Advertisement

ಅನ್ನದಾಸೋಹದ ಕೇಂದ್ರ ಶ್ರೀ ಮೂಕಾಂಬಿಕಾ ಭೋಜನ ಶಾಲೆ

09:14 PM Feb 01, 2020 | Sriram |

ವಿಶೇಷ ವರದಿ-ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇಗುಲದ “ಮೂಕಾಂಬಿಕಾ ಅನ್ನ ಪ್ರಸಾದ’ ಭೋಜನ ಶಾಲೆಯು ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಾ ಣಗೊಂಡು 3 ತಿಂಗಳು ಕಳೆದಿದ್ದು, ದಾಖಲೆಯ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.

Advertisement

ಉತ್ತಮ ವ್ಯವಸ್ಥೆ
ಕಳೆದ ಹಲವು ವರ್ಷಗಳಿಂದ ಹಳೆಯ ಕಟ್ಟದಲ್ಲಿ ನೆಲದ ಮೇಲೆ ಕುಳಿತು ಅನ್ನಪ್ರಸಾದ ಸ್ವೀಕರಿಸುವ ವ್ಯವಸ್ಥೆ ಇತ್ತು. ನೂತನ ಭೋಜನ ಶಾಲೆಯಲ್ಲಿ ಏಕಕಾಲದಲ್ಲಿ 900 ಭಕ್ತರು 2 ಪ್ರತ್ಯೇಕ ಕೊಠಡಿಗಳಲ್ಲಿ ಟೇಬಲ್‌ ಊಟ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ ಹವಾನಿಯಂತ್ರಿತ 2 ಕೊಠಡಿಗಳಲ್ಲಿ 900 ಭಕ್ತರು ಏಕಕಾಲದಲ್ಲಿ ಭೋಜನಕ್ಕಾಗಿ ಕಾಯುವ ವ್ಯವಸ್ಥೆಯಿದೆ.

ವಿನೂತನ ಅಡುಗೆ ಕೋಣೆ
ಸಂಪೂರ್ಣವಾಗಿ ಹೊಸ ಮಾದರಿಯ ಅಡುಗೆ ತಯಾರಿ ಉಪಕರಣಗಳನ್ನು ಬಳಸಲಾಗುತ್ತಿದ್ದು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಿ ದವಸ ಧಾನ್ಯ, ತರಕಾರಿಗಳನ್ನು ಬಳಸಲಾಗುತ್ತಿದೆ.

ನಿತ್ಯ 350 ಕೆ.ಜಿ. ಅಕ್ಕಿ ಬಳಕೆ
ದೇಗುಲಕ್ಕೆ ಪ್ರತಿದಿನ ಕನಿಷ್ಠ 6000 ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದು. 4000 ಮಂದಿ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ರಜಾ ದಿನಗಳಲ್ಲಿ 450 ಕೆ.ಜಿ.ಅಕ್ಕಿ ಬಳಸಲಾಗುತ್ತಿದ್ದು ಮಧ್ಯಾಹ್ನ ಹಾಗೂ ರಾತ್ರಿ ಆಗಮಿಸುವ ಎಲ್ಲಾ ಭಕ್ತರಿಗೆ ಉಟದ ವ್ಯವಸ್ಥೆಇದೆ.

Advertisement

ದಾಖಲೆಯ ಭಕ್ತರು
ಕಳೆದ ನವರಾತ್ರಿಯಿಂದ ಡಿಸೆಂಬರ್‌ ತನಕ ಭೋಜನ ಶಾಲೆಯಲ್ಲಿ 900 ಕೆ.ಜಿ. ಅಕ್ಕಿ ಬಳಕೆಯಾಗಿದ್ದು 10000 ಮಂದಿ ಭಕ್ತರು ದಿನಂಪ್ರತಿ ಅನ್ನ ಪ್ರಸಾದ ಸ್ವೀಕರಿಸಿದ್ದರು.
ಭೋಜನ ಶಾಲೆಯಲ್ಲಿ 40 ಮಂದಿ ನೌಕರಿದ್ದಾರೆ. ಪಾಕ ತಜ್ಞರಾಗಿ 8 ಮಂದಿಯನ್ನು ನಿಯೋಜಿಸಲಾಗಿದೆ.

ಸಕಲ ವ್ಯವಸ್ಥೆ
ಎಲ್ಲಾ ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರಿಗೆ ಅನ್ನ ಪ್ರಸಾದ ಸ್ವೀಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಭೋಜನ ಶಾಲೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಲಾಗಿದೆ
-ಅರವಿಂದ ಎ.ಸುತಗುಂಡಿ,
ಮುಖ್ಯಕಾರ್ಯನಿರ್ವಹಣಾಧಿಕಾರಿ,ಶ್ರೀಕ್ಷೇತ್ರ ಕೊಲ್ಲೂರು

ಅಭಿವೃದ್ಧಿಗೆ ಪೂರಕ
ಕೊಲ್ಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ. ವೆಂಟೆಡ್‌ ಡ್ಯಾಮ್‌, ಕುಡಿಯವ ನೀರಿನ ವ್ಯವಸ್ಥೆ ,ಒಳ ಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗುತ್ತಿದೆ.
-ಹರೀಶ್‌ ಕುಮಾರ್‌ ಶೆಟ್ಟಿ,ಅಧ್ಯಕ್ಷರು,ವ್ಯವಸ್ಥಾಪನ ಸಮಿತಿ, ಶ್ರೀ ಕ್ಷೇತ್ರ ಕೊಲ್ಲೂರು.

Advertisement

Udayavani is now on Telegram. Click here to join our channel and stay updated with the latest news.

Next