Advertisement

13ರಿಂದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆ

11:35 AM Feb 09, 2019 | Team Udayavani |

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ತಿನಿಂದ ಫೆ.13 ರಿಂದ 17ರವರೆಗೆ ರಾಜ್ಯ ಮಟ್ಟದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆಯನ್ನು ನಗರದ ಸಂತ ಅಂತೋನಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಸಂಚಾಲಕ ಕೂಡ್ಲು ಆನಂದ ಶಾನಭಾಗ ತಿಳಿಸಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೊಂಕಣಿ ಭಾಷೆ ಹಾಗೂ ಕೊಂಕಣಿ ಸಾಹಿತ್ಯ ಉನ್ನತಿಕರಿಸುವ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಉ.ಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 10 ತಂಡಗಳು ಭಾಗವಹಿಸಲಿವೆ ಎಂದರು.

ವಿಜೇತರಿಗೆ ಪ್ರಥಮ- 25 ಸಾವಿರ ರೂ., ದ್ವಿತೀಯ- 15 ಸಾವಿರ ರೂ. ಹಾಗೂ ತೃತೀಯ- 10 ಸಾವಿರ ರೂ. ನೀಡಲಾಗುತ್ತಿದೆ. ಏಕಾಂಕ ನಾಟಕದಲ್ಲಿ ಉತ್ತಮ ನಟ, ನಟಿ ಬಹುಮಾನ ಕೂಡಾ ಇದೆ.

ನಮ್ಮ ಜಿಲ್ಲೆಯ ಹೆಮ್ಮೆಯ ಕೊಂಕಣಿ ನಾಟಕಕಾರ ಹೊಸಾಡ ಬಾಬುಟಿ ನಾಯಕರ ಹೆಸರಿನ ವೇದಿಕೆ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು. 13 ರಂದು ಸಂಜೆ 5ಕ್ಕೆ ಖ್ಯಾತ ಬರಹಗಾರ ಬಹುಭಾಷಾ ಪಂಡಿತ ಶಾ.ಮಂ. ಕೃಷ್ಣರಾಯ ಉದ್ಘಾಟಿಸಲಿದ್ದು ಕೊಂಕಣಿ ಪರಿಶತ್ತಿನ ಜಿಲ್ಲಾಧ್ಯಕ್ನ ನಿತಿನ್‌ ಕಾಸರಕೋಡ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಾಜ್ಯ ಕೊಂಕಣಿ ಅಕಾಡಮಿ ಸದಸ್ಯ ಸ್ಟೀಪನ್‌ ರೊಡ್ರಿಗಸ್‌ ಹೊನ್ನಾವರ, ಶಿರಸಿ ಸಂತ್‌ ಅಂತೋನಿ ಚರ್ಚಿನ ಧರ್ಮಗುರು ಫಾ| ಜೋನ್‌ ಫರ್ನಾಂಡಿಸ್‌, ಉಪನ್ಯಾಸಕಿ ಡಾ| ಸುಜಾತ ಫಾತರಪೇಕರ್‌ ಹಾಗೂ ಸಾಹಿತಿ ಆರ್‌.ಕೆ. ಹೊನ್ನೆಗುಂಡಿ ಉಪಸ್ಥಿತರಿರಲಿದ್ದಾರೆ.

17ಕ್ಕೆ ನಾಟಕ ಪ್ರದರ್ಶನದ ಬಳಿಕ ಸಮಾರೋಪ ನಡೆಯಲಿದ್ದು, ಶಾ.ಮಂ. ಕೃಷ್ಣರಾಯರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್‌.ಪಿ. ನಾಯ್ಕ, ನಿತಿನ್‌ ಕಾಸರಕೋಡ, ಕೃಷ್ಣಮೂರ್ತಿ ಮೇಸ್ತ, ಅಂತೋನಿ ನರೋನಾ, ಡಾ| ರಾಘವೇಂದ್ರ ಕಾಮತ್‌, ಕೃಷ್ಣಮೂರ್ತಿ ಪೈ ಪಾಲ್ಗೊಳ್ಳುವರು.

Advertisement

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ನಿತಿನ ಕಾಸರಕೋಡ, ಕಾರ್ಯದರ್ಶಿ ಜಗದೀಶ ನಾ., ಶೈಲಜಾ ಮಂಗಳೂರು, ವಾಲ್ಟರ್‌ ಡಿಕೋಸ್ತಾ, ಅಂತೋನಿ ನರೋನಾ, ಸುದರ್ಶನ ಇತರರು ಇದ್ದರು.

ಯಾವಾಗ ಯಾರ ನಾಟಕ?
13ರಂದು ಸದಾಶಿವಗಡದ ಸಿದ್ಧಿವಿನಾಯಕ ಮಹಾಸತಿ ಭಜಕ ಮಂಡಳಿಯಿಂದ ‘ಲಾಖತ್ಗೋ ಏಕ್‌ ನ್ಹವರೋ’, ಮಂಗಳೂರಿನ ಮಾಂಡ ಸೋಬಾನ ಕಲಾಕುಲ ‘ಅಂಟಿಗೋನ’, 14ರ ಸಂಜೆ 5ಕ್ಕೆ ಸಿದ್ದಾಪುರ ಬಿಳಗಿ ಸೀತಾರಾಮಚಂದ್ರ ನಾಟ್ಯ ಸೇವಾ ಸಂಘದ ‘ಕೆಲ್ಲಿಲೋ ಖಾತ್ತಾ’, 15ಕ್ಕೆ ಧಾರವಾಡದ ಪ್ರಜ್ವಲ್‌ ಹವ್ಯಾಸಿ ಸಂಘದಿಂದ ‘ಪಾರ್ವತಿ ಬಾಯಿಲೆ ಪಂಚಸೂತ್ರ’, ಮಂಗಳೂರಿನ ಲೋಗೋಸ್‌ ಥೇಯೆಟರ ಟ್ರೂಪ್‌ನ ‘ಸಳ್ಗಿ’, 16ರ ಸಂಜೆ 5ಕ್ಕೆ ಹೊನ್ನಾವರದ ಸಾಂತ ಪ್ರಾನ್ಸಿಸ್‌ ಆಸಿಸಿ ಚರ್ಚ್‌ನ ‘ಬಾಂದಾಸಾಂತ್ಲಿ ಬಚಾವಿ’, ಸಿಂಪನಿ ತಂಡದಿಂದ ಚಾರ್‌ ದಿಸಾಚೋ ಸಂಸಾರ್‌, 17ರ ಸಂಜೆ 5ಕ್ಕೆ ಸಾಂತ ಪ್ರಾನ್ಸಿಸ್‌ ಕಲಾ ಮೇಳದಿಂದ ಪೆಟ್ಲಿ ದಿವ್ಲಿ ವಾರ್ಯಾಕ ಸಾಂಪ್ಡಾತಾನಾ, ಆನಂದ ಕಾಮತ್‌ ವಾಸುದೇವ ಭಟ್ಟ ಮಾಮಾಲೆ ಜೋತಿಷ್‌ ನಡೆಯಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next