ಕೋಲ್ಕತಾ: ಮನೆ, ಕಾರು ಹಾಗೂ ರಟ್ಟಿನ ಪೆಟ್ಟಿಗೆಯಲ್ಲಿ ಸುಮಾರು 8 ಕೋಟಿ ರೂಪಾಯಿ ನಗದನ್ನು ವಶಕ್ಕೆ ತೆಗೆದುಕೊಂಡ ಪ್ರಕರಣದಲ್ಲಿ ಪಶ್ಚಿಮಬಂಗಾಳದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇಮ್ರಾನ್ ಖಾನ್ ಗೆ 5 ವರ್ಷಗಳ ಕಾಲ ಸಾರ್ವಜನಿಕ ಕಚೇರಿಯಲ್ಲಿರುವುದಕ್ಕೆ ನಿಷೇಧ
ಪಶ್ಚಿಮಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಅಪಾರ್ಟ್ ಮೆಂಟ್ ವೊಂದರ ಬೆಡ್ ಕೆಳಗೆ ಅಡಗಿಸಿಟ್ಟ ರಟ್ಟಿನ ಬಾಕ್ಸ್ ಮತ್ತು ಕಾರಿನಲ್ಲಿ ಅಡಗಿಸಿ ಇಟ್ಟಿದ್ದ ಸುಮಾರು 8 ಕೋಟಿ ರೂಪಾಯಿಯಷ್ಟು ನಗದನ್ನು ವಶಪಡಿಸಿಕೊಂಡ ನಂತರ ಶೈಲೇಶ್ ಪಾಂಡೆ, ಅರವಿಂದ್ ಪಾಂಡೆ, ರೋಹಿತ್ ಪಾಂಡೆ ಹಾಗೂ ಒಬ್ಬ ಸಹಚರ ಸೇರಿದಂತೆ ನಾಲ್ವರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.
ಎಲ್ಲಾ ನಾಲ್ವರು ಆರೋಪಿಗಳನ್ನು ಇಂದು ಮಧ್ಯಾಹ್ನ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಪಶ್ಚಿಮಬಂಗಾಳದ ಹೌರಾ ಜಿಲ್ಲೆಯ ಅಪಾರ್ಟ್ ಮೆಂಟ್ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಪೊಲೀಸ್ ಅಧಿಕಾರಿಗಳು ಅಪಾರ್ಟ್ ಮೆಂಟ್ ಒಳಗೆ ಬಂದಾಗ, ಬೆಡ್ ಗಳ ಕೆಳಗೆ ಇಟ್ಟಿದ್ದ ಬಾಕ್ಸ್ ಗಳಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿತ್ತು. ಶೈಲೇಶ್ ಪಾಂಡೆ ಮತ್ತು ಅರವಿಂದ್ ಪಾಂಡೆ ಉದ್ಯಮಿಗಳಾಗಿದ್ದಾರೆ.
ಇಬ್ಬರು ಉದ್ಯಮಿಗಳು ಭಾರೀ ಪ್ರಮಾಣದ ಹಣದ ವಹಿವಾಟು ನಡೆಸಿರುವ ಬಗ್ಗೆ ಎರಡು ಬ್ಯಾಂಕ್ ಗಳು ಅಕ್ಟೋಬರ್ 14ರಂದು ಕೋಲ್ಕತಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು ಎಂದು ವರದಿ ತಿಳಿಸಿದೆ.