Advertisement

ಕೊಲ್ಲೂರು: ಮಿತವಾಗಿ ನೀರಿನ ಬಳಕೆಗೆ ಸೂಚನೆ

10:19 PM May 17, 2019 | Team Udayavani |

ಕೊಲ್ಲೂರು: ಕೊಲ್ಲೂರು ಪರಿಸರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಗೊಳ್ಳುತ್ತಿರುವಂತೆ ವಿದ್ಯುತ್‌ ಲೋ ವೋಲ್ಟೆàಜ್‌ ಈ ಭಾಗದ ಮಂದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Advertisement

ನಾಶವಾದ ಕೃಷಿ
ಈ ಭಾಗದ ಅನೇಕ ಗ್ರಾಮಗಳಲ್ಲಿನ ತೆಂಗು-ಕಂಗು, ಬಾಳೆ ಸಹಿತ ಇನ್ನಿತರ ಬೇಸಾಯವು ನೀರಿನ ಅಭಾವದೊಡನೆ ಪಂಪ್‌ಸೆಟ್‌ ಗಳಲ್ಲಿನ ಲೋ ವೋಲ್ಟೆàಜ್‌ ಪ್ರಕ್ರಿಯೆಯಿಂದಾಗಿ ನಾಶವಾಗಿದೆ. ಬಹುತೇಕರು ವರುಣನಿಗೆ ಮೊರೆಹೋಗಿದ್ದಾರೆ.

ನೀರಿಗಾಗಿ ಪರಿತಪಿಸುವ ಕಾಡುಪ್ರಾಣಿಗಳು
ನದಿ- ಹಳ್ಳಗಳು ಬರಿದಾಗಿರುವುದರಿಂದ ಅರಣ್ಯ ಭಾಗದಲ್ಲಿ ವಾಸವಾಗಿರುವ ಕಾಡು ಕೋಣ, ಕಾಡು ಹಂದಿ, ಜಿಂಕೆ, ಮಂಗಗಳು ಕೂಡ ಕಂಗಾಲಾಗಿವೆ. ಇವುಗಳೂ ನೀರು ಹುಡುಕಿಕೊಂಡು ನಗರ ಪ್ರದೇಶದತ್ತ ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ನೀರಿನ ಉಪಯೋಗಕ್ಕೆ ನಿರ್ಬಂಧ
ಕೊಲ್ಲೂರು ದೇಗುಲ ಸಹಿತ ಈ ಭಾಗದ ಖಾಸಗಿ ಅತಿಥಿ ಗƒಹಗಳಲ್ಲಿ ಎದುರಾದ ನೀರಿನ ಸಮಸ್ಯೆಯಿಂದಾಗಿ ಮಿತವಾದ ನೀರಿನ ಬಳಕೆಗೆ ಸೂಚಿಸಲಾಗಿದ್ದು ಭಕ್ತಾದಿಗಳು ಕನಿಷ್ಠ ಪ್ರಮಾಣದಲ್ಲಿ ನೀರನ್ನು ಬಳಸುವಂತೆ ವಿನಂತಿಸಲಾಗಿದೆ.

ಹರಿದುಬಂದ ಭಕ್ತ ಸಾಗರ
ಎರಡು ದಿನಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು ಶುಕ್ರವಾರ 10,000ಕ್ಕೂ ಹೆಚ್ಚು ಭಕ್ತರು ಶ್ರೀ ದೇವಿಯ ದರ್ಶನ ಪಡೆದರು.ದಿನೇ ದಿನೇ ಹೆಚ್ಚುತ್ತಿರುವ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ದೇಗುಲದ ಸಮಿತಿಯು ಶ್ರಮಿಸುತ್ತಿದ್ದು, ಎದುರಾಗಿರುವ ನೀರಿನ ಸಮಸ್ಯೆ ನಿಭಾಯಿಸಲು ಟ್ಯಾಂಕರ್‌ ಮೂಲಕ ನೀರನ್ನು ಸಂಗ್ರಹಿಸಿ ವಿತರಿಸಲಾಗುತ್ತಿದೆ. ದೇಗುಲದ ಅತಿಥಿ ಗೃಹಗಳಲ್ಲಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೀರನ್ನು ಸಂಗ್ರಹಿಸಲಾಗುತ್ತಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next