Advertisement

ರಜಿನಿ “Thalaivar 171”ಗೆ ಕನಕರಾಜ್ ಆ್ಯಕ್ಷನ್ ಕಟ್: ಸ್ಟಾರ್‌ ನಟನಿಂದ ಗುಟ್ಟು ರಿವೀಲ್

01:34 PM Jul 17, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್ ರಜಿನಿಕಾಂತ್‌ ಅವರ ವಯಸ್ಸು 70 ದಾಟಿದರೂ 20 ರ ಯುವಕನಂತೆ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ʼಜೈಲರ್‌ʼ, ʼಲಾಲ್‌ ಸಲಾಂʼ ಸಿನಿಮಾದ ಬಳಿಕವೂ ರಜಿನಿ ಶೆಡ್ಯೂಲ್‌ ಭರ್ತಿಯಾಗಿದೆ.

Advertisement

ಇತ್ತೀಚೆಗೆ‌ ಖ್ಯಾತ ನಟ ಬಾಬು ಆಂಟನಿ ಅವರು ರಜಿನಿಕಾಂತ್‌ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದೇನೆ ಎಂದು ಹೇಳಿ ಅದನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾತು ಕಾಲಿವುಡ್‌ ನಲ್ಲಿ ಹವಾ ಎಬ್ಬಿಸಿದೆ.

ಇತ್ತೀಚೆಗೆ ನನಗೆ ರಜಿನಿಕಾಂತ್‌ ಅವರ ಸಿನಿಮಾದಲ್ಲಿ ನಟಿಸಲು ಸಂಪರ್ಕಿಸಿದ್ದಾರೆ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ.

ಬಾಬು ಆಂಟನಿ ವಿಜಯ್‌ ಅವರ ʼಲಿಯೋʼ ಸಿನಿಮಾದಲ್ಲೂ ನಟಿಸಿದ್ದಾರೆ. ರಜಿನಿಕಾಂತ್‌ “ತಲೈವರ್ 171” ಸಿನಿಮಾದಲ್ಲಿ ನಟಿಸಲು ಅವರನ್ನು ಸಂಪರ್ಕಿಸಲಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಅವರ ಎರಡನೇ ಬಾರಿ ಲೋಕೇಶ್ ಕನಕರಾಜ್ ಚಿತ್ರದಲ್ಲಿ ಅವರು ನಟಿಸಿದಂತಾಗುತ್ತದೆ. ಈ ಹಿಂದೆ ಬಾಬು ಆಂಟನಿ ರಜಿನಿಕಾಂತ್‌ ಅವರ ʼಒರು ನಲ್ಲವನ್ʼ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ಓದಿ: B-town: ಗರ್ಭಿಣಿಯಾದ ಬಳಿಕ ಡೇಟ್‌ ನೈಟ್‌; ಮೊದಲ ಬಾರಿಗೆ ಪ್ರಿಯಕರನ ಫೋಟೋ ಹಂಚಿಕೊಂಡ ಇಲಿಯಾನಾ

Advertisement

ರಜಿನಿಕಾಂತ್‌ “ತಲೈವರ್ 171” ಸಿನಿಮಾದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎನ್ನುತ್ತಾರೆ ನಟ ಬಾಬು ಆಂಟನಿ.

ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ ನಲ್ಲಿ ರಜಿನಿಕಾಂತ್‌ ಕಾಣಿಸಿಕೊಳ್ಳುತ್ತಾರ ಇಲ್ವೋ ಎನ್ನುವುದು ಇನ್ನು ಅಧಿಕೃತವಾಗಿ ಗೊತ್ತಾಗಬೇಕಿದೆ. ಈಗಾಗಲೇ ಲೋಕೇಶ್‌ ಅವರ ಯೂನಿವರ್ಸ್‌ ಸಿನಿಮಾಗಳಲ್ಲಿ ಕಮಲ್ ಹಾಸನ್, ವಿಜಯ್, ಸೂರ್ಯ, ಕಾರ್ತಿ ಮತ್ತು ಫಹದ್ ಫಾಸಿಲ್ ಅವರು ಮಿಂಚಿದ್ದಾರೆ.

ಲೋಕೇಶ್‌ ಕನಕರಾಜ್‌ ಅವರ “ತಲೈವರ್ 171” ರ ನಂತರ ರಜಿನಿಕಾಂತ್ ನಟನೆಯಿಂದ ನಿವೃತ್ತಿ ಪಡೆಯುವ ಬಗ್ಗೆ ಯೋಚನೆ ಮಾಡಿದ್ದಾರೆ ಎಂದು ನಿರ್ಮಾಪಕ ಮಿಸ್ಕಿನ್ ಈ ಹಿಂದೆ ಹೇಳಿದ್ದರು.

ಸದ್ಯ ರಜಿನಿಕಾಂತ್‌ ನೆಲ್ಸನ್‌ ಅವರ ʼಜೈಲರ್‌ʼ ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮ ಆಗಸ್ಟ್‌ 10 ರಂದು ರಿಲೀಸ್‌ ಆಗಲಿದೆ.  ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು ಮೋಹನ್ ಲಾಲ್ ಅವರು ನಟಿಸಿದ್ದಾರೆ. ಇತ್ತ ಮಗಳು ಐಶ್ವರ್ಯಾ ಅವರ ʼಲಾಲ್‌ ಸಲಾಂʼ ಚಿತ್ರದ ಶೂಟಿಂಗ್‌ ನ್ನು ಇತ್ತೀಚೆಗೆ ಮುಗಿಸಿದ್ದಾರೆ. ಇದಾದ ನಂತರ ಜೈ ಭೀಮ್ ಖ್ಯಾತಿಯ ಟಿ.ಜೆ.ಜ್ಞಾನವೇಲ್ ಅವರ “ತಲೈವರ್ 170” ಚಿತ್ರದಲ್ಲಿ ರಜಿನಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next