Advertisement

ಕೊಂಚೂರ-ಬಳವಡಗಿ ಜಾತ್ರೆ

10:56 AM Dec 04, 2017 | |

ವಾಡಿ: ಅಕ್ಕಪಕ್ಕದ ಗ್ರಾಮಗಳಾದ ಕೊಂಚೂರಿನ ಹನುಮಾನ ದೇವರ ಹಾಗೂ ಬಳವಡಗಿ ಗ್ರಾಮದ ಎಲ್ಲಮ್ಮ (ಏಲಾಂಬಿಕ) ದೇವಿ ಜಾತ್ರೆ ರವಿವಾರ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ನಡೆಯಿತು.

Advertisement

ಭಕ್ತರು ಕೊಂಚೂರು ಹನುಮನಿಗೆ ಜೈಕಾರ ಹಾಕಿದರೆ, ಬಳವಡಗಿ ಎಲ್ಲಮ್ಮ ದೇವಸ್ಥಾನ ಸುತ್ತುವರಿದು ಉದೋ..
ಉದೋ ಎಂದು ಉದ^ರಿಸಿದರು. ರವಿವಾರ ಬೆಳಗ್ಗೆಯಿಂದ ಐತಿಹಾಸಿಕ ಬಳವಡಗಿ ಎಲ್ಲಮ್ಮನ ದರ್ಶನಕ್ಕೆ ಮುಗಿಬಿದ್ದ ಭಕ್ತರು, ತರಕಾರಿ ಪಲ್ಲೆ, ಜೋಳದ ಕಡಬು, ಸಜ್ಜೆ ರೊಟ್ಟಿ, ಹೋಳಿಗೆ ಸೇರಿದಂತೆ ವಿವಿಧ ಪದಾರ್ಥಗಳನ್ನು ದೇವಿಗೆ ಹಡ್ಡಲಗಿ ತುಂಬಿ ಹರಕೆ ತೀರಿಸಿದರು.

ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಜೋಗೂತಿಯರ ದಂಡು, ಸಾಂಪ್ರದಾಯಿಕ ಆಚರಣೆಗಳನ್ನು ಸಮರ್ಪಕವಾಗಿ
ನಡೆಯುವಂತೆ ನೋಡಿಕೊಂಡರು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಭಕ್ತರಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.
ಹಡ್ಡಲಗಿ ತುಂಬಿದ ಮಹಿಳಾ ಭಕ್ತರು ಕೊಂಚೂರಿನತ್ತ ಹೆಜ್ಜೆ ಹಾಕಿ ಹನುಮನ ದರ್ಶನ ಪಡೆದರು.

ರಥೋತ್ಸವ: ಕೊಂಚೂರು ಶ್ರೀ ಹನುಮಾನ ದೇವರ ರಥೋತ್ಸವ ರವಿವಾರ ಸಂಜೆ ಲಕ್ಷಾಂತರ ಜನ ಭಕ್ತರ
ನಡುವೆ ವಿಜೃಂಭಣೆಯಿಂದ ನೆರವೇರಿತು. ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕರು ಹಾಗೂ ವಿವಿಧ ಮಠಗಳಿಂದ
ಆಗಮಿಸಿದ್ದ ಸ್ವಾಮೀಜಿಗಳು ತೇರಿಗೆ ಪೂಜೆ ಸಲ್ಲಿಸಿದರು. ಭಕ್ತರ ಮಧ್ಯೆ ಹೊರಟ ರಥಕ್ಕೆ ಭಕ್ತರು ಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಕೆಲವರು ಜೈ ಹನುಮ ಎಂದು ಘೋಷಣೆ ಕೂಗಿದರೆ. ಹಲವರು ಜೈ ಭೀಮರಾಯ ಎಂದು ಜಯಕಾರ ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next