Advertisement
ಏನಿದು ಪಿಯಾನೋ ಕೀ ಅಣೆಕಟ್ಟು ?
ಸಂಗೀತ ಉಪಕರಣ ಪಿಯಾನೋ ಕೀ ಮಾದರಿಯಲ್ಲಿರುವ ಈ ಅಣೆಕಟ್ಟು ವಿಶಿಷ್ಟವಾದ ವಿನ್ಯಾಸ ಹೊಂದಿದ್ದು, ನೀರನ್ನು ತಡೆಗಟ್ಟುವುದರೊಂದಿಗೆ ರಭಸವಾಗಿ ಹರಿಯುವುದನ್ನೂ ನಿಯಂತ್ರಿಸುತ್ತದೆ. 2.22 ಕೋಟಿ ರೂ. ವೆಚ್ಚದಲ್ಲಿ ಈ ಅಣೆಕಟ್ಟು ರೂಪುತಳೆಯುತ್ತಿದ್ದು, ಹರಿಯುವ ನೀರನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಪ್ರಯೋಜನಕಾರಿಯಾಗಿದೆ.
ಸಾಮಾನ್ಯ ಅಣೆಕಟ್ಟಿನಲ್ಲಿ ನೀರ ಹರಿವಿಗೆ ಅಡ್ಡಲಾಗಿ ಕಾಂಕ್ರೀಟ್ ಗೋಡೆ ಕಟ್ಟಲಾಗುತ್ತದೆ. ಆದರೆ ಇಲ್ಲಿ ಅಡ್ಡಲಾಗಿ ಪಿಯಾನೋ ಕೀ ಮಾದರಿಯಲ್ಲಿ ಕಾಂಕ್ರೀಟ್ ಸ್ಲಾéಬ್‌ಗಳಿದ್ದು ನೀರಿನ ಮಟ್ಟ ನಿಗದಿತ ಪ್ರಮಾಣದಿಂದ ಹೆಚ್ಚಾದ ಬಳಿಕ ಅದನ್ನು ಹಾದು ಹೋಗುತ್ತದೆ. ಇದರಿಂದ ಅಧಿಕ ಪ್ರಮಾಣದ ನೀರಿನ ಹರಿವಿನ ಸಂದರ್ಭ ಅಣೆಕಟ್ಟೆಯ ಮೇಲೆ ಒತ್ತಡ ಬೀಳದು. ಜತೆಗೆ ಸ್ಥಳೀಯವಾಗಿ ಸಾಕಷ್ಟು ನೀರು ಒದಗಿಸಲೂ ಸಾಕಾಗುತ್ತದೆ.
ಇತರ ಅಣೆಕಟ್ಟುಗಳಿಗೆ ಹೋಲಿಸಿದಲ್ಲಿ ಇದರ ವೆಚ್ಚ, ನಿರ್ವಹಣೆ ವೆಚ್ಚವೂ ಕಡಿಮೆ. 50 ಮೀ. ಉದ್ದ, 4 ಮೀ. ಎತ್ತರಕ್ಕೆ ಈ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಹೆಚ್ಚಿನ ನೀರು ಬದಿಯಲ್ಲಿ ಸೋರಿಕೆಯಾಗಬಾರದೆಂಬ ಉದ್ದೇಶದಿಂದ ಬದಿಯಲ್ಲಿ ಕಿಂಡಿ ಅಣೆಕಟ್ಟಿನ ಮಾದರಿ ಗೇಟ್‌ಗಳನ್ನು ಹಾಕಲಾಗುವುದು. ಪ್ರಾಯೋಗಿಕವಾಗಿ ರಾಜ್ಯದಲ್ಲೇ ಪ್ರಥಮವಾಗಿ ಮಾಡಲಾಗಿರುವ ಈ ಕಿಂಡಿ ಅಣೆಕಟ್ಟು ಕೊಲ್ಲೂರಿನ ನಿವಾಸಿಗಳಿಗೆ ಉಪಯೋಗ ಆಗಲಿದೆ. ಮುಂದಿನ ತಿಂಗಳು ಲೋಕಾರ್ಪಣೆ
ಅಣೆಕಟ್ಟು ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗೇಟ್ ನಿರ್ಮಾಣ ನಡೆಯುತ್ತಿದೆ. ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
Related Articles
ರಾಜ್ಯದಲ್ಲೇ ಪ್ರಥಮವಾಗಿ ಪ್ರಾಯೋಗಿಕ ನೆಲೆಯಲ್ಲಿ ನಿರ್ಮಿಸಲಾಗುತ್ತಿರುವ ಪಿಯಾನೋ ಕೀ ಕಿಂಡಿ ಅಣೆಕಟ್ಟು ಪೋಲಾಗುವ ನೀರಿನ ಬಳಕೆಗೆ ಉಪಯೋಗಕಾರಿಯಾಗಿದೆ.
–ಆಲ್ವಿನ್,
ಸಹಾಯಕ ಇಂಜಿನಿಯರ್, ಸಣ್ಣ ನಿರಾವರಿ ಇಲಾಖೆ
Advertisement
ಕೃಷಿ ಭೂಮಿಗೆ ನೀರುದಡಿ ಆಸು-ಪಾಸಿನ ನಿವಾಸಿಗಳಿಗೆ ನೀರಿನ ಲಭ್ಯತೆಗೆ ಹಾಗೂ ಕೃಷಿ ಭೂಮಿಗೆ ನೀರುಣಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು -ಡಾ| ಸುಧಾಕರ್ ನಂಬಿಯಾರ್