Advertisement

ಕೊಂಡೆವೂರು: 16ನೇ ವರ್ಷದ ಅಖಂಡ ಭಜನ ಸಪ್ತಾಹಕ್ಕೆ ಚಾಲನೆ

01:00 AM Feb 27, 2019 | Harsha Rao |

ಕುಂಬಳೆ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 16ನೇ ವರ್ಷದ ಅಖಂಡ ಭಜನ ಸಪ್ತಾಹಕ್ಕೆ ಮಾಣಿಲ ಶ್ರೀ ಧಾಮದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರಿನ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸುವುದರೊಂದಿಗೆ ಚಾಲನೆ ನೀಡಿದರು. ನಂತರ ಕೊಂಡೆವೂರು ಶ್ರೀಗಳು ಪೂಜೆ ನೆರವೇರಿಸಿದರು.

Advertisement

ಅಖಂಡ ಭಜನ ಸಪ್ತಾಹ ಮಾರ್ಚ್‌ 4 ಸೂರ್ಯಾಸ್ತದವರೆಗೆ ನಡೆಯಲಿದ್ದು ವಿವಿಧೆಡೆಗಳ ಭಜನ ಮಂದಿರಗಳು, ಸಂಘಗಳು ಭಜನ ಸೇವೆ ನಡೆಸಿಕೊಡಲಿವೆ. ತಮಗೆ ಕೊಟ್ಟ ಸಮಯಕ್ಕಿಂತ ಮುಂಚೆಯೇ ಆಗಮಿಸಿ, ಭಜನ ಪರಿಕರಗಳನ್ನು ತಂದು ಸಹಕರಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next