆ ಇದೆ ಎಂದು ಎಲಾನ್ ಮಸ್ಕ್ ಹೇಳಿರುವ ಹಿನ್ನೆಲೆಯಲ್ಲಿ ಈ ಸಾಧ್ಯತೆಗಳು ದಟ್ಟವಾಗಿವೆ.