Advertisement

ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ

01:24 PM Jul 04, 2020 | Naveen |

ಕೊಂಡ್ಲಹಳ್ಳಿ: ಪ್ರತಿ 20 ಕೂಲಿ ಕಾರ್ಮಿಕರಿಗೆ ಒಬ್ಬರು ಮೇಟಿಯನ್ನು ಗುರುತಿಸಬೇಕು ಎಂದು ಜಿಪಂ ಮುಖ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೀಶ್‌ ಹೇಳಿದರು.

Advertisement

ಕೊಂಡ್ಲಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಕಾಮಗಾರಿಗಳಲ್ಲಿ ಮತ್ತಷ್ಟು ಮಹಿಳೆಯರಿಗೆ ಅವಕಾಶ ನೀಡಬೇಕು. ಮೇಟಿಗಳಿಗೆ ಅಗತ್ಯ ತರಬೇತಿ ಕೊಡಬೇಕು. ಪಿಡಿಒಗಳು ಉತ್ತಮವಾಗಿ ಸ್ಪಂದಿಸಬೇಕು ಎಂದರು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲೂಕು ಸಂಚಾಲಕಿ ಲಕ್ಷ್ಮೀ ಮಾತನಾಡಿ, ಪ್ರತಿ ಪಂಚಾಯಿತಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ 8-10 ದಿನದೊಳಗೆ ಕೂಲಿ ಮೊತ್ತ ಪಾವತಿಸಬೇಕೆಂದು ಒತ್ತಾಯಿಸಿದರು.

ನರೇಗಾ ಪ್ರಗತಿ, ಖಾತಾ ಪರಿಶೀಲನೆಗೆ ಗ್ರಾಪಂ ಕಚೇರಿಗೆ ಜಿಪಂ ಸಿಇಒ ಭೇಟಿ ನೀಡಿದ್ದರು. ಗ್ರಾಮ ಪಂಚಾಯತ್‌ದಲ್ಲಿ ಇ- ಸ್ವತ್ತಿಗೆ ಸಂಬಂ ಧಿಸಿದ ಶುಲ್ಕದ ಹೊರೆಯನ್ನು ಕಡಿಮೆ ಮಾಡುವಂತೆ ಜಿ.ಎಸ್‌. ಲೋಕೇಶ್‌ ಮನವಿ ಮಾಡಿದರು. ಈ ವಿಷಯವನ್ನು ತಾಪಂ ಇಒ ಗಮನಕ್ಕೆ ತರುವಂತೆ ಸೂಚಿಸಿದರು. ತಾಪಂ ಇಒ ಪ್ರಕಾಶ್‌, ಗ್ರಾಪಂ ಪಿಡಿಒ ಪ್ರಹ್ಲಾದ್‌, ಇಂಜಿನಿಯರ್‌ ಸೌಮ್ಯ, ವಕೀಲ ಪ್ರದೀಪ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next