Advertisement
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಎರಡು ದಿನಗಳ ಕಾಲ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಏರ್ಪಡಿಸಿದ ಕೊಂಕಣಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಪುರಾತನವಾದ ಕೊಂಕಣಿ ಭಾಷೆಯ ಸಂಸ್ಕೃತಿಯನ್ನು ಉಳಿಸಲು ಸಮ್ಮೇಳನ ಕಾಳಜಿ ವಹಿಸಿದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಶ್ಲಾ ಸಿದರು.
ಚೀನದವರು ಚೀನೀ ಭಾಷೆಯ ಮೂಲಕ ಜಾಗತಿಕ ಮಟ್ಟಕ್ಕೆ ಏರಿದರು.ಮಲ ಯಾಳದವರು ಶಿಕ್ಷಿತರಾದರೂ ಮಾತೃಭಾಷೆಯನ್ನು ಬಿಟ್ಟುಕೊಡುವು ದಿಲ್ಲ. ಅದೇ ರೀತಿ ಕೊಂಕಣಿ ಭಾಷಿಕರು ತಮ್ಮ ಭಾಷೆಯನ್ನು ಬಿಟ್ಟು ಕೊಡ ಬಾರದು. ನವಾಯತ್ ಮುಸ್ಲಿಮರ ಭಾಷೆಯೂ ಕೊಂಕಣಿ ಆಗಿದೆ ಎಂದು ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ನಕ್ವಾ ಯಾಹ್ಯಾ ಹೇಳಿದರು.
ಭಾಷಾ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ. ವಿಶ್ವ ಕೊಂಕಣಿ ಕೇಂದ್ರದ ಮೂಲಕ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಸಮ್ಮೇಳನದ ಗೌರವ ಸಲಹೆಗಾರ ಡಾ| ನಂದಗೋಪಾಲ ಶೆಣೈ ಹೇಳಿದರು. ಉದ್ಯಮಿಗಳಾದ ಮಂಗಳೂರಿನ ನಿಶಾಂತ್ ಶೇಟ್, ಹುಬ್ಬಳ್ಳಿಯ ಸತೀಶ್ ಶೇಜವಾಡ್ಕರ್ ಶುಭ ಕೋರಿದರು. ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉದ್ಯಮಿ ವಿಶ್ವನಾಥ ಶೆಣೈ, ಮಂಗಳೂರು ಪೂರ್ಣಾ
ನಂದ ಪ್ರತಿಷ್ಠಾನದ ಡಿ. ರಮೇಶ ನಾಯಕ್, ಅಕಾಡೆಮಿ ಸದಸ್ಯೆ ಪೂರ್ಣಿಮಾ ಸುರೇಶ ನಾಯಕ್, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಕಾರ್ಯಾಧ್ಯಕ್ಷ ಮಹೇಶ ಠಾಕೂರ್, ಉಪಾಧ್ಯಕ್ಷ ಗಣೇಶ ನಾಯಕ್ ಕಲ್ಮರ್ಗಿ, ಪೆರ್ಣಂಕಿಲ ಶ್ರೀಶ ನಾಯಕ್, ಅಕಾಡೆಮಿ ರಿಜಿಸ್ಟ್ರಾರ್ ಮನೋಹರ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಸಲಹೆಗಾರ ಕುಯಿ ಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಮುಕಾರಿ ವರಸ್ ಕೆಡ್ಯಾಲಾಂತು ಸಮ್ಮೇಳನ್ ಮುಕಾರಿ ವರಸ್ ಕೊಡ್ಯಾಲಾಂತು ಕೊಂಕಣಿ ಸಾಹಿತ್ಯ ಸಮ್ಮೇಳನ್ ಆಯೋಜನ್ ಕೊರ್ಚಾಕ್ ಮಣಿಪಾಲ್ ಕೊಂಕಣಿ ಸಾಹಿತ್ಯ ಸಮ್ಮೇಳನ್ ನಿರ್ಣಯ್ ಗೆತ್ಲಾ… (ಮುಂದಿನ ವರ್ಷ ಮಂಗಳೂರಿನಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಮಣಿಪಾಲದ ಸಮ್ಮೇಳನ ನಿರ್ಣಯ
ವನ್ನು ಅಂಗೀಕರಿಸಿದೆ) ಸಾಹಿತ್ಯ ಸಮ್ಮೇಳನ ಅಂಗೀಕರಿಸಿದ ನಿರ್ಣಯ
ಗಳನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ.ಜಗದೀಶ ಪೈ “ಜೈ ಕೊಂಕಣಿ’ ಉದ್ಗಾರದ ಮೂಲಕ ಪ್ರಕಟಿಸಿದರು.
ನಿರ್ಣಯಗಳು :
ಶಾಲೆಗಳಲ್ಲಿ ಮಾತೃಭಾಷೆಯಾಗಿ ಕೊಂಕಣಿ ಕಲಿಕೆ
ಸ್ನಾತಕೋತ್ತರ ಸ್ತರದಲ್ಲಿ ಕೊಂಕಣಿ ಅಧ್ಯಯನ ವಿಷಯ, ಶಿಕ್ಷಕರ ನೇಮಕ
42 ಭಾಷಿಕರನ್ನು ಒಟ್ಟಿಗೆ ತರುವ ಕಾರ್ಯಕ್ರಮ ಆಯೋಜನೆ
ಮಂಗಳೂರಿನಲ್ಲಿ ಕೊಂಕಣಿ ಅಧ್ಯಯನ ಮತ್ತು ಸಂಶೋಧನ ಕೇಂದ್ರ ತೆರೆಯಲು ಹೆಚ್ಚುವರಿ 3 ಕೋ.ರೂ. ಅನುದಾನ
ಅಕಾಡೆಮಿ ಅನುದಾನ 2 ಕೋ.ರೂ.ಗೆ ಏರಿಕೆ
ಸಮ್ಮೇಳನಾಧ್ಯಕ್ಷರ 1968ರ ನೆನಪು :
ನಾನು ಎಂಬಿಬಿಎಸ್ ಶಿಕ್ಷಣವನ್ನು ಮಣಿಪಾಲದಲ್ಲಿ ಪಡೆಯುತ್ತಿರುವಾಗ (1968) ಮಣಿಪಾಲದ ಗೀತಾ ಮಂದಿರದಲ್ಲಿದ್ದ ಡಾ| ಟಿಎಂಎ ಪೈಯವರು ಯಾವುದೇ ಸಮುದಾಯದ ಕೊಂಕಣಿ ಭಾಷಿಗರಿದ್ದರೆ ಅವರನ್ನು ವಿಚಾರಿಸಿ ವಿಶೇಷ ಆಸ್ಥೆ ತೋರಿಸುವ ಮೂಲಕ “ಕೊಂಕಣಿಗರೆಲ್ಲ ಒಂದು’ ಎಂಬ ಸಂದೇಶ ಸಾರುತ್ತಿದ್ದರು. ಈಗ ಅದರ ಪಕ್ಕದಲ್ಲಿಯೇ ಆರ್‌ಎಸ್‌ಬಿ ಸಭಾಭವನ ಎದ್ದು ನಿಂತಿರುವುದು ಸಂತೋಷ ಎಂದು ಡಾ| ಕಸ್ತೂರಿ ಮೋಹನ್ ಪೈ ಹೇಳಿದರು.