Advertisement

ಕೊಲ್ಲೂರು ಗಡಿ ಪ್ರದೇಶ: ಬಿಗುಗೊಂಡ ವ್ಯವಸ್ಥೆ

08:33 PM Apr 23, 2020 | Team Udayavani |

ಕೊಲ್ಲೂರು: ಕೊಲ್ಲೂರು ಗಡಿ ಪ್ರದೇಶದಲ್ಲಿ ಪೋಲಿಸ್‌ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು ವಾಹನಗಳ ಸಂಚಾರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.

Advertisement

ಚೆಕ್‌ ಪೋಸ್ಟ್‌ ನಲ್ಲಿ ಎಲ್ಲಾ ವಾಹನಗಳ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ನಿಗದಿತ ಸಮಯದೊಳಗೆ ಹಿಂದಿರುಗುವಂತೆ ಪ್ರತಿಯೋರ್ವರನ್ನು ಎಚ್ಚರಿಸುತ್ತಿರುವುದು ಕಂಡು ಬಂತು. ಚೆಕ್‌ಪೋಸ್ಟ್‌ ಬಳಿ ಇರುವ ಅರಣ್ಯ ಪ್ರದೇಶದ ಮೂಲಕ ಅಪರಿಚಿತರು ನುಸು ಳದಂತೆ ಎಲ್ಲೆಡೆ ಪೊಲೀಸ್‌ ಸರ್ಪಗಾವಲು ಇದ್ದು ಪ್ರತಿಯೋರ್ವರ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸಿ ಯಾರೂ ಗಡಿ ಯೊಳಗೆ ಪ್ರವೇಶಿಸದಂತೆ ಭದ್ರತಾ ನೆಲೆಯಲ್ಲಿ ಕ್ರಮಕೈಗೊಂಡಿದ್ದಾರೆ.

ದೇಗುಲದ ಮುಖ್ಯ ಗೇಟಿಗೆ ಬೀಗ
ದೇಗುಲದ ಪ್ರವೇಶ ದ್ವಾರದ ಮುಖ್ಯ ಗೇಟಿಗೆ ಬೀಗ ಜಡಿಯಲಾಗಿದ್ದು ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರ ಲಾಗಿದೆ. ದೇಗುಲದಲ್ಲಿ ಪೊಲೀಸ್‌, ಭದ್ರತಾ ಸಿಬಂದಿಗಳು, ಆರ್ಚಕರಲ್ಲದೇ ಮತ್ಯಾರು ಕಂಡುಬಂದಿಲ್ಲ. ಕೊಡಚಾದ್ರಿಯ ಸರ್ವಜ್ಞ ಪೀಠವು ಭಕ್ತರ ಸಂಚಾರವಿಲ್ಲದೇ ಪ್ರಕೃತಿ ರಮ್ಯ ಸೌಂದರ್ಯದ ನಡುವೆ ಮೌನ ಅವರಿಸಿದೆ. ಕೊಡಚಾದ್ರಿಯ ತಪ್ಪಲಿನ ಶ್ರೀ ಮೂಕಾಂಬಿಕಾ ದೇವಿಯ ಸನ್ನಿ ಯಲ್ಲಿ ಭಕ್ತರಿಲ್ಲದೇ ನಿಶ್ಯಬ್ಧ ವಾತಾವರಣ ಕಂಡು ಬಂದಿದೆ. ಪೇಟೆಯ ಉದ್ದಗಲಕ್ಕೂ ಭಕ್ತ ಸಂಚಾವಿಲ್ಲದೇ ಬಿಕೋ ಅನ್ನುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next