Advertisement
ಸುಮಾರು 8 ವರ್ಷಗಳ ಹಿಂದೆ ಉದ್ಘಾಟನೆಯಾದ ಸೋಲಾರ್ ಬೆಳಕಿನ ಈ ಯೋಜನೆಯಿಂದ ಕೊಲ್ಲೂರು ಪೇಟೆಗೆ ಹೆಚ್ಚಿನ ಬೆಳಕು ಕಾಣಲು ಸಾಧ್ಯ ಎನ್ನುವ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದ್ದು ಯೋಜನೆಯನ್ನು ಅರ್ಧಕ್ಕೆ ಕೈಬಿಡಲಾಗಿದೆ.
ಸೋಲಾರ್ ದಾರಿದೀಪದ ನಿರ್ವಹಣೆ ಕಾಮಗಾರಿಯ ಗುತ್ತಿಗೆದಾರರಿಗೆ ಆರಂಭಿಕ ಹಂತದಲ್ಲಿ ಪಾವತಿಸಬೇಕಾದ ಅರ್ಧದಷ್ಟು ಮೊತ್ತವನ್ನು ಗ್ರಾ.ಪಂ. ಮೂಲಕ ನೀಡಲಾಗಿತ್ತು. ಬಳಿಕ ನಿರ್ವಹಣೆಗೆ ಕಂಪೆನಿ ಎಡವಿದ್ದರಿಂದ ಯೋಜನೆ ಅರ್ಧಕ್ಕೆ ನಿಂತಿದೆ. ನಿರುಪಯುಕ್ತ ಬ್ಯಾಟರಿ
ಸೋಲಾರ್ ಸಂಪರ್ಕ ಕಲ್ಪಿಸುವ ಕಂಪೆನಿ ಆರಂಭದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ವಿದ್ಯುತ್ ಬಳಸಿದ್ದು, ಇದರಿಂದ ಪಂಚಾಯತ್‌ಗೆ ಹೆಚ್ಚಿನ ವಿದ್ಯುತ್ ಬಿಲ್ಲಿನ ಹೊರೆ ಬಿದ್ದಿತ್ತು.
Related Articles
ಗುತ್ತಿಗೆದಾರ 25 ಬ್ಯಾಟರಿಗಳನ್ನು ಅಳವಡಿಸಿ ಸೋಲಾರ್ ವಿದ್ಯುತ್ ಸಂಪರ್ಕಕ್ಕೆ ಮಾಡಿದ ಪ್ರಯತ್ನ ವಿಫಲವಾಯಿತು. ಇದರಿಂದ ಬ್ಯಾಟರಿಗಳು ಪಂಚಾಯತ್‌ನಲ್ಲಿ ನಿರುಪಯುಕ್ತವಾಗಿ ಉಳಿದಿವೆ.
Advertisement
ಕಂಪೆನಿ ಮೇಲೆ ದೂರು ನಿರ್ವಹಣೆಯ ಜವಾಬ್ದಾರಿ ಹೊತ್ತ ಕಂಪನಿ ಮೇಲೆ ಗ್ರಾ.ಪಂ. ಜಿ.ಪಂ. ಗೆ ದೂರು ನೀಡಿದ್ದು, ತನಿಖೆ ನೆಡೆಸಿ ಕ್ರಮ ಕೈಗೊಳ್ಳವಂತೆ ಆಗ್ರಹಿಸಿದೆ. ಆದರೆ ಯಾವುದೇ ಪ್ರಯೋಜನ ಕಂಡುಬಂದಿಲ್ಲ ಎಂದು ಪಂ. ಸದಸ್ಯರು ದೂರಿದ್ದಾರೆ. ತಾಂತ್ರಿಕ ದೋಷ
ಗ್ರಾ.ಪಂ. ವಠಾರದಲ್ಲಿ ಸುಮಾರು 6 ವರ್ಷಗಳ ಹಿಂದೆ ಆರಂಭಿಸಲಾಗಿದ್ದ ಗ್ರಾಮೀಣ ಸೌರಶಕ್ತಿ ಯೋಜನೆ ಯಶಸ್ಸು ಕಂಡುಕೊಂಡಿದ್ದಲ್ಲಿ ಸುಮಾರು 65 ದಾರಿದೀಪ ಬೆಳಗುವ ಅವಕಾಶವಿತ್ತು. ಆದರೆ ಆರಂಭದ ಹಂತದಲ್ಲೇ ಎದುರಾದ ತಾಂತ್ರಿಕ ದೋಶ ನಿಭಾಯಿಸುವಲ್ಲಿ ಗುತ್ತಿಗೆದಾರರು ಎಡವಿರುವುದು ಪ್ರಕಾಶ ಚೆಲ್ಲುವಲ್ಲಿ ವಿಫಲಗೊಂಡಿದೆ. ರಾಜ್ಯದಲ್ಲೇ ಪ್ರಥಮ ಸೌರಶಕ್ತಿ ವಿದ್ಯುದ್ದಿಕರಣ ದಾರಿದೀಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ವ್ಯವಸ್ಥೆಗೆ ಜಿ.ಪಂ.ನಿಂದ ರೂ 6 ಲಕ್ಷ ಮೊತ್ತ ನೀಡಲಾಗಿತ್ತು. ಮಿಕ್ಕುಳಿದ ಹಣವನ್ನು ಯೋಜನೆ ಅಪೂರ್ಣಗೊಂಡಿರುವುದರಿಂದ ತಡೆ ಹಿಡೆಯಲಾಗಿತ್ತು.
-ಸತೀಶ್, ಮಾಜಿ. ಪಿಡಿಒ ಕೊಲ್ಲೂರು ಗ್ರಾ.ಪಂ.