Advertisement

ಭಾರತ- ಚೀನಾ ಗಡಿಯಲ್ಲಿ ಕೋಮಲ್‌!

11:36 AM Aug 20, 2019 | Team Udayavani |

ನಟ ಕೋಮಲ್‌ “ಕೆಂಪೇಗೌಡ -2′ ಚಿತ್ರದ ಮೂಲಕ ಒಂದಷ್ಟು ಗಮನಸೆಳೆದಿದ್ದು ಗೊತ್ತೇ ಇದೆ. ಆ ಸಿನಿಮಾ ನೋಡಿದವರೆಲ್ಲರಿಗೂ ಕೋಮಲ್‌ ಒಬ್ಬ ಮಾಸ್‌ ಹೀರೋ ಆಗಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಆ ಚಿತ್ರದ ಮೂಲಕ ಪಕ್ಕಾ ಆ್ಯಕ್ಷನ್‌ ಹೀರೋ ಅಂತಾನೆ ಗುರುತಿಸಿಕೊಂಡ ಕೋಮಲ್‌, “ಕೆಂಪೇಗೌಡ -2′ ನಂತರ ಮತ್ತೆ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

Advertisement

ಹೌದು, ಕೋಮಲ್‌ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದರ ಹೆಸರು “ಕುಂಗ್‌ ಕಾ ಪಾಸ್‌’. ಈ ಹೆಸರು ಕೇಳಿದರೆ, ಒಂದಷ್ಟು ಮಂದಿಗಂತೂ ಬೇಗನೇ ಅರ್ಥ ಆಗಲ್ಲ. ಹೌದು, “ಕುಂಗ್‌ ಕಾ ಪಾಸ್‌’ ಎಂಬುದು ಚೀನಾ ಹಾಗು ಭಾರತ ಗಡಿ ಭಾಗದ ಹೆಸರು. ಅಲ್ಲಿಗೆ ಅದೊಂದು ಪಕ್ಕಾ ಮಾಸ್‌ ಸಿನಿಮಾ ಆಗುತ್ತೆ ಎಂಬುದರಲ್ಲಿ ಅನುಮಾನವಿಲ್ಲ. “ಕುಂಗ್‌ ಕಾ ಪಾಸ್‌’ ಚಿತ್ರದಲ್ಲಿ ಕೋಮಲ್‌ ಅವರು ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಲ್ಲಿರುವ ಫೋಟೋ ಆ ಪಾತ್ರವನ್ನು ಸೂಚಿಸುತ್ತದೆ. ಇನ್ನು, ಈ ಚಿತ್ರವನ್ನು ನಿರೋಷ್‌ ಮೋಹನ್‌ ನಿರ್ದೇಶನ ಮಾಡುತ್ತಿದ್ದಾರೆ. ಕೋಮಲ್‌ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಹೆಸರು ಪಕ್ಕಾ ಆಗಿದ್ದು, ಉಳಿದಂತೆ ಯಾರೆಲ್ಲ ತಂತ್ರಜ್ಞರು, ಕಲಾವಿದರು ಇರುತ್ತಾರೆ ಎಂಬ ವಿವರ ಇಲ್ಲ. ಅಂದಹಾಗೆ, “ಕುಂಗ್‌ ಕಾ ಪಾಸ್‌’ ಚಿತ್ರದ ಪೋಸ್ಟರ್‌ ಕೋಮಲ್‌ ಅವರ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next