Advertisement

ಕೋಲಿ ಸಮಾಜ ಏಳ್ಗೆಗೆ ಯತ್ನ

12:33 PM Mar 05, 2018 | |

ಹುಮನಾಬಾದ: ರಾಜ್ಯ ಸರ್ಕಾರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಿಂದುಳಿದ ಅಂಬಿಗರ, ಗಂಗಾಮತ, ಕೋಲಿ, ಕಬ್ಬಲಿಗ ಸಮುದಾಯಗಳ ಏಳ್ಗೆಗಾಗಿ ಶ್ರಮಿಸುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಪಟ್ಟಣದ ತೇರು ಮೈದಾನದಲ್ಲಿ ರವಿವಾರ ಗಂಗಾಮತ ಕೋಲಿ ಕಬ್ಬಲಿಗ ಟೋಕ್ರೆ ಕೋಲಿ, ಅಂಬಿಗರ ಚೌಡಯ್ಯ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರ ಬೀದರ ಜಿಲ್ಲೆಗೆ ನಿಗಮದ ಅಧ್ಯಕ್ಷಸ್ಥಾನ ನೀಡಿದೆ. ಈ ಭಾಗದ ಸಮುದಾಯ ಜನರ ಏಳ್ಗೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದೆ. 

ಕಾಂಗ್ರೆಸ್‌ ಸರ್ಕಾರ ಎಲ್ಲಾ ಜಾತಿ ಧರ್ಮಗಳ ಜನರನ್ನು ಸಮನಾಗಿ ಕಾಣುವ ಮೂಲಕ ಎಲ್ಲರ ಸವರ್ತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕ್ಷೇತ್ರದಲ್ಲಿ ಕೂಡ ಸಮುದಾಯದ ಜನರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಯಾವುದೇ ಒಂದು ಸಮುದಾಯ ಆರ್ಥಿಕವಾಗಿ ಬೆಳೆಯಬೇಕಾದರೆ ಆ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಎಲ್ಲರೂ ಏಕತೆಯಿಂದ ಸಂಘಟಿತರಾಗಿದ್ದರೆ ಮಾತ್ರ ಆ ವರ್ಗದ ಜನರ ಏಳ್ಗೆ ಸಾಧ್ಯ ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, ಹಿಂದುಳಿದ ಅಂಬಿಗರ, ಗಂಗಾಮತ, ಕೋಲಿ, ಕಬ್ಬಲಿಗ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿರುವ ಸಮಾಜದ ಮುಖಂಡರಿಗೆ ನಾನು ಕೂಡ ಬೆಂಬಲ ನೀಡುತ್ತೇನೆ. ರಾಜ್ಯ ಸರ್ಕಾರದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಂಡು ದೆಹಲಿಗೆ ಬಂದರೆ ನಾನು ಕೂಡ ಸಮಾಜದ ಜನರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

Advertisement

ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿ, ಸಮುದಾಯದ ಜನರು ದುಶ್ಚಟಗಳನ್ನು ಬಿಟ್ಟು, ಆಳುವವರ ಗುಲಾಮರಾಗದೆ,
ಸ್ವಾವಲಂಬಿ ಜೀವನ ಮಾಡುವಂತರಾಗಬೇಕು. ನೇರ ನುಡಿಗಳಿಂದ ಗುರುತಿಸಿಕೊಂಡ ಅಂಬಿಗರ ಚೌಡಯ್ಯ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನಕ್ಕೆ ಅರ್ಥ ದೊರೆಯುತ್ತದೆ ಎಂದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ನಸಿಮೋದ್ದಿನ್‌ ಪಟೇಲ, ಅಂಕುಶ ಗೋಖಲೆ, ದತ್ತಾತ್ರೇಯ ಮಹಾರಾಜ, ಸಮಾಜ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದರ, ಶಿವಾಜಿ ಮೇಟಿಗಾರ, ಸೋಮನಾಥ ಪಾಟೀಲ, ಗೌರಮ್ಮ ನರನಾಳ, ಶಾರದಾಬಾಯಿ ಬಾವಗಿ, ಲಕ್ಷ್ಮಣ ಔಂಟಿ, ಸುಭಾಷ ಅಂತಪ್ಪಗಂಗಾ, ಶಾಲಿನಿ ವಾಡೇಕರ್‌, ಶಾಂತಪ್ಪಾ ಕೋಡಿ, ಅರವಿಂದ ಪಾಟೀಲ, ಸುನೀಲ ಖಾಶೆಂಪುರ, ರಾಜು ಪಂಚಾಳ, ಶಿವಶಂಕರ ಹಡಪದ, ದತ್ತು ಲದ್ದಿ, ನಾಗಭೂಷಣ ಸಂಗಮ, ಅಶೋಕ ಹಣಕುಣಿ, ದಯಾನಂದ ಮೇತ್ರಿ, ಶಂಕರ ಡಾಕುಳಗಿ, ನರಸಪ್ಪ ನರನಾಳ, ಅರುಣ ಬಾವಗಿ, ಸಂಜು ಗೌಳಿ, ವೀರಣ್ಣ ಹಳ್ಳಿಖೇಡ(ಕೆ), ಬಸವರಾಜ ಸದಲಾಪುರೆ, ಶಿವರಾಜ ಮಂಗಲಗಿ ಸೇರಿದಂತೆ ಸಮಾಜದ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next