Advertisement

Kolkata ಟ್ರೈನಿ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ?

11:53 PM Aug 14, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದ ಕೋಲ್ಕತಾದ ಸರಕಾರಿ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ವೈದ್ಯೆಯ ದೇಹದಲ್ಲಿ ಸಾಕಷ್ಟು ಪ್ರಮಾಣದ ವೀರ್ಯವಿದ್ದು ಅತ್ಯಾಚಾರದಲ್ಲಿ ಹಲವರು ಶಾಮೀಲಾಗಿದ್ದಾರೆಂಬ ಶಂಕೆಯಿರುವ ಬಗ್ಗೆ ಆಕೆಯ ಪೋಷಕರು ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದ್ದಾರೆ.

Advertisement

ತಮ್ಮ ಮಗಳ ದೇಹದಲ್ಲಿ ಆದ ಗಾಯಗಳು ಅತ್ಯಾಚಾರ ಹಾಗೂ ಕೊಲೆ ಎಷ್ಟು ಕ್ರೂರವಾಗಿ ನಡೆದಿದೆ ಎಂಬುದನ್ನು ಸೂಚಿಸುತ್ತದೆ. ಶವಪರೀಕ್ಷೆಯಲ್ಲಿ ಆಕೆ ಯ ದೇಹದಲ್ಲಿ 150 ಮಿಲಿ ಗ್ರಾಂನಷ್ಟು ವೀರ್ಯ ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ಪೋಷಕರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ವೈದ್ಯೆಯ ಹತ್ಯೆ ಖಂಡಿಸಿ ದೇಶಾದ್ಯಂತ ಬುಧ ವಾರವೂ ಪ್ರತಿಭಟನೆ ನಡೆದಿವೆ.

ನನಗೂ ಮಗಳಿದ್ದಾಳೆ - ಟಿಎಂಸಿ ಸಂಸದ: ಟಿಎಂಸಿ ಸಂಸದ ಸುಖೇಂದು ಶೇಖರ್‌ ರಾಯ್‌ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿದ್ದು, ವೈದ್ಯೆ ಸಾವಿಗೆ ನ್ಯಾಯ ಸಿಗಲು ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ನಾನು ಬೆಂಬಲ ಸೂಚಿಸುತ್ತೇನೆ. ನನಗೂ ಮಗಳು, ಪುಟ್ಟ ಮೊಮ್ಮಗಳು ಹಾಗೂ ಕುಟುಂಬ ಇದೆ. ಮಹಿಳೆ ವಿರುದ್ಧದ ಕ್ರೌರ್ಯ ನಿಲ್ಲಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next