ಕೊಣ್ಣೂರು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಸಕ್ಕರೆ ನಾಡಿನಲ್ಲಿ ದಶಕದಿಂದ ಅಕ್ಷರ ಕ್ರಾಂತಿ ಮಾಡುತ್ತಿದ್ದು, ಉತ್ತರ ಕರ್ನಾಟಕದ ಮನೆ ಮಾತಾಗಿದೆ. ಇದಕ್ಕೆಲ್ಲ ಪ್ರೊ.ಬಸವರಾಜ ಕೊಣ್ಣೂರ ಕಾರಣೀಕರ್ತರಾಗಿದ್ದಾರೆ.
ಸರಕಾರಿ ನೌಕರಿ ಪಡೆದು 19 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು ತಮ್ಮದೇ ಕನಸಿನ ಹೈಟೆಕ್ ವಿಜ್ಞಾನ ಮಹಾವಿದ್ಯಾಲಯ ಆರಂಭಿಸಿದರು. ಸಂಸ್ಥೆಯ ಚೇರ್‌ಮನ್ನರಾಗಿ ಶ್ರೀಮತಿ ದೀಪಾ ಬ. ಕೊಣ್ಣೂರ ಅವರು ಕಾರ್ಯ ನಿರ್ವಹಿಸಿದರೆ, ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತ ಅವರ ಸಹೋದರನಾದ ಭರಮಪ್ಪ ಕೊಣ್ಣೂರ ಕಾರ್ಯದರ್ಶಿಯಾಗಿ, ಪುತ್ರ ಶೀತಲ್ ಕೊಣ್ಣೂರ ಆಡಳಿತಾಧಿ ಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಗತಿ ಪಥದಲ್ಲಿ ಮಹಾವಿದ್ಯಾಲಯ: ಕಾಲೇಜು ಆರಂಭವಾದ 2 ನೇ ವಸಂತದಲ್ಲಿ ವಿದ್ಯಾಕಾಶಿ ಧಾರವಾಡದ ಗಿರಿನಗರದಲ್ಲಿ ಆರ್ಯಭಟ ವಿಜ್ಞಾನ ಪಪೂ ಮಹಾವಿದ್ಯಾಲಯ ಸ್ಥಾಪನೆಯಾಯಿತು. 2015ರ ಶೈಕ್ಷಣಿಕ ವರ್ಷದಲ್ಲಿ ಪ್ರತೀಕ ಬಾರಗೆ585/600 ಅಂಕ ಪಡೆದುಧಾರವಾಡ ಸಿಟಿಗೆ 2ನೇ ರ್‍ಯಾಂಕ್ ಪಡೆದಿದ್ದಾನೆ. ಕುಮಾರ ರಮೇಶ ಬಸೆಟ್ಟಿ-2019ರ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 298ನೇ ರ್‍ಯಾಂಕ್,ಅಗ್ರಿಯಲ್ಲಿ-64 ರ್‍ಯಾಂಕ್ ಹಾಗೂ ಜೆಇಇ ಪರೀಕ್ಷೆಯಲ್ಲಿ ಶೇ.98.85 ಪಡೆದಿದ್ದಾನೆ. ಮಹಾವಿದ್ಯಾಲಯ ಪಿಯು ಕಾಲೇಜು ಶಿಕ್ಷಣಕ್ಕೆ ಪೂರಕವಾಗಿ ಕೊಣ್ಣೂರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸಿತು. 2016ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಮಾರ ಅಭಿಷೇಕ ಗೊಡ್ಡಾಳೆ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾನೆ.
ದಶಕದ ಶೈಕ್ಷಣಿಕ ಪ್ರಗತಿಯ ಪಕ್ಷಿನೋಟ: ಮಹಾವಿದ್ಯಾಲಯದಲ್ಲಿ ಸ್ವತ್ಛ ಪರಿಸರ, ಐಐಖತರಬೇತಿ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ವಿಶೇಷ ಹವಾನಿಯಂತ್ರಿತ ಕೊಠಡಿ(ಅಇ ROOM), ಖಅಆ ಔಅಆ, ಶುದ್ಧ ಕುಡಿಯುವ ನೀರು, ಹೈಟೆಕ್ ಪ್ರಯೋಗಾಲಯ, ಪ್ರತಿ ವರ್ಗ ಕೋಣೆಗೂ ಸಿಸಿ ಕ್ಯಾಮರಾ, ಪ್ರತಿ ಕ್ಲಾಸ್‌ರೂಮ್‌ನಲ್ಲಿ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ಮಹಾವಿದ್ಯಾಲಯಕ್ಕೆ ಸೋಲಾರ್‌ನಿಂದ ವಿದ್ಯುತ್ ಪೂರೈಸಲಾಗುತ್ತದೆ. ಇವೆಲ್ಲ ಸೌಲಭ್ಯಗಳು ಇರುವುದರಿಂದಲೇ ಕು. ಬಸವರಾಜ ವಾಲಿ ಎಂಬ ವಿದ್ಯಾರ್ಥಿ 2017-18ನೇ ಸಾಲಿನಲ್ಲಿ ಥೇರಿ ವಿಷಯದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಕಳೆದ ಬಾರಿ ಮಹಾಲಿಂಗ ದೈವಜ್ಞ ಇಂಜಿನಿಯರಿಂಗ್ ವಿಭಾಗದಲ್ಲಿ 22ನೇ ರ್‍ಯಾಂಕ್, ಮಹಾದೇವ ರೊಡ್ಡನ್ನವರ ಪಶು ವೈದ್ಯಕೀಯದಲ್ಲಿ 30ನೇ ರ್‍ಯಾಂಕ್, ಬಿಎಸ್‌ಸಿ ಅಗ್ರಿಯಲ್ಲಿ 68ನೇ ರ್‍ಯಾಂಕ್, ಕುಮಾರಿ ಆಕಾಂûಾ ರುದ್ರಾಕ್ಷಿ ಆರ್ಕಿಟೆಕ್ಟ್ ಇಂಜಿನಿಯರಿಂಗ್‌ನಲ್ಲಿ 94ನೇ ರ್‍ಯಾಂಕ್, ಶಿವಾನಂದ ಹಂಪನ್ನವರ ಇಂಜಿನಿಯರಿಂಗ್‌ನಲ್ಲಿ-156ನೇ ರ್‍ಯಾಂಕ್, ಐಶ್ವರ್ಯ ಸಿಂಧೂರ ಬಿಎಸ್‌ಸಿ ಅಗ್ರಿಯಲ್ಲಿ 90 ನೇ ರ್‍ಯಾಂಕ್, ವೈದ್ಯಕೀಯದಲ್ಲಿ 202 ರ್‍ಯಾಂಕ್, ಪಾಂಡುರಂಗ ಕಂಬಳಿ ವೈದ್ಯಕೀಯದಲ್ಲಿ-214ನೇ ರ್‍ಯಾಂಕ್ ಪಡೆಯಲು ಸಹಾಯಕವಾಗಿದೆ. 2017-18ನೇ ಸಾಲಿನಲ್ಲಿ ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಕು. ಶ್ರೀಧರ ಕುರಿ-209ನೇ ರ್‍ಯಾಂಕ್, ದಿಕೇಶವ ಭಟ್ಟಡ-273ನೇ ರ್‍ಯಾಂಕ್, ವೈಭವ ಕುಲಕರ್ಣಿ-331ನೇ ರ್‍ಯಾಂಕ್, ಬಸವರಾಜ ವಾಲಿ-437 ನೇ ರ್‍ಯಾಂಕ್, ಸೌರಭ ಪಾಟೀಲ-625 ನೇ ರ್‍ಯಾಂಕ್, ಬಸವರಾಜ ವಾಲಿ ಬಿಎಸ್‌ಸಿ ಅಗ್ರಿಯಲ್ಲಿ-82ನೇ ರ್‍ಯಾಂಕ್ ಮತ್ತು ಬಿಎಸ್‌ಸಿ ವೆಟರ್‌ನರಿ-211ನೇ ರ್‍ಯಾಂಕ್ ಪಡೆದಿದ್ದಾರೆ.
2018-19ನೇ ಸಾಲಿನಲ್ಲಿ ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಕು. ಕಿಶನ್ ಭಂಡಾರಕವಟೆ-168ನೇ ರ್‍ಯಾಂಕ್, ಅಗ್ರಿಯಲ್ಲಿ-98ನೇ ರ್‍ಯಾಂಕ್, ಜೆಇಇ ಪರೀಕ್ಷೆಯಲ್ಲಿ ಶಿವರಾಜ್ ಹರೋಳೆ-306ನೇ ರ್‍ಯಾಂಕ್, ನೀಟ್ -78ನೇ (ಖೀR/ಕಏ) ರ್‍ಯಾಂಕ್ ಪಡೆದಿದ್ದಾರೆ. 2019-20ನೇ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ಕು. ರಾಮನಗೌಡ ವೆಂಕಟೇಶ ಪಾಟೀಲ-98.35(591/750), ವಿನಾಯಕ ಖೋತ್ -98.16 (590/750), ಅನುಷಾ ಮಠದ-95.67 (574/750)ಪಡೆದಿದ್ದಾರೆ. 30ಕ್ಕೂ ಅ ಧಿಕ ವಿದ್ಯಾರ್ಥಿಗಳು ಮೆಡಿಕಲ್, ಡೆಂಟಲ್, 60ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಫಾರ್ಮಾಸೈನ್ಸ್, 350 ಕ್ಕೂ ಹೆಚ್ಚು ಇಂಜಿನಿಯರಿಂಗ್, 03 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್-2020 ಪರೀಕ್ಷೆಯಲ್ಲಿ ಸಾಧನೆಗೈದ್ದಾರೆ.