Advertisement

ಕೊಲ್ಲೂರು: ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ಭೀತಿ

10:50 PM Jan 01, 2023 | Team Udayavani |

ಕೊಲ್ಲೂರು: ಶಾಲಾ ಮಕ್ಕಳ ಶೆ„ಕ್ಷಣಿಕ ಪ್ರವಾಸದ ನಡುವೆ ಹೆಚ್ಚುತ್ತಿರುವ ಅಯ್ಯಪ್ಪ ಭಕ್ತರ ತೀರ್ಥ ಕ್ಷೇತ್ರ ದರ್ಶನವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಪರಿಸರದ ಸ್ವತ್ಛತೆ ಮೇಲೆ ಪರಿಣಾಮ ಬೀರಿದ್ದು, ವಿವಿಧೆಡೆಯಲ್ಲಿ ಎಸೆಯಲಾಗಿರುವ ತ್ಯಾಜ್ಯ ಸಹಿತ ಪರಿಸರ ಮಾಲಿನ್ಯದಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

Advertisement

ಸ್ವತ್ಛತೆಗೆ ಆದ್ಯತೆ ಅಗತ್ಯ
ಪ್ರತಿದಿನ ಕನಿಷ್ಠ 200ಕ್ಕೂ ಮಿಕ್ಕಿ ಶಾಲಾ ಮಕ್ಕಳ ಪ್ರವಾಸದ ಬಸ್‌ಗಳು ಕೊಲ್ಲೂರಿಗೆ ಆಗಮಿಸುತ್ತಿವೆ. ಅದರೊಡನೆ ಶಬರಿಮಲೆ ಅಯ್ಯಪ್ಪ
ಸ್ವಾಮಿ ಭಕ್ತರು ಕೂಡ ರಾಜ್ಯದ ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಬಹುತೇಕ ಶಾಲಾ ಮಕ್ಕಳು ರಾತ್ರಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ರಸ್ತೆಯ ಇಕ್ಕೆಲಗಳಲ್ಲಿ ಪ್ರವಾಸದ ದಣಿವಾರಿಸಲು ಇದನ್ನು ಬಳಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಹಾಲ್ಕಲ್‌ ಪರಿಸರದ ರಸ್ತೆ ಬದಿಯಲ್ಲಿ ವಿಶ್ರಾಂತಿಗಾಗಿ ತಂಗುತ್ತಿರುವುದು ಕಂಡುಬಂದಿದ್ದು ರಾತ್ರಿ ಕೂಡ ಅದೇ ಪ್ರದೇಶವನ್ನು ಆಶ್ರಯಿಸುತ್ತಿದ್ದಾರೆ.

ವಿವಿಧ ಕಾಡು ಪ್ರಾಣಿಗಳು ಸಂಚರಿಸುತ್ತಿರುವ ಈ ಭಾಗದಲ್ಲಿ ಹೆದ್ದಾರಿಯನ್ನೇ ವಿಶ್ರಾಂತಿಗೋಸ್ಕರ ಬಳಸುತ್ತಿರುವ ವಿದ್ಯಾರ್ಥಿಗಳಿಗೆ ರಾತ್ರಿ ಪ್ರಾಣಿಗಳ ದಾಳಿಯ ಭೀತಿ ಇದೆ. ದೇಗುಲದ ವಿವಿಧೆಡೆ ಖಾಲಿ ಜಾಗದಲ್ಲಿ ಪ್ರವಾಸಿಗರು ಬಹಿರ್ದೆಸೆ ಮಾಡುತ್ತಿರುವುದರಿಂದ ಈ ಪರಿಸರದಲ್ಲಿ ಮಾಲಿನ್ಯ ಹೆಚ್ಚುತ್ತಿದೆ.

ಡಿಸೆಂಬರ್‌ನಲ್ಲಿ ಶೆ„ಕ್ಷಣಿಕ ಪ್ರವಾಸದ ವಿದ್ಯಾರ್ಥಿಗಳ ದಂಡು ಕೊಲ್ಲೂರಿಗೆ ಹರಿದುಬಂದಿದೆ. ವಸತಿಗƒಹ ಸಹಿತ ವಿವಿಧೆಡೆ ಭರ್ತಿಯಾಗಿರುವುದರಿಂದ ವಿದ್ಯಾರ್ಥಿಗಳು ಬಸ್‌ ನಿಲ್ದಾಣದಲ್ಲಿ ತಂಗಬೇಕಾಯಿತು. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಶೆ„ಕ್ಷಣಿಕ ಪ್ರವಾಸಕ್ಕೆ ಬಂದ ಕಾರಣ ಕೊಲ್ಲೂರು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ.

ವ್ಯವಸ್ಥೆ ವಂಚಿತ ವಿದ್ಯಾರ್ಥಿಗಳು
ಮುಂಗಡವಾಗಿ ವಸತಿಗƒಹವನ್ನು ಸಂಪರ್ಕಿಸದ ಕಾರಣ ಬಸ್‌ ನಿಲ್ದಾಣ ಇನ್ನಿತರ ಕಡೆಗಳಲ್ಲಿ ವಿದ್ಯಾರ್ಥಿಗಳು ರಾತ್ರಿ ಮಲಗಬೇಕಾದ ಪರಿಸ್ಥಿತಿ ಇದೆ. ಇವರಿಗೆ ಸ್ನಾನ ಶೌಚಾಲಯದ ಸಮಸ್ಯೆ ಇದ್ದು, ಗೊಂದಲಮಯವಾದ ಇವರ ಶೆ„ಕ್ಷಣಿಕ ಪ್ರವಾಸವು ಅನೇಕ ಟೀಕೆ ಹಾಗೂ ಕಿರಿಕಿರಿಗೆ ಕಾರಣವಾಗಿದೆ.

Advertisement

ಮಕ್ಕಳ ಸುರಕ್ಷತೆಗೆ ಇರಲಿ ನಿಗಾ
ರಾಜ್ಯ ವಿವಿದೆಢೆಯಿಂದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಶೆ„ಕ್ಷಣಿಕ ಪ್ರವಾಸಕ್ಕೆ ಬರುತ್ತಿರುವ ಶಾಲಾ ಮಕ್ಕಳ ಸುರಕ್ಷತೆಗೆ ಶಿಕ್ಷಕರ ಸಹಿತ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ.
ಮಕ್ಕಳ ಪ್ರವಾಸಕ್ಕೆ ಮುಂಚೆ ಆಯ್ದ ದೇಗುಲಗಳಲ್ಲಿ ಅಥವಾ ಇನ್ನಿತರ ಪ್ರದೇಶಗಳಲ್ಲಿ ಸುರಕ್ಷತೆಯ ನೆಲೆಯಲ್ಲಿ ಒದಗಿಸಬೇಕಾದ ಸೌಕರ್ಯಗಳ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ಶೀಘ್ರ ಲೋಪ ಸರಿಪಡಿಸಲಾಗುವುದು
ನಿರೀಕ್ಷೆಗೂ ಮೀರಿದ ಭಕ್ತರು ದಾಖಲೆಯ ಸಂಖ್ಯೆಯಲ್ಲಿ ಕ್ಷೇತ್ರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಶಾಲಾ ಮಕ್ಕಳ ಶೆ„ಕ್ಷಣಿಕ ಪ್ರವಾಸದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಸೌಕರ್ಯ ಒದಗಿಸುವಲ್ಲಿ ಲೋಪದೋಷ ಎದುರಾಗಿರಬಹುದು.ಎಲ್ಲವನ್ನೂ ಸರಿಪಡಿಸಲಾಗುವುದು.-ಕೆರಾಡಿ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಕೊಲ್ಲೂರು ದೇಗುಲ

ಪರಿಸರ ಸ್ವತ್ಛತೆಗೆ ಆದ್ಯತೆ ನೀಡಿ
ಶಾಲಾ ಮಕ್ಕಳ ಶೆ„ಕ್ಷಣಿಕ ಪ್ರವಾಸದಲ್ಲಿ ಮಕ್ಕಳ ಸುರಕ್ಷತೆಗಾಗಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಅಂತೆಯೇ ಕೊಲ್ಲೂರಿನ ಪರಿಸರ ಸ್ವತ್ಛತೆಗೆ ಇಲಾಖೆ ಹಾಗೂ ದೇಗುಲ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
-ಜಗದೀಶ ಕೊಲ್ಲೂರು, ವಿಹಿಂಪ ಬೆ„ಂದೂರು ತಾಲೂಕು ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next