Advertisement

ಪೂಜೆಗೆ ಬಂದೆ ಕೋನೇಶ್ವರ  

10:34 AM Mar 11, 2017 | |

ಭಕ್ತಪರಾಧೀನನಾದ ಶಿವನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೂಪದಲ್ಲಿ ನೆಲೆಯಾಗಿರುತ್ತಾನೆ. ಭಕ್ತರನ್ನು ಪೊರೆಯುವುದೇ ಶಿವನ ನಿತ್ಯ ಕಾಯ್ಕವೆನಿಸುತ್ತದೆ.ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೋನಳ್ಳಿ ಗ್ರಾಮದಲ್ಲಿರುವ ಶ್ರೀ ಕೋನೇಶ್ವರ ದೇವಾಲಯ ಅತ್ಯಂತ ಸುಂದರವಾಗಿದ್ದು, ಸಾವಿರಾರು ವರ್ಷಗಳ ಪ್ರಾಚೀನತೆ ಹೊಂದಿದೆ.

Advertisement

ದೇವಾಲಯದ ಸ್ಥಳಪುರಾಣದ ಬಗ್ಗೆ ಸ್ಥಳೀಯ ಭಕ್ತರಲ್ಲಿ ವಿಭಿನ್ನ ಕಥೆಗಳು ಪ್ರಚಲಿತದಲ್ಲಿದೆ. ಸುಮಾರು 7-8 ನೂರು ವರ್ಷಗಳ ಹಿಂದೆ ಈ ಗ್ರಾಮವು ಹಿಂಭಾಗದಲ್ಲಿ ಎತ್ತರದ ಗುಡ್ಡ ಮುಂಭಾಗದಲ್ಲಿ ಸಮತಟ್ಟಾದ, ಫ‌ಲವತ್ತಾದ ನೀರಾವರಿ ಜಮೀನುಗಳಿಂದ ಕೂಡಿತ್ತು. ಇಲ್ಲಿ ರೈತರು ಭತ್ತ, ಕಬ್ಬು ಇತ್ಯಾದಿ ಫ‌ಸಲು ಬೆಳೆಯುತ್ತಿದ್ದರು. ತಾವು ಬೆಳೆದ ಫ‌ಸಲನ್ನು ಈ ದೇವಾಲಯ ಇರುವ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ತಂದು ಸಂಗ್ರಹಿಸಿಕೊಳ್ಳುತ್ತಿದ್ದರು. ಹೀಗೆ ಸಂಗ್ರಹಿಸಿಟ್ಟುಕೊಂಡ ದವಸ ಧಾನ್ಯಗಳು ಹಲವು ವರ್ಷಗಳಿಂದ ಇದ್ದಕ್ಕಿದ್ದಂತೆ ಕಮ್ಮಿಯಾಗುವುದು, ಕಳ್ಳರ ಪಾಲಾಗುವುದು ಇತ್ಯಾದಿ ನಡೆಯುತ್ತಿತ್ತು. ರೈತರೆಲ್ಲ ಸೇರಿ ರಸ್ತೆಯ ಸಮೀಪ ಇರುವ ದೇವರ ಕಲ್ಲಿಗೆ ಪ್ರಾರ್ಥಿಸಿದರು. ಇದಾದ ನಂತರ ದವಸ ದಾನ್ಯಗಳ ಸಂರಕ್ಷಣೆ ಪವಾಡ ರೀತಿಯಲ್ಲಿ ಉಂಟಾಗಲಾರಂಭಿಸಿತು. ಮರು ವರ್ಷ ಫ‌ಸಲು ಕಟಾವಿನ ನಂತರ ರೈತರು ಮತ್ತು ಸ್ಥಳೀಯ ನಿವಾಸಿಗಳು ಸೇರಿ ಚಿಕ್ಕ ಗುಡಿ ನಿರ್ಮಿಸಿ ದೇವರ ವಿಗ್ರಹಕ್ಕೆ ಕೋನೇಶ್ವರ ದೇವರೆಂದು ಹೆಸರಿಟ್ಟು ಪೂಜಿಸಿದರು. ಹೀಗೆ ಆರಂಭವಾದ ದೇವಾಲಯ ಚರಿತ್ರೆ ಇಂದು ಆಕರ್ಷಕ ದೇಗುಲ ನಿರ್ಮಾಣ, ನಿತ್ಯ ಪೂಜೆ ಉತ್ಸವಗಳವರೆಗೂ ಸಾಗಿ ಬಂದಿದೆ. ಇಂದು ಜಾತಿ,ಮತ ಕುಲಗಳ ಬೇಧವಿಲ್ಲದೆ ಎಲ್ಲಾ ಜನರು ಮತ್ತು ಬಹು ದೂರದ ಊರುಗಳಲ್ಲಿ ನೆಲೆಸಿದವರೂ ಸಹ ಇಲ್ಲಿನ ದೇವರಿಗೆ ಭಕ್ತರಾಗಿ ನಡೆದುಕೊಳ್ಳುತ್ತಿದ್ದಾರೆ.

  ಇಲ್ಲಿನ ಪ್ರಧಾನ ದೇವರು ಈಶ್ವರ. ಪರಿವಾರ ದೇವತೆಗಳಗಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ,ನವಗೃಹ ದೇವತೆಗಳು, ನಾಗ ದೇವತೆ, ಚೌಡಿ, ಅಶ್ವತ್ಥನಾರಾಯಣ ಇತ್ಯಾದಿಗಳಿದ್ದು ಆಕರ್ಷಕವಾಗಿದೆ. ಈ ಹಿಂದೆ ಚಿಕ್ಕ ಗುಡಿಯಂತಿದ್ದ ದೇವಾಲಯವನ್ನು 2010 ರಲ್ಲಿ ಆಧುನಿಕವಾಗಿ ಕಟ್ಟಲಾಯಿತು. ಭಕ್ತರ ದೇಣಿಗೆ ಮತ್ತು ಸರ್ಕಾರದ ಆರ್ಥಿಕ ನೆರವಿನಿಂದ ಹೊಸ ದೇವಾಲಯ ನಿರ್ಮಾಣ ಮತ್ತು ಪ್ರತಿಷ್ಠಾಪನಾ ಮಹೋತ್ಸವವನ್ನು 2010 ರಲ್ಲಿ ಅತ್ಯಂತ ವೈಭವದಿಂದ ನಡೆಸಲಾಯಿತು. 

 ಅಲ್ಪ ಸೇವೆ ನಡೆಸಿದರೂ ಸಹ ದೇವರು ಶೀಘ್ರ ವರ ನೀಡಿ ಭಕ್ತರನ್ನು ಉದ್ದರಿಸುತ್ತಾನೆ ಎಂಬ ಬಲವಾದ ಪ್ರತೀತಿ ಈ ಕ್ಷೇತ್ರದಲ್ಲಿದೆ. ಈ ಹಿನ್ನೆಲೆಯಲ್ಲಿ ಭಕ್ತರು ವಿದ್ಯೆ, ಉದ್ಯೋಗ, ವ್ಯಾಪಾರ ವ್ಯವಹಾರ ವೃದ್ಧಿ, ಕೌಟುಂಬಿಕ ಕಲಹ ನಿವಾರಣೆ, ಮನಶಾ0ತಿ ಇತ್ಯಾದಿ ಕೋರಿ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಫ‌ಸಲು ಸಂರಕ್ಷಣೆ ಮತ್ತು ಆರೋಗ್ಯ ವೃದ್ಧಿಗೆ ಇಲ್ಲಿನ ಸ್ಥಳ ಸುತ್ತಮುತ್ತಲೆಲ್ಲ ಜನ ಜನಿತವಾಗಿದೆ.

ಮಹಾಶಿವರಾತ್ರಿಯಂದು ಬೆಳಗ್ಗೆ 6 ರಿಂದ ರಾತ್ರಿ 11 ರ ವರೆಗೂ ಅಭಿಷೇಕ, ಮಂಗಳಾರತಿ,ಪ್ರಸಾದ ವಿತರಣೆ ನಡೆಯುತ್ತಿದ್ದು ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಆ ದಿನ ಭಕ್ತರಿಗೆ ಪ್ರಸಾದ, ಪಾನಕ, ಕೇಸರಿಬಾತ್‌ ಪ್ರಸಾದ ಇತ್ಯಾದಿ ವಿತರಣೆ ಮಾಡಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ದಶಮಿಯ ವರೆಗೆ ವಿಶೇಷ ಪೂಜೆ, ನಿತ್ಯ ಪಂಚಖಾದ್ಯ ಪೂಜೆ ,ರುದ್ರಾಭಿಷೇಕ ನಡೆಸಲಾಗುತ್ತದೆ. ಕಾತಿಕ ಮಾಸದಲ್ಲಿ ನಿತ್ಯ ಸಂಜೆ ದೀಪೋತ್ಸವ ನಡೆಸಲಾಗುತ್ತದೆ. 

Advertisement

 ದೇವಾಲಯದ ಆವರಣದಲ್ಲಿರುವ ಆಸ್ವತ್ಥನಾರಾಯಣನನ್ನು ಪ್ರದಕ್ಷಿಣೆ ಮಾಡಿ, ನವಗ್ರಹ ದೇವತೆಗಳು ಮತ್ತು ನಾಗದೇವತೆಯ ದರ್ಶನ ಪಡೆದು ಜಲಜಾಭಿಷೇಕ ಸೇವೆ ನಡೆಸುವ ಭಕ್ತರ ಭಕ್ತಿ ಸೇವೆ ನಿತ್ಯವೂ ಕಂಡು ಬರುತ್ತದೆ. 

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next