Advertisement

ಕೊಲ್ಲಮೊಗ್ರು: ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರಿಂದ ಅಹವಾಲು ಸಲ್ಲಿಕೆ

12:19 AM Feb 11, 2024 | Team Udayavani |

ಸುಳ್ಯ: ಕೊಲ್ಲಮೊಗ್ರು ಮತ್ತು ಹರಿಹರ ಪಳ್ಳತ್ತಡ್ಕ ಗ್ರಾ. ಪಂ. ವ್ಯಾಪ್ತಿಯಲ್ಲಿ, ಭಾಗಶಃ ಅರಣ್ಯ ಸಮಸ್ಯೆ ಸೇರಿ ಅರಣ್ಯ – ಕಂದಾಯ ನಡುವಿನ ಸಮಸ್ಯೆ ಇದೆ. ಪೈಲಟ್‌ ಯೋಜನೆಯಡಿ ಸರ್ವೇ ಮಾಡಿಸಿ ಇಲ್ಲಿನ ಅರಣ್ಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ದ.ಕ. ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

Advertisement

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ದ.ಕ. ಜಿಲ್ಲಾ ಡಳಿತ ವತಿಯಿಂದ ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲಾ ವಠಾರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಗ್ರಾಮಸ್ಥರಿಂದ ಅಹವಾಲು ಆಲಿಸಿ ಮಾತನಾಡಿದರು.

ಬಸ್‌ ಸೇವೆಗೆ ಬೇಡಿಕೆ
ರಜಾ ದಿನಗಳಲ್ಲಿ ಬಸ್‌ ಸೇವೆ ಲಭ್ಯ ಇಲ್ಲ, ಕೆಲವೆಡೆ ಬಸ್‌ ಸಂಚಾರಕಡಿತ ಮಾಡಿರುವ ಬಗ್ಗೆ ಗ್ರಾಮಸ್ಥರು ಪ್ರಸ್ತಾವಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ಜನರ ಸಮಯಕ್ಕೆ ಸರಿಯಾಗಿ ವೇಳಾಪಟ್ಟಿ ತಯಾರಿಸುವಂತೆ, ರಜಾ ದಿನಗಳಲ್ಲೂ ಬಸ್‌ ಸೇವೆ ನೀಡುವಂತೆ ನಿರ್ದೇಶನ ನೀಡಿದರು.

ಗಾಳಿಬೀಡು ರಸ್ತೆಗೆ ಪ್ರಯತ್ನ
ಸುಬ್ರಹ್ಮಣ್ಯ-ಕಡಮಕಲ್ಲು- ಗಾಳಿಬೀಡು ರಸ್ತೆ ಸಂಪರ್ಕಕ್ಕೆ ಕಾನೂನಿನ ಅವಕಾಶಗಳನ್ನು ನೋಡಿಕೊಂಡು ಸರ
ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಯತ್ನಿಸಲಾಗುವುದು ಎಂದರು.

ಟೂರಿಸಂ ಅಭಿವೃದ್ಧಿ ಸಾಧ್ಯ
ಇಲ್ಲಿನ ಇಕೋ ಟೂರಿಸಂ ಅಭಿವೃದ್ಧಿಗೆ ಸರಕಾರದ ಜತೆ ಖಾಸಗಿಯವರ ಸಹಕಾರವೂ ಅಗತ್ಯ. ಖಾಸಗಿಯವರು ಪೂರಕವಾಗಿ ಸ್ಪಂದಿಸಿದರೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಟೂರಿಸಂ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.

Advertisement

ಹರಿಹರ ಪಲ್ಲತ್ತಡ್ಕದಲ್ಲಿ ಮುಚ್ಚಿರುವ ಪ.ಪೂ. ಕಾಲೇಜಿನಲ್ಲಿ ಮುಂದಿನ ವರ್ಷದಿಂದ ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಪುತ್ತೂರು ಸಹಾಯಕ ಆಯುಕ್ತ ಜುಬಿನ್‌ ಮೊಹಾಪಾತ್ರ, ತಹಶಿಲ್ದಾರ್‌ ಮಂಜುನಾಥ್‌, ಡಿಎಫ್ಒ ಆಂಟೋನಿ ಮರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next