ಕೋಲ್ಕತ್ತಾ: ಐಪಿಎಲ್ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ನೂತನ ನಾಯಕನನ್ನು ಹೆಸರಿಸಿದೆ. ಬೆನ್ನು ನೋವಿನಿಂದಾಗಿ ಈ ಬಾರಿಯ ಕೂಟಕ್ಕೆ ನಾಯಕ ಶ್ರೇಯಸ್ ಅಯ್ಯರ್ ಅಲಭ್ಯವಾಗುತ್ತಿರುವ ಕಾರಣ ಎಡಗೈ ಆಟಗಾರ ನಿತೀಶ್ ರಾಣಾ ಅವರನ್ನು ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಆಗಿ ಹೆಸರಿಸಲಾಗಿದೆ.
ಎಡಗೈ ಸ್ಪೋಟಕ ಬ್ಯಾಟರ್ ನಿತೀಶ್ ರಾಣಾ 2018 ರಿಂದ ಕೆಕೆಆರ್ ಫ್ರಾಂಚೈಸಿಯಲ್ಲಿದ್ದಾರೆ. ಎಲ್ಲಾ ಐದು ಸೀಸನ್ ಗಳಲ್ಲಿಯೂ 300ಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ್ದಾರೆ. 29 ವರ್ಷದ ಅವರು ಭಾರತೀಯ ದೇಶೀಯ ಸರ್ಕ್ಯೂಟ್‌ನಲ್ಲಿ ದೆಹಲಿ ತಂಡಗಳನ್ನು ಮುನ್ನಡೆಸಿದ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. 2021ರ ಜುಲೈ ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಎರಡು ಟಿ20 ಮತ್ತು ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಬಾರ್ಡರ್-ಗವಾಸ್ಕರ್ ಟೆಸ್ಟ್ ನಲ್ಲಿ ಅಯ್ಯರ್ ಬೆನ್ನುನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಎರಡು ಬಾರಿಯ ಐಪಿಎಲ್ ಚಾಂಪಿಯನ್ ತಂಡ ಹೊಸ ನಾಯಕನನ್ನು ಆಯ್ಕೆ ಮಾಡಿದೆ.
ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಮತ್ತು ಪ್ರಸ್ತುತ ನ್ಯೂಜಿಲೆಂಡ್ ಟೆಸ್ಟ್ ನಾಯಕ ಟಿಮ್ ಸೌಥಿ ಅವರ ಹೆಸರೂ ನಾಯಕತ್ವದ ರೇಸ್ ನಲ್ಲಿ ಕೇಳಿಬಂದಿತ್ತು,
Related Articles
ಕೆಕೆಆರ್ ತಂಡವು ಏಪ್ರಿಲ್ 1 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದೊಂದಿಗೆ ಈ ಬಾರಿಯ ಅಭಿಯಾನ ಆರಂಭಿಸಲಿದೆ.