Advertisement

ಕೊಂಚೂರ ಹನುಮಾನ್ ದೇವರ ರಥೋತ್ಸವದಲ್ಲಿ ಜನಸ್ತೋಮ :ಭಕ್ತರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ

08:16 PM Dec 19, 2021 | Team Udayavani |

ವಾಡಿ (ಚಿತ್ತಾಪುರ) : ಮಹಾಮಾರಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಭೀತಿಯಲ್ಲೇ ರವಿವಾರ ಕೊಂಚೂರು ಶ್ರೀಹನುಮಾನ ದೇವರ ರಥೋತ್ಸವ ಕೇವಲ ಹತ್ತಡಿ ಚಲಿಸಿ ನಿಂತಿತು.

Advertisement

ತಾಲೂಕು ಆಡಳಿತದ ಆದೇಶದನ್ವಯ ತೇರು ಮೂಲ ಸ್ಥಳದಿಂದ ಸಾಗುತ್ತಿದ್ದಂತೆ ಪೊಲೀಸರು ರಥಬೀದಿಯಲ್ಲಿ ವಾಹನವನ್ನು ನಿಲ್ಲಿಸಿ ರಥೋತ್ಸವ ಪಾದಗಟ್ಟೆಗೆ ಹೋಗುವುದನ್ನು ತಡೆದರು. ಈ ವೇಳೆ ಭಕ್ತರ ಉದ್ಘೋಷ ಮುಗಿಲು ಮುಟ್ಟಿತು. ರಥೋತ್ಸವ ವೇಳೆ ಜಮಾಯಿಸಿದ್ದ ಅಸಂಖ್ಯಾತ ಭಕ್ತರು ತೇರು ಏಳೆದು ಸಂಭ್ರಮಿಸಿದರು. ಮೊದಲು ನಿಂತ ತೇರಿಗೆ ಹಣ್ಣು ಎಸೆದ ಭಕ್ತಸಾಗರ, ನಂತರ ನಿಧಾನವಾಗಿ ಮುಂದೆ ಸಾಗಿದ ಹನುಮನ ತೇರಿಗೆ ಮುಗಿಬಿದ್ದು ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ಸೇರಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಪ್ರಸಂಗ ಎದುರಾಯಿತು.

ಪೊಲೀಸರು ಲಾಠಿ ಬೀಸುತ್ತಿದ್ದಂತೆ ರಥದ ಸುತ್ತಲೂ ನೆರೆದಿದ್ದ ಭಕ್ತರು ಓಡಲು ಮುಂದಾದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದು ಅಪಾಯ ಎದುರಿಸಿದರು. ದೇವಸ್ಥಾನದಲ್ಲಿ ಭಕ್ತರು ಸಾಲುಗಟ್ಟಿ ದೇವರ ದರ್ಶನ ಪಡೆದುಕೊಂಡರು. ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ಪಿಎಸ್ ಐ ವಿಜಯಕುಮಾರ ಭಾವಗಿ, ಜಾತ್ರೆಗೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಇದನ್ನೂ ಓದಿ :ಪ್ರೀತಿ ನಿರಾಕರಿಸಿದಕ್ಕೆ ಬೆಂಕಿ ಹಚ್ಚಿ ತಾನೂ ಜೀವ ಕಳೆದುಕೊಂಡ! 

 

Advertisement
Advertisement

Udayavani is now on Telegram. Click here to join our channel and stay updated with the latest news.

Next