Advertisement
ಕೊಂಕಣ ರೈಲ್ವೇ ಮೂಲಕ ಸಂಚರಿಸುವ ರೈಲುಗಳಿಗೆ ಇದು ಅನ್ವಯ ವಾಗಲಿದೆ. ಈ ವೇಳಾಪಟ್ಟಿಯ ಪ್ರಕಟನೆೆಗೆ ಮೊದಲೇ ಟಿಕೆಟ್ ಪಡೆದಿರುವ ಪ್ರಯಾಣಿಕರು ತಮ್ಮ ರೈಲುಗಳ ವ್ಯತ್ಯಯವಾದ ವೇಳೆಯನ್ನು ಗಮನಿಸಬೇಕಾಗಿದೆ.
ನಂ.70106 ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ನಿಂದ 2.55ರ ಬದಲು 10 ನಿಮಿಷ ಬೇಗ, 2.45ಕ್ಕೆ ಹೊರಡಲಿದೆ. ಮಡಗಾಂವ್‌ಗೆ ರಾತ್ರಿ 10.30ಕ್ಕೆ ತಲುಪಲಿದೆ.
Related Articles
Advertisement
ನಂ.22635 ಮಡಗಾಂವ್-ಮಂಗಳೂರು ಸೆಂಟ್ರಲ್ ಇಂಟರ್‌ಸಿಟಿ ರೈಲು ಮಡಗಾಂವ್‌ನಿಂದ ಸಂಜೆ 4.15ರ ಬದಲು 4ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 11ಕ್ಕೆ ತಲುಪಲಿದೆ.
12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಟಿ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1.55ರ ಬದಲು ಸಂಜೆ 4.45ಕ್ಕೆ ಹೊರಡಲಿದೆ. ಮುಂಬಯಿಗೆ ಮರುದಿನ ಬೆಳಗ್ಗೆ 10.33ಕ್ಕೆ ತಲುಪಲಿದೆ.
ನಂ.16524 ಕಾರವಾರ ಮಂಗಳೂರು ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು (ವಯಾ ಮೈಸೂರು)ವಾರಕ್ಕೆ 3 ಬಾರಿ ಸಂಚರಿಸುವ ರೈಲು ಕಾರವಾರದಿಂದ 2.40ರ ಬದಲು 2.55ಕ್ಕೆ ಹೊರಟು ಬೆಂಗಳೂರು ಕೆಎಸ್‌ಆರ್‌ಗೆ ಯಾವುದೇ ಬದಲಾಗದ ಸಮಯ 8ಕ್ಕೆ ತಲುಪಲಿದೆ.
ನಂ.16514 ಕಾರವಾರ-ಮಂಗಳೂರು ಸೆಂಟ್ರಲ್ ಕೆಎಸ್‌ಆರ್ ರೈಲು (ವಯಾ ನೆಲಮಂಗಲ) ಕಾರವಾರದಿಂದ 2.40ರ ಬದಲು 2.55ಕ್ಕೆ ಹೊರಟು ಮರುದಿನ ಯಾವುದೇ ಬದಲಾಗದ ಸಮಯ 8ಕ್ಕೆ ಬೆಂಗಳೂರು ತಲಪಲಿದೆ. ನಂ. 56641 ಮಡಗಾಂವ್ ಮಂಗಳೂರು ಸೆಂಟ್ರಲ್ ಪ್ಯಾಸಂಜರ್ ರೈಲು ಮಡಗಾಂವ್‌ನಿಂದ ಮಧ್ಯಾಹ್ನ 1 ಗಂಟೆ ಬದಲು 2 ಗಂಟೆಗೆ ಹೊರಟು ರಾತ್ರಿ 10ಕ್ಕೆ ತಲುಪಲಿದೆ.
16346 ತಿರುವನಂತಪುರ ಕುರ್ಲಾ ನೇತ್ರಾವತಿ ರೈಲು ರಾತ್ರಿ 11.20ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.