ಓಣಂ ಮತ್ತು ಆ ಪ್ರಯುಕ್ತ ರಜೆಯ ಹಿನ್ನೆಲೆಯಲ್ಲಿ ಕೇರಳದಿಂದ ಬರುವ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಶ್ರೀ ದೇವಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಕೆಲವು ಗಂಟೆ ಕಾಲ ಕಾಯಬೇಕಾಯಿತು.
Advertisement
ಸುರಿಯುತ್ತಿರುವ ಮಳೆಯ ನಡುವೆಯೂ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಆಗಮಿಸಿದ್ದು, ಜನಸ್ತೋಮ ನಿಯಂತ್ರಣಕ್ಕೆ ದೇಗುಲದ ಭದ್ರತಾ ಸಿಬಂದಿ ಹರಸಾಹಸ ಪಡಬೇಕಾಯಿತು. ದೇಗುಲದಲ್ಲಿ ಚಂಡಿಕಾ ಹೋಮ ಸಹಿತ ವಿದ್ಯಾರಂಭಕ್ಕೆ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಶುಕ್ರವಾರ 15 ಸಾವಿರಕ್ಕೂ ಮಿಕ್ಕಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.
ದೇಗುಲದ ವಸತಿಗೃಹ ಮತ್ತು ಖಾಸಗಿ ವಸತಿಗೃಹಗಳೂ ತುಂಬಿದ್ದು, ಆಗಮಿಸಿದ ಭಕ್ತರು ಕುಂದಾಪುರ, ಹೆಮ್ಮಾಡಿ ಪರಿಸರದಲ್ಲಿ ತಂಗಬೇಕಾಯಿತು.