Advertisement

ಮತ್ತೆ ಪ್ರೇಕ್ಷಕರೆದುರು ಕೋಮಲ್; ಏ.14ಕ್ಕೆ ಉಂಡೆನಾಮ ಚಿತ್ರ ಬಿಡುಗಡೆ

11:04 AM Mar 21, 2023 | Team Udayavani |

ನಟ ಕೋಮಲ್‌ ಶೀಘ್ರದಲ್ಲಿಯೇ “ಉಂಡೆನಾಮ’ ಹಾಕಿಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ನಟ ಕೋಮಲ್‌ ಅಭಿನಯದ ಹೊಸ ಸಿನಿಮಾಕ್ಕೆ “ಉಂಡೆನಾಮ’ ಎಂದು ಟೈಟಲ್‌ ಇಡಲಾಗಿದ್ದು, ಸದ್ದಿಲ್ಲದೆ “ಉಂಡೆನಾಮ’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಏಪ್ರಿಲ್‌ 14ರಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

Advertisement

ಸದ್ಯ “ಉಂಡೆನಾಮ’ ಸಿನಿಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಸ್ಯಾಂಡಲ್‌ವುಡ್‌ನ‌ ಅನೇಕ ಸೆಲೆಬ್ರಿಟಿಗಳು ಟೈಟಲ್‌ ಹೇಳುವುದರ ಮುಖಾಂತರ ವಿನೂತನವಾಗಿ “ಉಂಡೆನಾಮ’ ಟೈಟಲ್‌ ಅನಾವರಣ ಗೊಳಿಸಿದೆ.

ಇನ್ನು “ಉಂಡೆನಾಮ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರದ ಸಿನಿಮಾ. ಕೋಮಲ್‌ ಅವರೊಂದಿಗೆ ಹರೀಶ್‌ ರಾಜ್‌, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವಾ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಂಕ್‌ ಜನಾರ್ಧನ್‌ ಮುಂತಾದವರು “ಉಂಡೆನಾಮ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಎಲ್ಲಾ ಗೌರವ ಸ್ಥಾನಮಾನ ಕೊಟ್ಟರೂ ಚಿಂಚನಸೂರು ಕಾಂಗ್ರೆಸ್ ಗೆ ಹೋದರು; ಸಿಎಂ ಬೊಮ್ಮಾಯಿ

“ಎನ್‌. ಕೆ ಸ್ಟುಡಿಯೋಸ್‌’ ಬ್ಯಾನರ್‌ ಅಡಿಯಲ್ಲಿ ಸಿ. ನಂದ ಕಿಶೋರ್‌ ನಿರ್ಮಿಸಿರುವ “ಉಂಡೆನಾಮ’ ಸಿನಿಮಾಕ್ಕೆ “ಮಜಾ ಟಾಕೀಸ್‌’ ಖ್ಯಾತಿಯ ಸಂಭಾಷಾಣೆಗಾರ ಕೆ. ಎಲ್. ರಾಜಶೇಖರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್‌ ಸಂಭ್ರಮ ಸಂಗೀತ ಸಂಯೋಜಿಸಿದ್ದು, ನವೀನ್‌ ಕುಮಾರ್‌ ಛಾಯಾಗ್ರಹಣ, ಕೆ. ಎಂ ಪ್ರಕಾಶ್‌ ಸಂಕಲನವಿದೆ.

Advertisement

ಒಟ್ಟಾರೆ ಬಹು ದಿನಗಳ ನಂತರ ನಗುವಿನ ಕಚುಗುಳಿ ಇಡೋಕೆ ಬರುತ್ತಿರುವ ಕೋಮಲ್‌ “ಉಂಡೆನಾಮ’ ಹೇಗಿರಲಿದೆ ಎಂಬುದು ಏಪ್ರಿಲ್‌ ವೇಳೆಗೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next