Advertisement
ಟಿಕೆಟ್ ಬುಕಿಂಗ್ ಮಾಡಿದವರು ಪ್ರಯಾಣಕ್ಕೆ ಮೊದಲು ವೇಳಾಪಟ್ಟಿಯನ್ನು ದೃಢಪಡಿಸಿ ಕೊಳ್ಳುವಂತೆ ದಕ್ಷಿಣ ರೈಲ್ವೇ ಸೂಚಿಸಿದೆ.
Related Articles
Advertisement
ನಂ. 12431 ತಿರುವನಂತಪುರಂ ಸೆಂಟ್ರಲ್ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಮಂಗಳ, ಗುರು, ಶುಕ್ರವಾರಗಳಂದು ತಿರುವನಂತಪುರದಿಂದ ಮಧ್ಯಾಹ್ನ 2.30 (ಪ್ರಸ್ತುತ ರಾತ್ರಿ 7.15)ಕ್ಕೆ ಎಂದರೆ 4.45 ಗಂಟೆ ಬೇಗ ಹೊರಡಲಿದೆ.
ನಂ. 12617 ಎರ್ನಾಕುಳಂ-ಹಜರತ್ ನಿಜಾಮುದೀನ್ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ಎರ್ನಾಕುಳಂನಿಂದ ಬೆಳಗ್ಗೆ 10.40(ಮಧ್ಯಾಹ್ನ 1.25)ಕ್ಕೆ ಹೊರಡಲಿದೆ.
ನಂ. 16346 ತಿರುವನಂತಪುರ-ಮುಂಬಯಿ ನೇತ್ರಾವತಿ ಎಕ್ಸ್‌ಪ್ರೆಸ್ ಹೊರಡುವ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಕಾಸರಗೋಡಿನಲ್ಲಿ ಆಗಮನ ನಿರ್ಗಮನ ರಾತ್ರಿ 8.08/08.10. ಮಂಗಳೂರು ಜಂಕ್ಷನ್ ರಾತ್ರಿ 9.30/9.40. ಇದು ಪ್ರಸ್ತುತ ಸಮಯಕ್ಕಿಂತ ಒಂದು ಗಂಟೆ ಮೊದಲಾಗಿರುತ್ತದೆ.
ನಂ. 12977 ಎರ್ನಾಕುಳಂ ಜಂಕ್ಷನ್-ಅಜ್ಮೇರ್ ಮರುಸಾಗರ್ ಎಕ್ಸ್‌ಪ್ರೆಸ್ ರವಿವಾರಗಳಂದು ಎರ್ನಾಕುಳಂನಿಂದ ಹೊರಡುವುದು. ಹೊರಡುವವ ಸಮಯ ಸಂಜೆ 6.50 (ಪ್ರಸ್ತುತ 8.25). ನಂ.19577 ತಿರುನಲ್ವೇಲಿ ಜಂಕ್ಷನ್-ಜಾಮ್ ನಗರ್ ಸೋಮವಾರ, ಮಂಗಳವಾರಗಳಂದು ತಿರುನಲ್ವೇಲಿಯಿಂದ ಬೆಳಗ್ಗೆ 5.15ಕ್ಕೆ(ಪ್ರಸ್ತುತ 8)ಹೊರಡುವುದು.
ನಂ. 22659 ಕೊಚ್ಚುವೇಲಿ-ಯೋಗನಗರಿ ಹೃಷಿಕೇಶ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಶುಕ್ರವಾರಗಳಂದು ಕೊಚ್ಚುವೇಲಿಯಿಂದ ಬೆಳಗ್ಗೆ 4.50(9.10)ಕ್ಕೆ ಹೊರಡುವುದು. ನಂ.12202 ಕೊಚ್ಚುವೇಲಿ -ಲೋಕಮಾನ್ಯ ತಿಲಕ್ ಗರೀಬ್‌ರಥ್ ಎಕ್ಸ್‌ಪ್ರೆಸ್ ಕೊಚ್ಚುವೇಲಿಯಿಂದ ಬೆಳಗ್ಗೆ 7.45(ಪ್ರಸ್ತುತ 8.45)ಕ್ಕೆ ಹೊರಡುವುದು.
ನಂ.22476 ಕೊಯಮತ್ತೂರು ಹಿಸಾರ್ ಕೊಯಮತ್ತೂರಿನಿಂದ ಮಧ್ಯಾಹ್ನ 12.40 (ಪ್ರಸ್ತುತ 2.55)ಕ್ಕೆ ಹೊರಡುವುದು. ನಂ. 02197 ಕೊಯ ಮತ್ತೂರು ಜಂಕ್ಷನ್ ಜಬಲ್ಪುರ ವಿಶೇಷ ರೈಲು ಕೊಯಮತ್ತೂರಿನಿಂದ ಸಂಜೆ 3.25(ಪ್ರಸ್ತುತ 5.05)ಕ್ಕೆ ಹೊರಡಲಿದೆ. ಇದು ಜೂನ್ 13ರಿಂದ ಆಗಸ್ಟ್ 1ರ ವರೆಗೆ ಅನ್ವಯ ಎಂದು ಪ್ರಕಟನೆ ತಿಳಿಸಿದೆ.