ಕೊಳ್ಳೇಗಾಲ: ನಗರದ 23 ನೇ ವಾರ್ಡಿನ ವಕೀಲ್ ರಾಮಯ್ಯ ಬಡಾವಣೆಯ ನಿವಾಸಿಗಳು ಕಲುಷಿತ ನೀರು ಸೇವಿಸಿ ನಾಲ್ವರು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನ.6ರ ಬುಧವಾರ ನಡೆದಿದೆ.
ಬಡಾವಣೆಯ ಅಯಿಷ್ ಷರೀಫ್ ಪ್.ಐ ಯಿಷ ರಿಜ್ವಾನ್ ಖಾನ್ ಸಿಭ್ರಮಾನ್ ಎಂಬವರು ವಾಂತಿ ಮತ್ತು ಬೇದಿಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಲ್ವರ ಪೈಕಿ ಅಯಮ್ ಷರೀಪ್, ಐಯಿಷ ತೀವ್ರ ನಿತ್ರಾಣಗೊಂಡ ಹಿನ್ನಲೆ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಡಾವಣೆಯ ಜನರು ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎ೦ದು ಒತ್ತಾಯಿಸಿದರು.
ನಗರ ಸಭೆಯ ಅಧ್ಯಕ್ಷೆ ರೇಖಾ ಆಸ್ಪತ್ರೆಗೆ ಭೇಟಿ ನೀಡಿ, ಯೋಗ ಕ್ಷೇಮ ವಿಚಾರಿಸಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಅವಾಂತರ ಸೃಷ್ಠಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾಂತಿ ಮತ್ತು ಭೇದಿಗೆ ಕಾರಣ ತಿಳಿದುಬಂದಿಲ್ಲ. ಆಸ್ಪತ್ರೆಯಲ್ಲಿ ದಾಖಲಾಗಿರುವವರನ್ನು ಪರೀಕ್ಷೆಗೆ ಒಳಪಡಿಸಿ ಕಾರಣ ಪತ್ತೆ ಮಾಡಬೇಕಾಗಿದೆ ಎ೦ದು ತಾಲೂಕು ವೈದ್ಯಧಿಕಾರಿ ಡಾ.ಗೋಪಾಲ್ ತಿಳಿಸಿದ್ದಾರೆ.