ಮುಂಬಯಿ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಲಾ ಸಮಿತಿ ಇದರ ಸಹಯೋಗದಲ್ಲಿ ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ವತಿಯಿಂದ ಎನ್‌ಕೆಜಿಎಸ್‌ಬಿ ಬ್ಯಾಂಕ್ ಲಿಮಿಟೆಡ್ ಇದರ ಆಡಳಿತ ಮಂಡಳಿಗೆ ಚುನಾಯಿತ ನಿರ್ದೇಶಕ ಮಂಡಳಿಯ ಅಭಿನಂದನ ಸಮಾರಂಭವು ಮಾ. 12ರಂದು ಸಂಜೆ ವಡಾಲದ ಶ್ರೀರಾಮ ಮಂದಿದ ಸಭಾಗೃಹದಲ್ಲಿ ನಡೆಯಿತು.
ಸಹಕಾರಿ ರಂಗದ ಪ್ರತಿಷ್ಠಿತ ಎನ್‌ಕೆಜಿಎಸ್‌ಬಿ ಕೋ. ಆಪರೇಟಿವ್ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷೆ ಸಿಎ ಹಿಮಾಂಗಿ ನಾಡಕರ್ಣಿ ಹಾಗೂ ನಿರ್ದೇಶಕ ಮಂಡಳಿ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಣಕಾಸು ವ್ಯವಹಾರದಲ್ಲಿ ಸುಮಾರು 105 ವರ್ಷಗಳ ಸುದೀರ್ಘಾವಧಿಯ ಸೇವೆ ನೀಡಿದ ದೇಶದ ಆಗ್ರಮಾನ್ಯ ಮಲ್ಟಿ ಸ್ಟೇಟ್ ಶೆಡ್ನೂಲ್ಡ್ ಬ್ಯಾಂಕ್ ಎನ್‌ಕೆಜಿಎಸ್‌ಬಿ ಬ್ಯಾಂಕ್ ಲಿಮಿಟೆಡ್ ಇದರ ಆಡಳಿತ ಮಂಡಳಿಗೆ ಚುನಾಯಿತರಾಗಿ, ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಬ್ಯಾಂಕ್‌ನ ನೂತನ ಉಪಾಧ್ಯಕ್ಷ ಕಿರಣ್ ಎ. ಕಾಮತ್, ನಿರ್ದೇಶಕರಾದ ಶಶಾಂಕ್ ಗುಲ್‌ಗುಲೆ, ಕಿರಣ ವಿ. ಕಾಮತ್, ವಸಂತ್ ಕುಲ್ಕರ್ಣಿ, ಸಂದೀಪ್ ಪ್ರಭು, ಮಂಗಳಾ ಪ್ರಭು, ಡಾ| ಅನುಯಾ ವಾರ್ತೆ, ರಂಗನಾಥನ್ ಐಯ್ಯರ್, ಶಾಂತೇಶ್ ವಾರ್ತೆ, ನೀಲಂ ವಾರ್ತೆ, ಸಂತೋಷ್ ಸೋನಾವಣೆೆ ಅವರನ್ನು ಉಭಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಮಹಾನಿರ್ವಾಣ್ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೆಯರ್ ಸ್ವಾಮೀಜಿ ಅವರನ್ನು ಸ್ಮರಿಸಿ ಮತ್ತು ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಶುಭಾನುಗ್ರಹಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಳಿಕ ನಿರ್ದೇಶಕರೊಂದಿಗೆ ಸಂವಾದ ಕಾರ್ಯಕಮ ನಡೆಯಿತು.
ಈ ಸಂದರ್ಭದಲ್ಲಿ ಚಿಂತಾಮಣಿ ನಾಡ್ಕರ್ಣಿ, ತ್ರಿವೇಣಿ ಸಂಗಮ್‌ನ ಅಧ್ಯಕ್ಷ ಉಲ್ಲಾಸ್ ಡಿ. ಕಾಮತ್, ಗೌರವ ಕಾರ್ಯದರ್ಶಿ ಯೋಗೇಶ್ ಭಟ್, ಗೌರವ ಕೋಶಾಧಿಕಾರಿ ಪ್ರಕಾಶ್ ವಿ. ಭಟ್, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ನಾಗರಾಜ ಕಿಣಿ, ಸದಸ್ಯ ದಯಾನಂದ ಪೈ, ಶ್ರೀ ರಾಮ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಮುಕುಂದ್ ಕಾಮತ್, ಉಪಾಧ್ಯಕ್ಷ ಆನಂತ ಪೈ ಡೋಂಗ್ರಿ, ಗೌರವ ಕೋಶಾಧಿಕಾರಿ ಪ್ರವೀಣ್ ಕಾಮತ್, ಸಂಘಟಕ ಜಿ. ಎಸ್. ಭಟ್, ಸಂಚಾಲಕ ವಿಜಯ್ ನಾಯಕ್, ಶ್ರೀ ರಾಮ ಮಂದಿರದ ವೈಧಿಕರಾದ ವೇ|ಮೂ| ಗೋವಿಂದ ಆಚಾರ್ಯ, ವೇ|ಮೂ| ವಿನೋದ್ ಭಟ್ ಸೇರಿದಂತೆ ತ್ರಿವೇಣಿ ಸಂಗಮದ ಅನೇಕ ಕಲಾವಿದರು ಉಪಸ್ಥಿತರಿದ್ದರು.
-ಚಿತ್ರ – ವರದಿ: ರೋನ್ಸ್ ಬಂಟ್ವಾಳ್