Advertisement

ಕೊಳ್ಳೇಗಾಲ: ರಕ್ತ ಚಂದನ ಸಾಗಿಸುತ್ತಿದ್ದ ಮೂವರ ಬಂಧನ

10:27 PM Jun 29, 2023 | Team Udayavani |

ಕೊಳ್ಳೇಗಾಲ: ಬೆಂಗಳೂರಿನಿಂದ ತಮಿಳುನಾಡಿನಲ್ಲಿ ಮಾರಾಟ ಮಾಡಲು ರಕ್ತ ಚಂದನ ಮರವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರ ತಂಡ ಗುರುವಾರ ಮೂವರನ್ನು ಬಂಧಿಸಿದ್ದಾರೆ.

Advertisement

ಬೆಂಗಳೂರಿನ ವಿಜಯನಗರದ ನಿವಾಸಿ ಅರುಣ್ ಕುಮಾರ್ (26) .ಬೆಂಗಳೂರಿನ ಪಂಡಿತರ ಪಾಳ್ಯ ನಿವಾಸಿ ಆನಂದ್ (46)ತುಮಕೂರಿನ ಸೋಮೇಶ್ವರಪುರಂನ ಮುಸಾಫ್ ( 52)ಎಂಬುವವರು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿಯ ಮೇರಗೆ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಇರುವ ಹಳೆಯ ಅರಣ್ಯ ಚೆಕ್ ಪೋಸ್ಟ್ ಬಳಿ ಕಾದು ಕುಳಿತ ಸಿಬಂದಿಗಳು ಕೊನೆಗೂ ಬೆಂಗಳೂರು ಕಡೆಯಿಂದ ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದಂತೆ ಕಾರನ್ನು ತಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂದಿತ ಆರೋಪಿಗಳ ಕಾರಿನಲ್ಲಿದ್ದ 17.04 ಲಕ್ಷರೂ ಬೆಲೆ ಬಾಳುವ 284 ತೂಕದ 14 ರಕ್ತ ಚಂದನ ಮರದ ತುಂಡು, ಮೂರು ಮೊಬೈಲ್ ಒಂದು ಕಾರು, 13 20 ನಗದು ವಶಪಡಿಸಿಕೊಂಡಿದ್ದಾರೆ.

ಪೋಲೀಸ್ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ವಿಜಯರಾಜ್ ಪುಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಬಫರ್ ಜೋನ್ ಅಧಿಕಾರಿಗಳ ವಶಕ್ಕೆ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಸಿಬಂದಿಗಳಾದ ರಾಮ ಚಂದ್ರ, ಟಕಿ ಉಲ್ಲಾ ಸೇರಿದಂತೆ ಅಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next