ಸುರತ್ಕಲ್ : ಸ್ವಚ್ಚತೆಯೇ ಸೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕೊಂಕಣ ರೈಲ್ವೇ ಸೆ.15ರಿಂದ ಅ.2ರ ವರೆಗೆ ಆಯೋಜಿಸಿದ್ದ ಸ್ವಚ್ಚತಾ ಅಭಿಯಾನದ ಸಮಾರೋಪವು ಸುರತ್ಕಲ್ ಕೊಂಕಣ ರೈಲು ನಿಲ್ದಾಣದಲ್ಲಿ ಜರಗಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಹಳಿ, ಫ್ಲ್ಯಾಟ್ಫಾರಂ, ಪಾರ್ಕಿಂಗ್ ಸ್ಥಳಗಳನ್ನು ಸ್ವಚ್ಚ ಮಾಡಲಾಯಿತು.ಕೊಂಕಣ ರೈಲ್ವೇ, ಎಂಆರ್‌ಪಿಎಲ್, ಸಿಐಎಸ್‌ಎಫ್ ಸಿಬಂದಿ ಸಹಿತ ಹಲವರು ಭಾಗವಹಿಸಿದ್ದರು.
ಎಂಆರ್‌ಪಿಎಲ್‌ನ ರಿಫೈನರಿ ವಿಭಾಗದ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ಕೇಂದ್ರ ಸರಕಾರದ ಮಹತ್ವದ ಯೋಜನೆಯ ಅಂಗವಾಗಿ ಸ್ವಚ್ಚತೆಯೇ ಸೇವೆ ಕಾರ್ಯಕ್ರಮವನ್ನು ಸಂಸ್ಥೆ ವಿವಿಧೆಡೆ ಯಶಸ್ವಿಯಾಗಿ ಹಮ್ಮಿಕೊಂಡಿದೆ ಎಂದರು. ಕೊಂಕಣ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮಾತನಾಡಿ, ಉಡುಪಿ ಸಹಿತ ಕೊಂಕಣ ರೈಲ್ವೇ ತನ್ನ ವ್ಯಾಪ್ತಿಯಲ್ಲಿಸೆ.15ರಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಸ್ವಚ್ಚತೆ ಬಗ್ಗೆ ವಿಶೇಷ ಗಮನ ನೀಡಿದೆ. ಇಲ್ಲಿನ ರೈಲು ನಿಲ್ದಾಣಗಳು ಸ್ವಚ್ಚತೆಯಲ್ಲಿ ದೇಶದಲ್ಲಿಯೇ ಗಮನ ಸೆಳೆದಿವೆ ಎಂದರು.
ಹಣಕಾಸು ವಿಭಾಗದ ನಿರ್ದೇಶಕ ಎ.ಕೆ. ಸಾಹೂ, ಜನರಲ್ ಮ್ಯಾನೇಜರ್‌ಗಳಾದ ಸುರೇಶ್ ರಾವ್, ಸೀತಾರಾಮ್,
ಅ ಧಿಕಾರಿಗಳಾದ ಪ್ರಶಾಂತ್ ಬಾಳಿಗ, ಸಿಎಸ್‌ಆರ್ ವಿಭಾಗದ ವೀಣಾ ಶೆಟ್ಟಿ, ರೀಜನಲ್ ಟ್ರಾಫಿಕ್ ಮ್ಯಾನೇಜರ್
ವಿನಯ್ ಕುಮಾರ್, ಕಾರ್ಪೊರೇಟರ್ ಗುಣಶೇಖರ ಶೆಟ್ಟಿ, ಕೇಂದ್ರೀಯ ಕೈಗಾರಿಕ ಭದ್ರತಾ ದಳದ ಸಿಬಂದಿ
ಭಾಗವಹಿಸಿದ್ದರು.