Advertisement

ಕೊಂಕಣ ರೈಲ್ವೇ: ಸ್ವಚ್ಛ ರೈಲ್ವೇ ಸ್ವಚ್ಛ ಭಾರತ ಅಭಿಯಾನ

12:16 AM Oct 04, 2019 | Team Udayavani |

ಉಡುಪಿ: ಸ್ವಚ್ಛ ಭಾರತ ಅಭಿಯಾನದಡಿ ಕಾರವಾರ ವಲಯದ ಕೊಂಕಣ ರೈಲು ನಿಲ್ದಾಣಗಳಲ್ಲಿ ಒಟ್ಟು 11,600 ಕೆಜಿ ಕಸವನ್ನು ಸಂಗ್ರಹಿಸಿದ್ದು, ಅದನ್ನು ಒಣ ಮತ್ತು ಹಸಿ ಕಸವಾಗಿ ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗಿದೆ ಎಂದು ಕಾರವಾರ ಪ್ರಾದೇಶಿಕ ರೈಲ್ವೇ ಪ್ರಬಂಧಕ ಬಿ.ಬಿ. ನಿಕ್ಕಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕೇಂದ್ರ ರೈಲ್ವೇ ಮಂತ್ರಾಲಯದ ನಿರ್ದೇಶನದಂತೆ ಸೆ. 16ರಿಂದ ಅ. 2ರ ವರೆಗೆ ಸ್ವತ್ಛ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈಲು ನಿಲ್ದಾಣ, ಪರಿಸರ, ಬೋಗಿಗಳ ಸ್ವತ್ಛತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಪ್ರತಿದಿನ ಒಂದು ವಿಭಾಗಕ್ಕೆ ಆದ್ಯತೆ ನೀಡಿ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಬೋಗಿಗಳಲ್ಲಿ ಸಾಕಷ್ಟು ಕಸದ ಬುಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಸ್ವತ್ಛತೆ ಕಾಪಾಡಲು ಪ್ರಯಾಣಿಕರು ಇಲಾಖೆ ಯೊಂದಿಗೆ ಇನ್ನಷ್ಟು ಸಹಕಾರ ನೀಡಬೇಕು. ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಯಂತ್ರ  ವನ್ನು ಕಾರವಾರ ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಉಡುಪಿ ನಿಲ್ದಾಣದಲ್ಲೂ ಶೀಘ್ರ ಅಳವಡಿಸಲಾ ಗುತ್ತದೆ ಎಂದು ಮಾಹಿತಿ ನೀಡಿದರು.

ಕಾರವಾರ‌ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಮುಕ್ತ ಕಾರ್ಯಕ್ರಮ ಆಯೋಜಿಸಿದ್ದು, ಅದರ ಅಂಗವಾಗಿ ಇಲಾಖೆ ವತಿಯಿಂದ ವಸ್ತ್ರದ ಚೀಲ ವಿತರಿಸಲಾಗಿತ್ತು. ರೈಲು ನಿಲ್ದಾಣದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತು ಬಳಕೆ ಮಾಡುವಂತೆ ಆದೇಶಿಸಲಾಗಿದೆ ಎಂದರು.

ಬಯೋ ಶೌಚಾಲಯ
ಬಯೋ ಶೌಚಾಲಯ ಉಪಯೋಗಿಸುವವರು ಶುಚಿತ್ವದ ಬಗ್ಗೆ ಗಮನ ಹರಿಸಬೇಕು. ಶೌಚಾಲಯ ಬ್ಲಾಕ್‌ ಆದರೆ ಸರಿಪಡಿಸಿದ ಬಳಿಕವಷ್ಟೇ ಉಪಯೋಗಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಕೊಂಕಣ ರೈಲ್ವೇ ಸಾರ್ವಜನಿಕ ಸಂಪರ್ಕ ಪ್ರಬಂಧಕಿ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

141 ಕಿ.ಮೀ. ದ್ವಿಪಥಕ್ಕೆ 4,980 ಕೋ.ರೂ.
ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಡಿಸೆಂಬರ್‌ 2020ರ ಒಳಗೆ ಪೂರ್ಣ ಗೊಳ್ಳಲಿದೆ. ಈ ಸಂದರ್ಭ 4,980 ಕೋ.ರೂ ವೆಚ್ಚದಲ್ಲಿ 141 ಕಿ.ಮೀ. ಹಳಿಯನ್ನು ದ್ವಿಪಥಗೊಳಿಸಲಾಗುತ್ತದೆ ಎಂದು ನಿಕ್ಕಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next