Advertisement

ಕೊಲ್ಲೂರು ದೇವಸ್ಥಾನ: 4,10,74,078 ಕೋ.ರೂ. ಆದಾಯ

07:28 AM May 13, 2021 | Team Udayavani |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯವು 2020-21ನೇ ಆರ್ಥಿಕ ವರ್ಷದಲ್ಲಿ 4,10,74,078 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ (2019-20ರಲ್ಲಿ) 8,29,72,292 ರೂ ಆದಾಯ ಗಳಿಸಿತ್ತು.

Advertisement

ಈ ವರ್ಷ ಎದುರಾದ ಲಾಕ್‌ಡೌನ್‌ ಕಾರಣ ಕಳೆದ ಬಾರಿಗಿಂತ 4 ಕೋಟಿ ರೂ. ಆದಾಯ ಕಡಿಮೆಯಾಗಿದೆ. ದೇಗುಲದ ದೈನಂದಿನ ಖರ್ಚು ವೆಚ್ಚ, ಸಿಬಂದಿಯ  ಮಾಸಿಕ ವೇತನ, ವಿದ್ಯುತ್‌, ಊಟೋಪಚಾರ, ಭಕ್ತರ ಅನ್ನದಾಸೋಹ ಖರ್ಚು ಕೂಡ ಇದರಲ್ಲಿ ಅಡಕವಾಗಿದೆ.

ಭಕ್ತರ ಅನೂಕೂಲಕ್ಕೆ ಆದ್ಯತೆ

ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಕಲ ಸೌಕರ್ಯ ಒದಗಿಸಲು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ಬಹುತೇಕ ಪೂರ್ಣಗೊಂಡಿರುವ ಕಾಮಗಾರಿಗಳಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸುವಲ್ಲಿ ಎದುರಾಗಿರುವ ಸಮಸ್ಯೆಯನ್ನು ಶಾಸಕರು, ಸಂಸದರು, ಗ್ರಾ.ಪಂ. ಸದಸ್ಯರು, ಜಿಲ್ಲಾಡಳಿತ ಹಾಗೂ ಭಕ್ತರ ಸಲಹೆ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next