Advertisement
ಬೆಳಗ್ಗೆ ಕಂಬದ ಗಣಪತಿ ಪೂಜೆ ಹಾಗೂ ಕಲಶ ಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಇದೇ ವೇಳೆ ಚಾಲನೆ ನೀಡಲಾಯಿತು.
Related Articles
ಸ್ವರ್ಣಮುಖೀ ಸಭಾಭವನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ ಕುಮಾರ್ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.
Advertisement
ವಿದ್ಯಾರಂಭಕ್ಕೆ ಸಾವಿರಾರು ಭಕ್ತರ ನಿರೀಕ್ಷೆ ಆ. 8ರಂದು ಬೆಳಗ್ಗಿನ ಜಾವದಿಂದ ಸರಸ್ವತಿ ಮಂಟಪದಲ್ಲಿ ನಡೆ ಯುವ ವಿದ್ಯಾರಂಭಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಕ್ಕಳ ನಾಲಗೆಯ ಮೇಲೆ ಚಿನ್ನದುಂಗುರದಿಂದ ಓಂಕಾರ ಬರೆಸುವುದಲ್ಲದೇ ಅಕ್ಕಿಯಲ್ಲಿ ಅಕ್ಷರಾಭ್ಯಾಸ ನಡೆಸುವ ಪದ್ಧತಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೊಲ್ಲೂರಿನಲ್ಲಿ ವಿದ್ಯಾರಂಭ ಮಾಡಿದ ಮಕ್ಕಳು ಮೇಧಾವಿಗಳಾಗುವರು ಎಂಬುದು ನಂಬಿಕೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಆ ದಿನ ಮಕ್ಕಳಿಗೆ ನವಾನ್ನ ಪ್ರಾಶನ ಕೂಡ ಮಾಡಲಾಗುತ್ತದೆ. ಅ. 7ರ ಮಹಾನವಮಿಯಂದು ಬೆಳಗ್ಗೆ 11.30ಕ್ಕೆ ಚಂಡಿಕಾ ಯಾಗ ಹಾಗೂ ಮಧ್ಯಾಹ್ನ ರಥೋತ್ಸವದಲ್ಲಿ ಎಸೆಯುವ ನಾಣ್ಯಗಳನ್ನು ಸಂಗ್ರಹಿಸಲು ಸಾವಿರಾರು ಭಕ್ತರು ಮುಗಿ ಬೀಳುತ್ತಾರೆ.