Advertisement
ಈ ಸಾಧನೆಗಾಗಿ ಕೊನೆರು ಹಂಪಿ 5 ಇಎಲ್‌ಒ ಅಂಕಗಳನ್ನು ಸಂಪಾದಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿದರು. ಜತೆಗೆ 45 ಸಾವಿರ ಡಾಲರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. 10 ಆಟ ಗಾರ್ತಿಯರ ಈ ಸ್ಪರ್ಧೆಯಲ್ಲಿ ಹಂಪಿ 6 ಅಂಕ ಸಂಪಾದಿಸಿದರು. ವೆಂಜುನ್ ಜು 5.5 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾದರು. 4.5 ಅಂಕ ಹೊಂದಿದ ಹರಿಕಾ 5ನೇ ಸ್ಥಾನ ಪಡೆದರು.
ಅಮೆರಿಕದ 16ರ ಹರೆಯದ ಕ್ಯಾರಿಸ್ಸಾಯಿಪ್ ವಿರುದ್ಧ ಗೆಲ್ಲುವ ಮೂಲಕ ಕೊನೆರು ಹಂಪಿ ಅಭಿಯಾನ ಆರಂಭವಾಗಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಮರಿಯಾ ಮುಜಿಚುಕ್ ವಿರುದ್ಧ ಆಘಾತಕಾರಿ ಸೋಲುಂಡರು. ಬಳಿಕ ವಿಶ್ವ ಚಾಂಪಿಯನ್ ವೆಂಜುನ್ ಜು, ನಾನಾ ಡಿಝಾಗ್ನಿಜ್, ಅಲೆಕ್ಸಾಂಡ್ರಾ ಕೋಸ್ಟೆನಿಕ್ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. 8ನೇ ಸುತ್ತಿನಲ್ಲಿ ವೆಲಂಟಿನಾ ಗುನಿನಾ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೆ ಹತ್ತಿರವಾದರು. ಕೊನೆಯ ಸುತ್ತಿನಲ್ಲಿ ಹರಿಕಾ ವಿರುದ್ಧ ಡ್ರಾ ಸಾಧಿಸಿದರೂ ಸಾಕಿತ್ತು. ಇದೇ ಫಲಿತಾಂಶ ಲಭಿಸಿತು.
Related Articles
Advertisement