Advertisement
ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ – ಕುಡ್ಗಿತ್ಲುವಿನಲ್ಲಿ ರೈತರೇ ಹಣ ಒಟ್ಟು ಮಾಡಿ, ಕೆರೆ ಬದಿಯ ಹೂಳೆತ್ತಿ, ಮಳೆಗಾಲದಲ್ಲಿ ಕೃತಕ ನೆರೆಯಾಗುವುದನ್ನು ತಪ್ಪಿಸುವ ಕಾರ್ಯ ಮಾಡಿದ್ದಾರೆ.
ತುಂಬಿಕೊಂಡಿದ್ದಲ್ಲದೆ, ಹೂಳು ತುಂಬಿಕೊಂಡಿತ್ತು. ಇದರಿಂದ ಈ ಕಾಲುವೆಯಲ್ಲಿ ಮಳೆ ನೀರು ಸರಾಗ ಹರಿದುಹೋಗಲು ಸಮಸ್ಯೆಯಾಗುತ್ತಿತ್ತು. ಈ ಭಾಗದ ಪೂರ್ತಿ ಮಳೆ ನೀರು ಹರಿದು ಸೌಪರ್ಣಿಕಾ ನದಿಗೆ ಸೇರಲು ಇರುವುದು ಇದೊಂದೇ ತೋಡು.
ಇದರಿಂದ ಪ್ರತೀ ವರ್ಷ ಇಲ್ಲಿ ಕೃತಕ ನೆರೆ ಉಂಟಾಗಿ, ನೂರಾರು ಎಕ್ರೆ ಕೃಷಿ ಭೂವಿ ಜಲಾವೃತಗೊಂಡು, ಬೆಳೆ ನಾಶವಾಗುತ್ತಿತ್ತು. ಮುಂಗಾರಿನಲ್ಲಿ ಬೆಳೆದ ಬೆಳೆ ಪೂರ್ತಿ ಮಳೆಗೆ ಆಹುತಿಯಾಗುತ್ತಿತ್ತು. ಕೋಣ್ಕಿ ಹಾಗೂ ಕುಡ್ಗಿತ್ಲು ಎರಡೂ ಪ್ರದೇಶಗಳು ಸೇರಿ ನೂರಾರು ಎಕ್ರೆ ಗದ್ದೆಗಳಿದ್ದು, ಸುಮಾರು 100ಕ್ಕೂ ಮಿಕ್ಕಿ ರೈತರು ಮುಂಗಾರಿನಲ್ಲಿ ಭತ್ತದ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಕಾಲುವೆಯಲ್ಲಿ ಹೂಳು
ತುಂಬಿ, ರೈತರು ಲಾಭಕ್ಕಿಂತ ನಷ್ಟವನ್ನೇ ಅನುಭವಿಸುವಂತಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪಂಚಾಯತ್‌ಗೆ ಅನೇಕ ಬಾರಿ ಈ ಕಾಲುವೆಯ ಹೂಳೆತ್ತಿ, ಕಸ, ಗಿಡಗಂಟಿ ತೆಗೆಯಲು ಮನವಿ ಕೊಟ್ಟರೂ, ಯಾರೂ ಕೂಡ ಈ ಬಗ್ಗೆ ಸ್ಪಂದಿಸಿಲ್ಲ ಎನ್ನುವುದಾಗಿ ಊರವರು ದೂರಿಕೊಂಡಿದ್ದಾರೆ.
Related Articles
ನಾವು ಅನೇಕ ವರ್ಷಗಳಿಂದ ಈ ಕಾಲುವೆಯ ಹೂಳೆತ್ತಿ, ಸ್ವಚ್ಛ ಮಾಡಲು ಮನವಿ ಮಾಡಿಕೊಂಡಿದ್ದೇವು. ಆದರೆ ಈವರೆಗೆ ಯಾರೂ ಆ ಕೆಲಸ ಮಾಡಿಲ್ಲ. ಅದಕ್ಕೆ ನಾವೇ ರೈತರೆಲ್ಲ ಒಟ್ಟಾಗಿ, ಹಣ ಒಟ್ಟು ಮಾಡಿ, ಜೆಸಿಬಿ ಮೂಲಕ ಕೆರೆಯ ಸ್ವಚ್ಛತ ಕಾರ್ಯವನ್ನು ಕೈಗೊಂಡಿದ್ದೇವೆ. ಇದರಿಂದ ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದೆ.
– ರಾಘವೇಂದ್ರ
ಮೊಗವೀರ ಕೋಣ್ಕಿ, ರೈತರು
Advertisement
*ಪ್ರಶಾಂತ್ ಪಾದೆ