Advertisement

ಬಿಗ್‌ಬಾಸ್‌ ಕೊನೆಯಾಗೋದು ಕಲರ್ ಸೂಪರಲ್ಲಿ !

11:52 AM Jan 12, 2017 | Team Udayavani |

ಬಹುನಿರೀಕ್ಷಿತ “ಬಿಗ್‌ಬಾಸ್‌ ಸೀಜನ್‌4’ನ ಫಿನಾಲೆ ಈ ವಾರ ನಡೆಯಬೇಕಾಗಿದ್ದು 2 ವಾರ ದಿಢೀರ್‌ ಮುಂದಕ್ಕೆ ಹೋಗಿದೆ. ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿ, ಚರ್ಚೆ, ವಾದ, ವಿವಾದಗಳಿಗೆ ಗ್ರಾಸವಾಗಿರುವ ಈ ಕಾರ್ಯಕ್ರಮ 2 ವಾರ ಮುಂದೆ ಹೋಗಿದ್ದೇಕೆ, ಫಿನಾಲೆ ರೂಪುರೇಷೆಗಳೇನು, “ಕಲರ್ಸ್‌ ಕನ್ನಡ’ದಲ್ಲಿ ಪ್ರಸಾರ ಕಾಣುತ್ತಿರುವ ಈ ರಿಯಾಲಿಟಿ ಶೋನ ಹೆಚ್ಚುವರಿ 2 ವಾರಗಳ ಎಪಿಸೋಡುಗಳು “ಕಲರ್‌ ಸೂಪರ್‌’ನಲ್ಲಿ ಪ್ರಸಾರವಾಗುತ್ತಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ “ಕಲರ್ಸ್‌’ ಹಾಗೂ “ಕಲರ್ಸ್‌ ಸೂಪರ್‌’ ಚಾನಲ್‌ಗ‌ಳ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಇಲ್ಲಿ ಮಾತಾಡಿದ್ದಾರೆ:

Advertisement

* 2 ವಾರಗಳ ಕಾಲ “ಬಿಗ್‌ಬಾಸ್‌4′ ಸೀಜನ್‌ ಮುಂದೂ ಡಿದ್ದು ಇದೇ ಮೊದಲಾ? ಯಾಕೆ?
ಆದರೆ ಹಿಂದಿಯಲ್ಲಿ ಒಂದು ಸೀಜನ್‌ ಅನ್ನು ಇದೇ ಥರ ಮುಂದುವರಿಸಲಾಗಿತ್ತು. ಕನ್ನಡದಲ್ಲಿ ಇದೇ ಮೊದಲು. ಇದಕ್ಕೆ ಕಾರಣ ಬೇರೇನಲ್ಲ, ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಚೆನ್ನಾಗಿದೆ. ಅದು ಇನ್ನೂ ಎರಡು ವಾರಗಳ ಕಾಲ ಮುಂದುವರಿಯಲಿ ಎನ್ನುವುದಷ್ಟೇ. ತುಂಬ ಇನ್ವೆಸ್ಟ್‌ಮೆಂಟ್‌ ಆಗಿದೆ, ಅಂಥ ಒಂದು ಶೋನ ಮನರಂಜನೆ ಇನ್ನೂ ಕೆಲ ಕಾಲ ಸಿಗಲಿ ಅನ್ನುವ ಉದ್ದೇಶವಷ್ಟೇ.

* 2 ವಾರಗಳ ಹೆಚ್ಚುವರಿ ಎಪಿಸೋಡುಗಳು “ಕಲರ್ಸ್‌ ಸೂಪರ್‌’ನಲ್ಲಿ ಮೂಡಿ ಬರುವುದಕ್ಕೆ ಕಾರಣ?
ಎರಡು ಕಾರಣ, ಒಂದು ಈಗಾಗಲೇ ಕಲರ್ಸ್‌ ಕನ್ನಡದಲ್ಲಿ ಆ ಸಮಯಕ್ಕೆ 2 ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುವುದಾಗಿ ಘೋಷಿಸಿಯಾಗಿದೆ. ಒಂದು “ರಾಧಾರಮಣ’, ಇನ್ನೊಂದು “ಪದ್ಮಾವತಿ’. ದಿಢೀರನೆ ಆ ಧಾರಾವಾಹಿಯನ್ನು ಮುಂದಕ್ಕೆ ಹಾಕುವುದಕ್ಕೆ ಆಗುವುದಿಲ್ಲ. ಜೊತೆಗೆ “ಕಲರ್ಸ್‌ ಸೂಪರ್‌’ನಲ್ಲಿ ಇದನ್ನು ಪ್ರಸಾರ ಮಾಡುವುದರಿಂದ ಆ ಚಾನಲ್‌ಗೆ ಹೆಚ್ಚಿನ ವೀಕ್ಷಕರು ಬಂದಂತಾಗುತ್ತದೆ.

ಹೊಸ ಚಾನಲ್‌ ಪ್ರಾರಂಭವಾದಾಗ ಅದರ ವೀಕ್ಷಕರ ಸಂಖ್ಯೆ 2. 5ರಷ್ಟಿತ್ತು. “ಬಿಗ್‌ಬಾಸ್‌ ನೈಟ್‌ಶಿಪ್ಟ್’ ಹೆಸರಲ್ಲಿ ಈ ರಿಯಾಲಿಟಿ ಶೋ ಅನ್ನು ಅಲ್ಲೂ ಪ್ರಸಾರ ಮಾಡತೊಡಗಿದಾಗ ಅದು ಶೇ. 5ರಷ್ಟಕ್ಕೆ ಏರಿದೆ. ಈಗ 2 ವಾರಗಳ ಹೆಚ್ಚುವರಿಯನ್ನು ಅಲ್ಲೇ ಪ್ರಸಾರಿಸಿದರೆ ಆ ಪ್ರಮಾಣ ಶೇ. 8 ಅಥವಾ 10ಕ್ಕೆ ಏರಬಹುದು. ಅದರಿಂದ ಹೊಸ ಚಾನಲ್‌ಗೆ ಒಳ್ಳೆಯ ಪ್ರಮೋಶನ್‌ ಆಗುತ್ತದೆ ಅನ್ನುವುದು ನಮ್ಮ ನಂಬಿಕೆ.

ಯಾಕೆಂದರೆ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಇರುವ ಪ್ರೇಕ್ಷಕರ ಸಂಖ್ಯೆ ದೊಡ್ಡದು. ಅದರ ಅಂತಿಮ 2 ವಾರಗಳ ಎಪಿಸೋಡುಗಳನ್ನು ಪ್ರಸಾರ ಮಾಡುತ್ತಲೇ “ಕಲರ್ಸ್‌ ಸೂಪರ್‌’ನಲ್ಲಿ ಒಂದು ಕಾಮಿಡಿ ಶೋ ಶುರು ಮಾಡುತ್ತಿದ್ದೇವೆ. ಜೊತೆಗೆ ಇನ್ನೊಂದು ಟಾಕ್‌ ಶೋ ಕೂಡ ಬರಲಿದೆ. ಹೊಸ ಚಾನಲ್‌ಗೆ ಪ್ರೇಕ್ಷಕ ಬರುವುದಕ್ಕೆ “ಬಿಗ್‌ಬಾಸ್‌’ ಒಳ್ಳೆಯ ವೇದಿಕೆ ಮಾಡಿಕೊಡಲಿದೆ

Advertisement

* “ಕಲರ್ಸ್‌ ಕನ್ನಡ’ನಷ್ಟೇ “ಕಲರ್ಸ್‌ ಸೂಪರ್‌’ ಕೂಡ ಜನರಿಗೆ ಲಭ್ಯವಿದೆಯೇ?
ಹೌದು, “ಟಾಟಾ ಸ್ಕೈ’ ಹೊರತುಪಡಿಸಿ ಉಳಿದೆಲ್ಲಾ ಡಿಟಿಎಚ್‌ ಸೇವೆಗಳಲ್ಲೂ “ಕಲರ್ಸ್‌ ಸೂಪರ್‌’ ಲಭ್ಯವಿದೆ.

* ಈ 2 ವಾರಗಳಲ್ಲಿ ಟಾಸ್ಕ್ಗಳ ಸಂಖ್ಯೆ ಕಡಿಮೆ ಯಾಗಲಿದೆಯೇ?
ಹೌದು, ಕಾರಣ ಸ್ಪರ್ಧಿಗಳ ಸಂಖ್ಯೆ ಇಳಿಮುಖವಾಗಿದೆ. ಟಾಸ್ಕ್ಗಳನ್ನು ನೀಡುವುದಕ್ಕೆ ತಕ್ಕ ವಾತಾವರಣ ಸಿಗಲಾರದು. ಹಾಗಾಗಿ “ಬಿಗ್‌ಬಾಸ್‌’ನ ಅಷ್ಟೂ ಸೀಜನ್‌ಗಳಲ್ಲಿ ಪಾಲ್ಗೊಂಡವರನ್ನು ಬಿಗ್‌ಬಾಸ್‌ ಮನೆ ಒಳಗೆ ಕಳಿಸಲಾಗುತ್ತದೆ. ಕೊನೆಯ ಒಂದು ವಾರ ಟಾಸ್ಕ್ಗಳನ್ನು ಮುಗಿಸಿ, ಕೊನೆಯಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳನ್ನು ಬಿಡುತ್ತೇವೆ.

* ಫಿನಾಲೆಯ ಆಕರ್ಷಣೆಗಳೇನು?
ಪ್ರತಿ ವರ್ಷ ಫಿನಾಲೆ ಹೇಗೆ ನಡೆಯುತ್ತದೋ ಆ ರೀತಿಯಲ್ಲೇ ಇರುತ್ತದೆ. 15ಕ್ಕೆ ಬದಲಾಗಿ ಜನವರಿ 29ಕ್ಕೆ ಫಿನಾಲೆ ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next