Advertisement
ಕೊಂಕಣ ರೈಲ್ವೇಯನ್ನು ವಿದ್ಯುದೀಕರಣಗೊಳಿಸಿದ ಕಾರಣ ವಾರ್ಷಿಕವಾಗಿ 150 ಕೋ.ರೂ.ಗಳಷ್ಟು ಇಂಧನ ಉಳಿತಾಯವಾಗಲಿದೆ. ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿ. ರೈಲ್ವೇ ವಿದ್ಯುದೀಕರಣ ಮತ್ತು ಪಥ ದ್ವಿಗುಣ ಕಾರ್ಯವನ್ನು 2017ರಲ್ಲಿ ಆರಂಭಿಸಿತ್ತು. ಈ ಯೋಜನೆಯಿಂದಾಗಿ ಪರಿಸರ ಮಾಲಿನ್ಯಕ್ಕೆ ಕಡಿವಾಣ ಬೀಳುವುದರ ಜತೆಗೆ ಅನಗತ್ಯ ವೆಚ್ಚವೂ ಕಡಿಮೆಯಾಗಿದೆ.
ಎಲೆಕ್ಟ್ರಿಕ್ ಲೋಕೋದಿಂದಾಗಿ ಡೀಸೆಲ್ ವೆಚ್ಚ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಸರಾಸರಿ 300 ಕಿ.ಮೀ. ಸಂಚಾರಕ್ಕೆ 1,500 ಲೀ. ಡೀಸೆಲ್ ಬೇಕಾಗುತ್ತದೆ. ಗೂಡ್ಸ್ ರೈಲಾದರೆ ಇನ್ನೂ 500 ಲೀ. ಬೇಕು. ಎಲೆಕ್ಟ್ರಿನ್ ಎಂಜಿನ್‌ನಿಂದ ಅವೆಲ್ಲವೂ ಉಳಿತಾಯವಾಗಲಿದೆ. ಅಲ್ಲದೆ ಮಂಗಳೂರು ಸೆಂಟ್ರಲ್‌ನಲ್ಲಿ ಎಂಜಿನ್ ಬದಲಿಸುವ ಹಾಗೂ ಡೀಸೆಲ್ ತುಂಬಿಸಲು ಬೇಕಾಗುವ ಸಮಯವೂ ಉಳಿತಾಯವಾಗುತ್ತದೆ. ಬಾಕಿ ರೈಲುಗಳೂ ಶೀಘ್ರ ಎಲೆಕ್ಟ್ರಿಕ್
ಪ್ರಸ್ತುತ 5 ರೈಲುಗಳಷ್ಟೇ ಎಲೆಕ್ಟ್ರಿಕ್ ಆಗಲು ಬಾಕಿ ಉಳಿದಿವೆ. ದಿನನಿತ್ಯ ಓಡಾಟ ಮಾಡುವ ತುತಾರಿ ಎಕ್ಸ್‌ಪ್ರೆಸ್, ಪಂಚಗಂಗಾ ಎಕ್ಸ್‌ಪ್ರೆಸ್, ವಾರಕ್ಕೊಮ್ಮೆ ಸಂಚರಿಸುವ ಪೂರ್ಣ ಎಕ್ಸ್‌ಪ್ರೆಸ್, ಮರುಸಾಗರ್ ಎಕ್ಸ್‌ಪ್ರೆಸ್ ಹಾಗೂ ಎಚ್‌ಎಸ್‌ಆರ್ ಎಸಿ ಎಕ್ಸ್‌ಪ್ರೆಸ್ ರೈಲುಗಳು ಕೂಡ ಸದಸ್ಯದಲ್ಲಿಯೇ ಎಲೆಕ್ಟ್ರಿಕ್ ಆಗಲಿವೆ. ಈ ಬಗೆಗಿನ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿವೆ.
Related Articles
-ಸುಧಾ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ
Advertisement