Advertisement

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

05:04 PM Nov 11, 2024 | Team Udayavani |

ಉದಯವಾಣಿ ಸಮಾಚಾರ
ಲೋಕಾಪುರ: ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದ್ದು, ಸಂಚಾರಕ್ಕೆ ಕಿರಿಕಿರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲೇ ದನಗಳು ಬೀಡು ಬಿಡುತ್ತಿರುವುದರಿಂದ ಸಂಚಾರಕ್ಕೆ ದೊಡ್ಡ ಅಡಚಣೆಯಾಗುತ್ತಿದೆ. ಬೈಕ್‌ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳು ದನಗಳ ಕಾಟಕ್ಕೆ ಬೇಸತ್ತು
ಹೋಗಿದ್ದು, ಸಂಚರಿಸಲು ಪರದಾಡುವಂತಾಗಿದೆ.

Advertisement

ಪಟ್ಟಣದ ಬಸವೇಶ್ವರ ಸರ್ಕಲ್‌, ಮುಧೋಳ ರಸ್ತೆ, ತರಕಾರಿ ಮಾರುಕಟ್ಟೆ, ಪ್ರಮುಖ ರಸ್ತೆಗಳ ಬಳಿ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಬಸವೇಶ್ವರ ಸರ್ಕಲ್‌ ಬಳಿ ಪೊಲೀಸ್‌ ಸಿಬ್ಬಂದಿ ದನಗಳನ್ನು ರಸ್ತೆಯಿಂದ ಹೊರಹಾಕಿ ಸಂಚಾರ ಸುಗಮಗೊಳಿಸಲು ಪರದಾ ಡುವಂತಾಗಿದೆ. ಪಟ್ಟಣ ಪಂಚಾಯಿತಿಯವರು ಸಂಬಂಧಿಸಿದವರಿಗೆ ನೋಟಿಸ್‌ ಜಾರಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.

ಆದರೆ, ದನಗಳ ಕಾಟ ಮಾತ್ರ ಇನ್ನೂ ತಪ್ಪಿಲ್ಲ. ಖರೀದಿಸಿದ ತರಕಾರಿ, ಸಂತೆಯನ್ನು  ತೆಗೆದುಕೊಂಡು ಮನೆಗೆ ತೆರಳಲು
ಭಯಪಡುವಂತಾಗಿದ್ದು, ಓಡಾಟಕ್ಕೂ ಅವಕಾಶವಿಲ್ಲದಂತಾಗಿದೆ. ರಸ್ತೆಯ ಮೇಲೆ ದಿನಗಳ ಕಾಟ ತಪ್ಪಿಸಿ ಜನಸಾಮಾನ್ಯರು
ಮುಕ್ತವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ದನಗಳನ್ನು ರಸ್ತೆಗೆ ಬಿಡದಂತೆ ಈಗಾಗಲೇ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದು, ಮಾಹಿತಿ ಕೊಟ್ಟಿದ್ದೇವೆ. ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ಬಿಡಾಡಿ ಹಾಗೂ ಮಾಲ್ಕಿ ದನಗಳನ್ನು ರಸ್ತೆಗೆ ಬಿಡಬಾರದು. ತಮ್ಮ ಜಾಗೆಯಲ್ಲಿ
ಕಟ್ಟಿಹಾಕಬೇಕು.
ಜ್ಯೋತಿ ಉಪ್ಪಾರ, ಮುಖ್ಯಾಧಿಕಾರಿ,
ಪಟ್ಟಣ ಪಂಚಾಯಿತಿ ಲೋಕಾಪುರ

ಬಿಡಾಡಿ ದನಗಳ ಹಾವಳಿಯಿಂದ ತರಕಾರಿ ಮಾರುಕಟ್ಟೆ ಹಾಗೂ ಬಜಾರ್‌ನಲ್ಲಿ ಸಾಕಷ್ಟು ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಈಶ್ವರ ಹವಳಖೋಡ, ಕಿರಾಣಿ ವರ್ತಕ

Advertisement

■ ಸಲೀಂ ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next