Advertisement
25 ಮಂದಿ ಬಂಧನಬುಧವಾರ ರಾತ್ರಿ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ನಾವು ಸದ್ಯಕ್ಕೆ 25 ಮಂದಿಯನ್ನು ಬಂಧಿಸಿದ್ದೇವೆ. ನಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನೆಟಿಜನ್‌ಗಳು ಇನ್ನೂ ನಾಲ್ವರು ಶಂಕಿತರನ್ನು ಗುರುತಿಸಿದ್ದಾರೆ. ಉಳಿದ ಶಂಕಿತರ ಹುಡುಕಾಟ ನಡೆಯುತ್ತಿದೆ” ಎಂದು ಕೋಲ್ಕತಾ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಯಲ್ಲಿನ ದಾಂಧಲೆ ಕುರಿತು ಪ್ರತಿಕ್ರಿಯಿಸಿ “ಸಿಪಿಎಂ ಮತ್ತು ಬಿಜೆಪಿ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದು ನನಗೆ ತಿಳಿದಿದೆ .ಅವರು ರಾತ್ರಿ 12-1 ಗಂಟೆಗೆ ಅಲ್ಲಿಗೆ ಬಂದಿದ್ದು ಸಿಪಿಎಂ ಡಿವೈಎಫ್‌ಐ ಧ್ವಜಗಳನ್ನು, ಬಿಜೆಪಿ ರಾಷ್ಟ್ರ ಧ್ವಜಗಳನ್ನು ತೆಗೆದುಕೊಂಡು ಬಂದಿರುವುದು ವಿಡಿಯೋ ತೋರಿಸುತ್ತದೆ. ರಾಷ್ಟ್ರಧ್ವಜವನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಉನ್ನಾವ್, ಮಣಿಪುರದಲ್ಲಿ ಘಟನೆ ನಡೆದಾಗ ಬಿಜೆಪಿಯ ಎಷ್ಟು ತಂಡಗಳನ್ನು ಕಳುಹಿಸಲಾಗಿದೆ? ನಾವು ಚುನಾವಣೆಗೆ ಸ್ಪರ್ಧಿಸದೆ ಬಂದಿಲ್ಲ. ಸಿಪಿಎಂ ಮತ್ತು ಬಿಜೆಪಿ ನನಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ಕಿಡಿ ಕಾರಿದ್ದಾರೆ.
Related Articles
Advertisement
ಸುಕಾಂತ ಮಜುಂದಾರ್ ಕಿಡಿಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಮತ್ತು ಹಲವು ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಂದ್ರ ಸಚಿವ ಸುಕಾಂತ ಮಜುಂದಾರ್, ‘ಇಲ್ಲಿರುವವರೆಗೂ ಪೊಲೀಸರು ಯಾವುದೇ ಮಹಿಳೆಯನ್ನು ಬಂಧಿಸಿಲ್ಲ, ಯಾವುದೇ ಮಹಿಳೆಗೆ ತೊಂದರೆಯಾಗಲು ನಾವು ಬಿಡುವುದಿಲ್ಲ.ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ನಾವು ಟಿಎಂಸಿ ಪೊಲೀಸರಿಗೆ ಹೇಳಿದ್ದೇವೆ. ಮಮತಾ ಬ್ಯಾನರ್ಜಿ ರ‍್ಯಾಲಿಗೆ ಅನುಮತಿ ಬೇಕಾಗಿಲ್ಲ ಆದರೆ ಬಿಜೆಪಿಯವರು ಏನಾದರೂ ಮಾಡಲು ಹೋದಾಗ ಅನುಮತಿ ಬೇಕು, ಎಲ್ಲಾ ನಿಯಮಗಳು ಬಿಜೆಪಿಗೆ ಮಾತ್ರ .ಪೊಲೀಸ್ ಕಮಿಷನರ್ ವಿನೀತ್ ಕುಮಾರ್ ಗೋಯಲ್ ತತ್ ಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಅಂತಹ ವ್ಯಕ್ತಿ ಕೋಲ್ಕತಾ ಪೊಲೀಸ್ ಕಮಿಷನರ್ ಆಗಲು ಸಾಧ್ಯವಿಲ್ಲ, ಅವರು ಈ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಕಿಡಿ ಕಾರಿದ್ದಾರೆ.