ಎಫ್ಐಆರ್ ವಿಳಂಬ ಆರೋಪದ ಮೇರೆಗೆ ಅಭಿಜಿತ್‌ರನ್ನು ಬಂಧಿಸಲಾ ಗಿತ್ತು. ಅವರನ್ನು ಕೋರ್ಟ್‌ಗೆ ಹಾಜರುಪ ಡಿಸಿದ ವೇಳೆಯಲ್ಲಿ ಈ ಮೇಲ್ಕಂಡ ಆರೋಪಗಳನ್ನು ಅಧಿಕಾರಿಗಳು ಮಾಡಿ ದ್ದಾರೆ. 2ನೇ ಬಾರಿಗೆ ಶವ ಪರೀಕ್ಷೆಗೆ ಮನವಿ ಮಾಡಿದರೂ ಅಭಿಜಿತ್ ತರಾ ತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದ್ದರೆಂದು ಸಿಬಿಐ ಆರೋಪಿಸಿದೆ.
Advertisement
ಸಿಎಂ ಮನೆಯಲ್ಲಿ ಅಂತಿಮ ಮಾತುಕತೆಪ್ರತಿಭಟನನಿರತ ವೈದ್ಯರೊಂದಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕಡೆಯ ಸುತ್ತಿನ ಮಾತುಕತೆ ನಡೆ ಸಿದ್ದಾರೆ. ಈಗ ವೈದ್ಯರು ನೇರ ಪ್ರಸಾ ರದ ಬದಲಿಗೆ ಮಾತುಕತೆ ರೆಕಾರ್ಡ್ ಮಾಡುವುದರ ಜತೆಗೆ ಸಭೆಯ ಟಿಪ್ಪಣಿ ಸಿದ್ಧಪಡಿಸಿ ಸಹಿ ಹಾಕಿಕೊಡ ಬೇಕೆಂದು ಕೇಳಿದ್ದು, ಅದಕ್ಕೆ ಸಿಎಂ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆದಿದೆ.