Advertisement

ಸೆ. 20-21ರಂದು ಕೊಣ್ಣೂರು ನುಡಿ ಸಮ್ಮೇಳನ

10:11 AM Aug 26, 2019 | Team Udayavani |

ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯಲ್ಲಿ ಸೆ. 20 ಮತ್ತು 21ರಂದು ನಡೆಯಲಿರುವ ಕೊಣ್ಣೂರು ನುಡಿ ಸಡಗರ ಸಮ್ಮೇಳನದ ಪೂರ್ವಭಾವಿ ಸಭೆ ಯಲ್ಲಟ್ಟಿಯ ಕೊಣ್ಣೂರು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಿತು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ| ಬಸವರಾಜ ಕೊಣ್ಣೂರ ಮಾತನಾಡಿ, ಈ ಭಾಗದಲ್ಲಿ ನಡೆಯುತ್ತಿರುವ ಬೃಹತ್‌ ಅಕ್ಷರ ಜಾತ್ರೆ ಇದಾಗಿದ್ದು, ಮಲೆನಾಡಿನ ಆಳ್ವಾಸ ನುಡಿ ಸಡಗರದ ಮಾದರಿಯಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ. ನಾಡಿನ ಎಲ್ಲ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 3ನೇ ಕೊಣ್ಣೂರು ನುಡಿ ಸಡಗರ ಸಾಹಿತ್ಯ ಸಮ್ಮೇಳನ ನಾಡಿನ ಹಿರಿಯ ಸಾಹಿತಿ ಡಾ| ಸಿದ್ದಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.

ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಜಿ. ಎಸ್‌. ವಡಗಾವಿ, ನಿವೃತ್ತ ಉಪಪ್ರಾಚಾರ್ಯ ಎಸ್‌. ಬಿ. ಹಾವಿನಾಳ, ನಿವೃತ್ತ ಪ್ರಾಚಾರ್ಯ ಡಾ| ಎಸ್‌.ಬಿ. ಮಟೋಳಿ, ಮಹಿಳಾ ಸಾಹಿತಿ ಡಾ| ಶಾರದಾ ಮಳ್ಳೂರ, ಚಂದ್ರಪ್ರಭಾ ಬಾಗಲಕೋಟ, ಮಲ್ಲಿಕಾರ್ಜುನ ಹೆಗ್ಗಳಗಿ, ಎಚ್. ಎಸ್‌. ತೆಗ್ಗಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಮಖಂಡಿ ಘಟಕದ ಅಧ್ಯಕ್ಷ ಸಿ.ಎಸ್‌. ಝಳಕಿ, ಎಂ. ಸಿ. ಗೊಂದಿ, ಪ್ರಕರ್ತರ ಸಂಘದ ಅಧ್ಯಕ್ಷ ಕಿರಣ ಆಳಗಿ ಇದ್ದರು.

ಪ್ರೊ| ಚಂದ್ರಕಾಂತ ಹೊಸೂರ ಸ್ವಾಗತಿಸಿದರು.ಕಾರ್ಯದರ್ಶಿ ಎಸ್‌. ಎಂ. ದಾಶ್ಯಾಳ ನಿರೂಪಿಸಿದರು. ಸಾಗರ ಬಾಡಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next