Advertisement
ನದಿಯಲ್ಲಿ ಹರಿಯುವ ನೀರಿಗೆ ಖಾಸಗಿ ವ್ಯಕ್ತಿಗಳು ತಡೆಯೊಡ್ಡಿದ್ದರಿಂದ ಇಳಂತಿಲ ಗ್ರಾಮದ ಕಡವಿನಬಾಗಿಲು ಬಳಿ ಪಂಚಾಯತ್ ನಿರ್ಮಿಸಿದ ಭಾರೀ ಗಾತ್ರದ ಬಾವಿ ಬತ್ತಿ ಹೋಗುವ ಆತಂಕ ಎದುರಾಗಿತ್ತು. ಇದರಿಂದ ಎಚ್ಚೆತ್ತ ಇಳಂತಿಲ ಗ್ರಾ.ಪಂ. ಅಧ್ಯಕ್ಷ ಇಸುಬು ಪೆದಮಲೆ ಹಾಗೂ ಸದಸ್ಯ ಯು.ಟಿ. ಫಯಾಜ್ ಅಹಮ್ಮದ್ ಅವರು ನದಿ ನೀರಿನ ಹರಿವಿಗೆ ತಡೆಯಾಗಿರುವ ಕಾರಣವನ್ನು ಪತ್ತೆಹಚ್ಚಿದರು. ಕೆಂಪಿಮಜಲು ಎಂಬಲ್ಲಿ ಮರಳಿನ ಹಾಗೂ ಚರಳಿನ ಚೀಲವನ್ನು ನೀರಿಗೆ ಅಡ್ಡಲಾಗಿ ಇರಿಸಿದ್ದನ್ನು ಗಮನಿಸಿ, ತತ್‌ಕ್ಷಣವೇ ಜೆಸಿಬಿ ಹಾಗೂ ಕಾರ್ಮಿಕರನ್ನು ಕರೆಸಿ, ಸತತ ಆರು ಗಂಟೆಗಳ ಕಾಲ ಕೆಲಸ ನಿರ್ವಹಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಈ ಪ್ರಯತ್ನದಿಂದಾಗಿ ನದಿ ಪಕ್ಕದಲ್ಲಿ ಗ್ರಾ.ಪಂ. ನಿರ್ಮಿಸಿರುವ ಕಾಂಕ್ರೀಟ್ ಬಾವಿಗೆ ನೀರು ಹರಿದಿದೆ.
Advertisement
ಕೆಂಪಿಮಜಲು: ನದಿ ನೀರು ತಡೆದಿದ್ದ ಮರಳು ಚೀಲಗಳ ತೆರವು
09:04 PM May 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.