Advertisement

BBK11: ಬಿಗ್‌ಬಾಸ್‌ಗೆ ಕಿಚ್ಚ ವಿದಾಯ.. ಟ್ವೀಟ್‌ ಮಾಡಿ ಎಲ್ಲ ಗೊಂದಲಕ್ಕೆ ತೆರೆ ಎಳೆದ ಸುದೀಪ್

01:04 PM Oct 15, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಕಾರ್ಯಕ್ರಮ ನಿರೂಪಣೆ ಬಗ್ಗೆ ಕಿಚ್ಚ ಸುದೀಪ್‌ (Kiccha Sudeep) ಮಾಡಿದ ಆ ಒಂದು ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ.

Advertisement

ಕಳೆದ 10 ಸೀಸನ್‌ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸುದೀಪ್‌ 11ನೇ ಸೀಸನ್‌ ಆರಂಭದಲ್ಲೇ ಇದು ನನ್ನ ಕೊನೆಯ ಸೀಸನ್‌ ಎಂದು ಹೇಳಿರುವುದರ ಹಿಂದಿನ ಕಾರಣವೇನು ಎಂದು ಅನೇಕರು ಯೋಚನೆ ಮಾಡುವಂತಾಗಿದೆ.

ಇದನ್ನೂ ಓದಿ: BBK11: ಬಿಗ್‌ ಬಾಸ್‌ಗೆ ಸುದೀಪ್‌ ವಿದಾಯ; ಕಿಚ್ಚನ ನಿರ್ಧಾರಕ್ಕೆ ಅಸಲಿ ಕಾರಣ ಇದೇನಾ?

ಬಿಗ್‌ ಬಾಸ್‌ ನಲ್ಲಿ ಕನ್ನಡ ಹೆಚ್ಚಾಗಿ ಬಳಕೆ ಆಗುತ್ತಿಲ್ಲ. ಕಾರ್ಯಕ್ರಮದ ನಿರ್ದೇಶಕರು ಬದಲಾಗಿದ್ದು, ಅವರು ತಮಿಳಿನವರಾಗಿದ್ದಾರೆ. ಶೋ ಆಯೋಜಕಿ ಮರಾಠಿಯವರಾಗಿದ್ದಾರೆ. ಹಾಗಾಗಿ ಅಲ್ಲಿ ಕನ್ನಡ ಹೆಚ್ಚು ಬಳಕೆ ಆಗುತ್ತಿಲ್ಲ. ಸ್ವರ್ಗ – ನರಕದ ಕಾನ್ಸೆಪ್ಟ್‌ ಬಗೆಗಿನ ಅಸಮಾಧಾನ ಹೀಗೆ ಈ ಎಲ್ಲಾ ಕಾರಣದಿಂದ ಕಿಚ್ಚ ಅವರು ಆಯೋಜಕರಿಂದ ಬೇಸರಗೊಂಡಿದ್ದಾರೆ. ಅದೇ ಕಾರಣದಿಂದ ಅವರು ಏಕಾಏಕಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

Advertisement

ಇದರ ಬೆನ್ನಲ್ಲೇ ಕಿಚ್ಚ ಸುದೀಪ್‌ ಅವರು ಎಲ್ಲಾ ಗೊಂದಲಕ್ಕೂ ತೆರೆ ಎಳೆಯುವ ನಿಟ್ಟಿನಲ್ಲಿ ಟ್ವೀಟ್‌ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಟ್ವೀಟ್‌ ನಲ್ಲಿ ಏನಿದೆ?:

“ನಾನು ಇತ್ತೀಚೆಗೆ ಮಾಡಿದ ಟ್ವೀಟ್‌ ಬಗ್ಗೆ ನೀವೆಲ್ಲ ತೋರಿಸಿದ ಬೆಂಬಲ ಹಾಗೂ ಪ್ರೀತಿಯನ್ನು ಪ್ರಶಂಸಿಸುತ್ತೇನೆ. ಆದರೆ ಚಾನೆಲ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಗೊಂದಲ ಇರುವಂತೆ ಊಹಿಸಿ ಮಾತನಾಡುವುದನ್ನು, ವಿಡಿಯೋ ಮಾಡಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಹಾಗೂ ಚಾನೆಲ್‌ ನಡುವೆ ಒಂದು ಸುದೀರ್ಘ ಪಾಸಿಟಿವ್‌ ಜರ್ನಿಯಿದೆ. ಈ ಪಯಣಕ್ಕೆ ʼಅಗೌರವʼವನ್ನು ಸೇರಿಸಿ ಮಾತನಾಡಬೇಡಿ. ನೀವೆಲ್ಲ ಊಹಿಸುತ್ತಿರುವ ವಿಚಾರ ಆಧಾರರಹಿತವಾಗಿದೆ.  ನಾನು ಮಾಡಿರುವ ಟ್ವೀಟ್‌ ನೇರ ಮತ್ತು ಪ್ರಾಮಾಣಿಕವಾಗಿದೆ. ನನ್ನ ಹಾಗೂ ಕಲರ್ಸ್‌ ನಡುವಿನ ಬಾಂಧವ್ಯ ಅದ್ಭುತವಾಗಿದೆ. ನನ್ನನ್ನು ಅವರು ಯಾವಾಗಲೂ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಕಾರ್ಯಕ್ರಮ ನಿರ್ದೇಶಕರಾಗಿರುವ ಪ್ರಕಾಶ್‌ ಅವರು ಒಬ್ಬ ಪ್ರತಿಭಾವಂತ ವ್ಯಕ್ತಿ. ನಾನು ಅವರ ತುಂಬಾ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸು ವ್ಯಕ್ತಿ ನನ್ನಲ್ಲ” ಸುದೀಪ್‌ ಬರೆದುಕೊಂಡಿದ್ದಾರೆ.

ಆ ಮೂಲಕ ಹರಿದಾಡಿದ ಎಲ್ಲ ಗೊಂದಲಕ್ಕೂ ಕಿಚ್ಚ ಅವರು ತೆರೆ ಎಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next