ಕೋಲ್ಕತ: ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸದಿಂದ ಸುಮಾರು 2000 ಕಿಮೀ ದೂರದ ಕೋಲ್ಕತ ದಲ್ಲಿ ಬಚ್ಚನ್ ಧಾಮ್ ಇದೆ. ಪ್ರತಿ ದಿನ ಎರಡು ಬಾರಿ (ಬೆಳಗ್ಗೆ 10 ರಿಂದ 11 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ) ಎರಡು ಗಂಟೆಗಳ ಕಾಲ ಅಭಿಮಾನಿಗಳಿಗೆ ದರ್ಶನ ಅವಕಾಶ ನೀಡಲಾಗಿದೆ. ಬಚ್ಚನ್ ಧಾಮ್‌ನಲ್ಲಿ, ಹವಾನಿಯಂತ್ರಿತ ಒಳ ಕೋಣೆಗೆ ಪ್ರವೇಶಿಸಿದಾಗ ಅಭಿಮಾನಿಗಳು ಚಪ್ಪಲಿ ಮತ್ತು ಶೂ ಗಳನ್ನು ತೆಗೆದು ಪ್ರವೇಶಿಸುವ ಪದ್ದತಿ ಅನುಷ್ಠಾನಗೊಳಿಸಲಾಗಿದೆ.
ದೇಶವು ಅಮಿತಾಭ್ ಬಚ್ಚನ್ ಅವರ 80 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ, ಕೋಲ್ಕತ ಸೂಪರ್‌ಸ್ಟಾರ್‌ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಈ ಬಿಗ್ ಬಿ ಪ್ರತಿಮೆ ಸ್ಥಾಪಿಸಿ ಆರಾಧಿಸಲಾಗುತ್ತಿದೆ. ಅಖಿಲ ಬಂಗಾಳದ ಅಮಿತಾಭ್ ಬಚ್ಚನ್ ಅಭಿಮಾನಿಗಳ ಸಂಘದ ಮುಖ್ಯ ಕಾರ್ಯದರ್ಶಿ ಸಂಜಯ್ ಪಟೋಡಿಯಾ, ಬಚ್ಚನ್ ಸ್ವತಃ ಶ್ರೀಕೃಷ್ಣನ ಅವತಾರ ಎಂದು ಹೇಳಿಕೊಂಡಿದ್ದಾರೆ. “ನಾವು ದೇವಾಲಯದ ಹೊರಗೆ ಜನರಿಗೆ ಆಹಾರವನ್ನು ನೀಡುತ್ತೇವೆ, ಚಳಿಗಾಲದಲ್ಲಿ ನಾವು ಕಂಬಳಿಗಳನ್ನು ವಿತರಿಸುತ್ತೇವೆ” ಎಂದು ಪಟೋಡಿಯಾ ಹೇಳಿದ್ದಾರೆ.
22 ವರ್ಷಗಳಿಂದ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಅಭಿಮಾನಿಗಳ ಸಂಘವು ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಾ ಬಂದಿದೆ. “ಈ ವರ್ಷ ಅಮಿತಾಭ್ ಬಚ್ಚನ್ 80 ವರ್ಷಕ್ಕೆ ಕಾಲಿರಿಸಿದ್ದ ಕಾರಣ, ಆರ್ಥಿಕವಾಗಿ ದುರ್ಬಲ ಹಿನ್ನೆಲೆ ಹೊಂದಿದ 80 ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಊಟವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ನಂತರ ನಾವು ನಗರದ ಮಲ್ಟಿಪ್ಲೆಕ್ಸ್‌ನಲ್ಲಿ ಅಮಿತಾಭ್ ಬಚ್ಚನ್ ಚಲನಚಿತ್ರ ಪ್ರದರ್ಶನಗಳನ್ನು ನಡೆಸುತ್ತೇವೆ ಎಂದು ಪಟೋಡಿಯಾ ಹೇಳಿದ್ದಾರೆ.