Advertisement
ನಗರಸಭಾ ಕಟ್ಟಡದಲ್ಲಿ ನೆಲ ಮಹಡಿಯಲ್ಲಿ 31 ಮಳಿಗೆ ಹಾಗೂ ಮೊದಲ ಅಂತಸ್ತಿನಲ್ಲಿ9 ಕೊಠಡಿ ಸೇರಿದಂತೆ ಒಟ್ಟು40ಮಳಿಗೆಗಳು ಇವೆ. 1991ರಲ್ಲಿ ಪ್ರತಿ ಕೊಠಡಿಗೆ 2,247 ರೂ.ನಂತೆ ಮಾಸಿಕ ಬಾಡಿಗೆ ನೀಡಲಾಗಿದೆ. ಇದರಲ್ಲಿ ಎರಡು ಮಳಿಗೆಗಳು ಮಾತ್ರ ಖಾಲಿ ಇವೆ. ಒಂದು ಮಳಿಗೆಗೆ ವಾರ್ಷಿಕವಾಗಿ 26,964 ರೂ. ಸಂದಾಯವಾಗಲಿದೆ. 1991 ರಿಂದ 2020ರವರೆಗೂ ಹಳೆಯ ಬಾಡಿಗೆ ದರವನ್ನು ಪಡೆಯಲಾಗುತ್ತಿದೆ. ಮಳಿಗೆ ಹಂಚಿಕೆಗೆ ಮೀಸಲಾತಿ ಕೂಡ ಪ್ರಕಟ ಆಗಿದೆ. ಮೀಸಲಾತಿಯಂತೆ ಪರಿಷ್ಕೃತ ದರ ನಿಗದಿಪಡಿಸಿ ಹರಾಜು ಮಾಡಿದರೆ ಆದಾಯ ಹೆಚ್ಚಾಗಲಿದೆ.
Related Articles
Advertisement
ಕೈ ಬಾಡಿಗೆ: ಹಳೆಯ ನಗರಸಭಾ ಮಳಿಗೆಯ ನೆಲ ಮಹಡಿಯಲ್ಲಿ ಸಾರ್ವಜನಿಕರಿಗೆ ಬಾಡಿಗೆಗಾಗಿ ಕೊಠಡಿಗಳನ್ನು ನೀಡಲಾಗಿದೆ. ಕೊಠಡಿಗಳನ್ನು ಪಡೆದ ಮಾಲೀಕರು ಹೆಚ್ಚಿನ ಬಾಡಿ ಗೆಗೆ ಕೈಯಿಂದ ಕೈಗೆ ಬಾಡಿಗೆ ನೀಡಿ ದುಪ್ಪಟ್ಟು ಹಣ ಗಳಿಸುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ. ಕೂಡಲೇ ನೆಲ ಮಹಡಿ ಮತ್ತು ಮೊದಲನೇ ಮಹಡಿಯ ಕೊಠಡಿಗಳನ್ನು ಮೀಸಲಾತಿ ಪ್ರಕಾರ ವಿಂಗಡನೆ ಮಾಡಿ ಕೊಠಡಿಗಳನ್ನು ಹಂಚಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಬಾಡಿಗೆ ನಿರ್ಬಂಧ: ಮಳಿಗೆಯನ್ನು ನಿರುದ್ಯೋಗಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಮೀಸಲಾತಿಯ ಆಧಾರದಂತೆ ಅಂಗ ಡಿಯನ್ನು ಹಂಚಬೇಕಿದೆ. ಯಾರಿಗೆ ಮಳಿಗೆ ನಿಗದಿಯಾಗಿರು ತ್ತದೋ ಅವರು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಇತರರಿಗೆ ಬಾಡಿಗೆಗೆ ನೀಡದಂತೆ ನಿರ್ಬಂಧ ವಿಧಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.
ಸರ್ಕಾರಿ ಆದೇಶ: ಈಗಾಗಲೇ ಮಳಿಗೆಯನ್ನು ಮೀಸಲಾತಿಯಂತೆ ಹಂಚಿಕೆ ಮಾಡಿ ಟೆಂಡರ್ ಕರೆಯುವಂತೆ ಸೂಕ್ತ ನಿರ್ದೇಶನ ನೀಡಿದ್ದರೂ ಸಹ ಅಧಿಕಾರಿಗಳು ಟೆಂಡರ್ ಕರೆದಿಲ್ಲ. ಆದೇಶವನ್ನು ಮರೆಮಾಚುವಂತೆ ಮಾಡುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಅಧಿಕಾರಿಗಳು ಸರ್ಕಾರಿ ಆದೇಶದಂತೆ ಮಳಿಗೆಗಳ ಟೆಂಡರ್ ಕರೆದು ಅಂಗಡಿಗಳ ಹಂಚಿಕೆ ಮಾಡ ಬೇಕು. ಈ ಮೂಲಕ ಸಂಪನ್ಮೂಲ ಕ್ರೋಢೀಕರಿಸಿ ನಗರಾಭಿ ವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪರಿಷ್ಕೃತ ದರದಿಂದ ಸಿಗುವ ಆದಾಯ-20ಲಕ್ಷ ರೂ.ಗೂ ಅಧಿಕ : ನಗರಸಭೆಕಟ್ಟಡದಲ್ಲಿನ40 ಮಳಿಗೆಗಳಿಗೆ29 ವರ್ಷದಿಂದಲೂ ಹಳೇ ದರವನ್ನೇ ನಿಗದಿಪಡಿಸಲಾಗಿದೆ. ಒಂದು ಮಳಿಗೆಗೆ ವಾರ್ಷಿಕ 26,964 ರೂ. ಸಂಗ್ರಹವಾಗುತ್ತಿದೆ. ಆದರೆ, ಹೊರದರ ಪರಿಷ್ಕರಿಸಿ ಟೆಂಡರ್‌ಕರೆದರೆಕನಿಷ್ಠ ಒಂದು ಮಳಿಗೆಗೆ ಮಾಸಿಕ4 ಸಾವಿರ ರೂ. ಸಿಗಲಿದ್ದು, ವಾರ್ಷಿಕವಾಗಿ 40 ಮಳಿಗೆಗಳಿಗೆ19.20 ಲಕ್ಷ ರೂ. ಸಂಗ್ರಹವಾಗಲಿದೆ. ಟೆಂಡರ್‌ನಲ್ಲಿ ಬಾಡಿಗೆದಾರರು ಪೈಪೋಟಿ ನೀಡಿದರೂ 20 ಲಕ್ಷಕ್ಕೂ ಅಧಿಕ ಆದಾಯ ಸಿಗುವ ಸಾಧ್ಯತೆ ಇದೆ. ಸಂಪನ್ಮೂಲ ಕ್ರೋಢೀಕರಿಸಲು ಅವಕಾಶವಿದ್ದರೂ ನಗರಸಭೆ ನಿರ್ಲಕ್ಷ್ಯ ವಹಿಸಿದೆ.
ಹಳೇ ದರದಿಂದ ಸಿಗುವ ಆದಾಯ-10.24ಲಕ್ಷ ರೂ. : ಹಳೆಯ ನಗರಸಭೆಕಟ್ಟಡದಲ್ಲಿ ನೆಲ ಮಹಡಿಯಲ್ಲಿ31 ಮಳಿಗೆ ಹಾಗೂ ಮೊದಲ ಅಂತಸ್ತಿನಲ್ಲಿ9 ದೊಡ್ಡ ಮಳಿಗೆಗಳು ಇವೆ. ಒಟ್ಟು40 ಮಳಿಗೆಗಳು ಇವೆ.2 ಕೊಠಡಿಗಳು ಮಾತ್ರ ಖಾಲಿಇವೆ. ಪ್ರತಿ ಮಳಿಗೆಗೆ2,247 ರೂ.ನಂತೆ ವಾರ್ಷಿವಾಗಿ 26,964 ರೂ. ಸಂಗ್ರಹವಾಗುತ್ತಿದೆ.38 ಮಳಿಗೆಗಳಿಗೆ ವಾರ್ಷಿಕ10.24 ಲಕ್ಷ ರೂ. ಸಿಗುತ್ತಿದೆ. ಮಳಿಗೆಗಳಿಗೆ ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುತ್ತಳತೆಯ ಆಧಾರದ ಮೇರೆಗೆ ನಿಗದಿಪಡಿಸುತ್ತಾರೆ. ಇದರಂತೆ ಬಾಡಿಗೆ ಹಣವನ್ನು ಮಾಲೀಕರು ನಗರಸಭೆಗೆ ಸಂದಾಯ ಮಾಡುತ್ತಾರೆ.
ನಗರಸಭೆಗೆ ಚುನಾವಣೆ ನಡೆದು 2 ವರ್ಷ ಪೂರೈಸಿದ್ದು, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಇತ್ತೀಚೆಗೆಷ್ಟೇ ಮಾಡಲಾಗಿದೆ. ಅತಿ ಶೀಘ್ರದಲ್ಲಿ ನಗರಸಭಾ ಸದಸ್ಯರ ಸಾಮಾನ್ಯ ಸಭೆಕರೆದು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. – ಗಂಗಮ್ಮ, ನಗರಸಭೆ ಅಧ್ಯಕ್ಷೆ
ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಇತ್ತೀಚೆಗಷ್ಟೆ ನಡೆದಿದೆ.ಕೂಡಲೇ ನಗರಸಭಾ ಸದಸ್ಯರ ಸಭೆಕರೆದು ಚರ್ಚಿಸಿಮೀಸಲಾತಿಯಂತೆ ಮಳಿಗೆಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡಲುಕ್ರಮಕೈಗೊಳ್ಳಲಾಗುವುದು. – ವಿಜಯ್, ನಗರಸಭೆ ಪೌರಾಯುಕ್ತ
– ಡಿ.ನಟರಾಜು