Advertisement

38 ದಿನ ವೆಂಟಿಲೇಟರ್‌ನಲ್ಲಿ ಇದ್ದು ಕೋವಿಡ್-19 ಗೆದ್ದರು

12:52 AM May 10, 2020 | Sriram |

ಬರೋಬ್ಬರಿ 38 ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದು ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಕೋಲ್ಕತಾ ದಲ್ಲಿ ಚೇತರಿಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಮಾರಕ ವೈರಸ್‌ ಜತೆಗೆ ಹೋರಾಡಿ ಗೆದ್ದ ದೇಶದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಲ ರಾಜಧಾನಿ ಕೋಲ್ಕತಾದ ನಿತೈದಾಸ್‌ ಮುಖರ್ಜಿ (52) ಎಂಬುವರೇ ಈ ಹೆಗ್ಗಳಿಕೆ ಪಡೆದುಕೊಂಡವರು.

Advertisement

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ ಸಂದರ್ಭದಲ್ಲಿ ಅವರನ್ನು ಕುಟುಂಬಸ್ಥರು ಮತ್ತು ನೆರೆಹೊರೆ ಯವರು ಆತ್ಮೀಯವಾಗಿ ಬರಮಾಡಿಕೊಂಡರು. ಮಾ.29ರಂದು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅನಂತರ ಅವ ರಿಗೆ ಕೋವಿಡ್-19 ತಗುಲಿದ್ದು ದೃಢಪಟ್ಟಿತ್ತು. ವೈದ್ಯರೂ ಕೂಡ ಅವರು ಬದುಕುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ, ಅವರ ಬಗ್ಗೆ ವೈದ್ಯರು ವ್ಯಕ್ತಪಡಿಸಿದ್ದ ಅಭಿಪ್ರಾಯವೂ ಸುಳ್ಳಾಗಿದೆ.

3,320 ಪ್ರಕರಣ: ದೇಶದಲ್ಲಿ ಸೋಂಕಿತರ ಸಂಖ್ಯೆ ವೃದ್ಧಿಸಿದೆ. ಶುಕ್ರವಾರದಿಂದ ಶನಿವಾರದ ಅವಧಿ ಯಲ್ಲಿ 3,320 ಹೊಸ ಪ್ರಕರಣ ದಾಖಲಾಗಿದ್ದು, 95 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶೇ.70ರಷ್ಟು ಸಾವಿನ ಪ್ರಕರಣಗಳು ಕೊರೊನಾ ಜತೆಗೆ ಇತರ ಆರೋಗ್ಯ ಸಮಸ್ಯೆಯಿಂದ ಪ್ರಕರಣಗಳಿಂದ (ಕೊ ಮಾರ್ಬಿಡ್‌) ಆದದ್ದೇ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ. ಗುಣಮುಖರಾಗಿರುವವರ ಸಂಖ್ಯೆಯೂ 17, 846ಕ್ಕೆ ಏರಿಕೆಯಾಗಿ, ಅದರ ಪ್ರಮಾಣ ಶೇ.29.91 ಎಂದು ಅದು ತಿಳಿಸಿದೆ.

ಗುಜರಾತ್‌ಗೆ ಎಐಐಎಂಎಸ್‌ ತಂಡ
ಕೋವಿಡ್-19ದಿಂದ ತತ್ತರಿಸಿರುವ ಗುಜರಾತ್‌ ಅನ್ನು ಮರಳಿ ಹಳಿಗೆ ತರಲು, ಕೇಂದ್ರ ಸರ್ಕಾರವು ದೆಹಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂ ಎಸ್‌) ತಜ್ಞರ ಮೊರೆ ಹೋಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸೂಚನೆಯಂತೆ, ಎಐಐಎಂಎಸ್‌ನ ತಜ್ಞರ ತಂಡವು ವಾಯುದಳದ ವಿಶೇಷ ವಿಮಾನದಲ್ಲಿ ಗಾಂಧಿನಗರ ತಲು ಪಿದೆ. ಸಂಸ್ಥೆಯ ನಿರ್ದೇ ಶಕ ಡಾ| ರಣದೀಪ್‌ ಗುಲೇರಿಯಾ, ಡಾ| ಮನೀಶ್‌ ಸುರೇಜಾ ಅವರನ್ನೊಳಗೊಂಡ ತಂಡ ಯಾವ ಕಾರಣಕ್ಕಾಗಿ ಗುಜರಾತ್‌ನಲ್ಲಿ ಸೋಂಕು ಹೆಚ್ಚಳವಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next